ಬೆಂಗಳೂರು: ಬಿಹಾರದಲ್ಲಿ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿರುವ ರಾಹುಲ್ ಗಾಂಧಿ ವೋಟ್ ಅಧಿಕಾರ ನಡೆಸುತ್ತಿದ್ದು ನಿನ್ನೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ ಪರಮೇಶ್ವರ್ ಸೇರಿದಂತೆ ಕೆಲ ಮಂತ್ರಿಗಳು, ವಿಧಾನ ಪರಿಷತ್ ಸದಸ್ಯರು ಪಾಲ್ಗೊಂಡಿದ್ದರು.
ಡಿಸಿಎಂ ಡಿಕೆ ಶಿವಕುಮಾರ್ ಗೈರು ಹಾಜರಿ ಎದ್ದುಕಾಣುತ್ತಿತ್ತು. ಅವರನ್ನು ಯಾಕೆ ಪ್ರತ್ಯೇಕಿಸಿದ್ದು ಅಂತ ಪರಮೇಶ್ವರ್ ಅವರನ್ನು ಕೇಳಿದರೆ, ಐಸೋಲೇಟ್ ಮಾಡುವ ಪ್ರಶ್ನೆಯೇ ಉದ್ಭವಿಸಲ್ಲ, ಅವರು ರಾಜ್ಯದ ಮುಖ್ಯಮಂತ್ರಿ ಅನ್ನೋದಕ್ಕಿಂತ ಹೆಚ್ಚಾಗಿ ಪಕ್ಷದ ರಾಜ್ಯಾಧ್ಯಕ್ಷರು, ಅವರು ಸಮರ್ಥರು ಮತ್ತು ರಾಜಕೀಯ ಜ್ಞಾನ ಚೆನ್ನಾಗಿದೆ, ಬೇರೆ ಯಾರೋ ಏನನ್ನೋ ಹೇಳಿದರೆ ನಾನು ಅದಕ್ಕೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದರು.
For More Updates Join our WhatsApp Group :