ಹೈದರಾಬಾದ್: ಬಿಆರ್ಎಸ್ ಪಕ್ಷದಿಂದ ಅಮಾನತುಗೊಂಡ ಬೆನ್ನಲ್ಲೇ, ಪಕ್ಷದ ಸಂಸ್ಥಾಪಕ ಹಾಗೂ ಮಾಜಿ ಸಿಎಂ ಕೆ.ಚಂದ್ರಶೇಖರ್ ರಾವ್ ಅವರ ಮಗಳು ಕೆ. ಕವಿತಾ, ಇಂದು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ, ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.
ಕವಿತಾ ಪತ್ರಿಕಾ ಹೇಳಿಕೆಯಲ್ಲಿ, “ಅಮಾನತುಗೊಂಡ ಕ್ರಮ ನನ್ನ ಮನಸ್ಸಿಗೆ ನೋವುಂಟುಮಾಡಿದೆ. ಎಂಎಲ್ಸಿ ಸ್ಥಾನ ಹಾಗೂ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನನ್ನ ರಾಜೀನಾಮೆ ಪತ್ರವನ್ನು ಸಭಾಧ್ಯಕ್ಷರು ಮತ್ತು ಕೆಸಿಆರ್ ಅವರಿಗೆ ಕಳುಹಿಸುತ್ತಿದ್ದೇನೆ” ಎಂದು ತಿಳಿಸಿದ್ದಾರೆ.ಅವರು ಯಾವುದೇ ಪಕ್ಷಕ್ಕೆ ಸೇರುವುದಿಲ್ಲವೆಂದು ಸ್ಪಷ್ಟಪಡಿಸಿದ ಕವಿತಾ, ತೆಲಂಗಾಣ ಜಾಗೃತಿ ಸದಸ್ಯರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.
“ನಮ್ಮ ರಕ್ತ ಸಂಬಂಧ ಮುರಿಯುವುದಿಲ್ಲ” – ಕವಿತಾಕವಿತಾ ತಮ್ಮ ಕುಟುಂಬ ಸಂಬಂಧವನ್ನು ಸ್ಪಷ್ಟಪಡಿಸುತ್ತಾ,“ಕೆಸಿಆರ್ ಮತ್ತು ಕೆಟಿಆರ್ ನನ್ನ ಕುಟುಂಬ. ಪಕ್ಷದಿಂದ ಅಮಾನತುಗೊಳ್ಳುವ ಕಾರಣಕ್ಕೆ ಈ ಬಾಂಧವ್ಯ ಮುರಿಯುವುದಿಲ್ಲ. ಆದರೆ ಕೆಲವರು ವೈಯಕ್ತಿಕ ಹಾಗೂ ರಾಜಕೀಯ ಲಾಭಕ್ಕಾಗಿ ನಮ್ಮ ಕುಟುಂಬದ ಅವನತಿ ಬಯಸುತ್ತಿದ್ದಾರೆ ಎಂದು ಆರೋಪಿಸಿದರು.
ಹರೀಶ್ ರಾವ್ & ರೇವಂತ್ ರೆಡ್ಡಿ ವಿರುದ್ಧ ಟೀಕೆ
ಕವಿತಾ, ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮತ್ತು ಬಿಆರ್ಎಸ್ ನಾಯಕ ಹರೀಶ್ ರಾವ್ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ನಮ್ಮ ಕುಟುಂಬದ ನಾಶಕ್ಕಾಗಿ ಇಬ್ಬರೂ ಒಟ್ಟಾಗಿ ಕುತಂತ್ರ ನಡೆಸುತ್ತಿದ್ದಾರೆ. ಅಪ್ಪ (ಕೆಸಿಆರ್) ತಮ್ಮ ಸುತ್ತಲಿನ ಮುಖಂಡರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ನಾನು ನೇರವಾಗಿ ತಿಳಿಸಿದ್ದೇನೆ ಎಂದಿದ್ದಾರೆ.
ಕಾಲೇಶ್ವರಂ ಪ್ರಾಜೆಕ್ಟ್ ಆರಂಭವಾಗಿದ್ದಾಗ ಹರೀಶ್ ರಾವ್ ನೀರಾವರಿ ಮಂತ್ರಿಯಾಗಿದ್ದರು. ಆದರೆ ಪ್ರಕರಣಗಳಲ್ಲಿ ಅವರ ಹೆಸರು ಕೇಳಿಬರಲಿಲ್ಲ. ನಮ್ಮ ಕುಟುಂಬದವರ ಮೇಲೆ ಮಾತ್ರ ಪ್ರಕರಣ ದಾಖಲಾಗಿದ್ದು ಏಕೆ?” ಎಂದು ಪ್ರಶ್ನಿಸಿದ್ದಾರೆ.
For More Updates Join our WhatsApp Group :



