ಸಿಮ್ ಕಳೆದುಹೋದರೆ ಪಾನಿಕ್ ಆಗೋದೆ ಬೇಡ! ಈ ಸ್ಟೆಪ್ಸ್ ತಕ್ಷಣ ತೆಗೆದುಕೊಳ್ಳಿ.

ಬೆಂಗಳೂರು: ಫೋನ್ ಕಳೆದುಹೋದಾಗ ಬಹುಪಾಲು ಜನರು ಅದರೊಂದಿಗೆ ಸಿಮ್ ಕಾರ್ಡ್‌ ಕಳೆದುಹೋದ ಸಮಸ್ಯೆ ಎದುರಿಸುತ್ತಾರೆ. ಕೆಲವೊಮ್ಮೆ, ಕೇವಲ ಸಿಮ್ ಕಾರ್ಡ್‌ ಮಾತ್ರ ಮರೆತುಹೋಗುತ್ತೆ. ಆದರೆ, ಈ ಸಣ್ಣ ತೊಂದರೆ ಬೃಹತ್ ನಷ್ಟಕ್ಕೆ ಕಾರಣವಾಗಬಹುದು ಎಂಬುದು ಬಹುಮಂದಿಗೆ ಅರ್ಥವಾಗಲ್ಲ.

ನಿಮ್ಮ ಸಿಮ್ ಕಾರ್ಡ್ ಬ್ಯಾಂಕ್ ಖಾತೆ, ಆಧಾರ್, ಯುಪಿಐ, ಆನ್ಲೈನ್ ಪಾವತಿಗಳು, OTP ಸೇವೆಗಳ ಜೊತೆ ನೇರವಾಗಿ ಜೋಡಣೆ ಹೊಂದಿರುವ ಕಾರಣ, ಇದು ಸೈಬರ್ ಅಪರಾಧಿಗಳಿಗೆ ದಾರಿ ನೀಡುವ ಸಾಧ್ಯತೆ ಇದೆ.

ಸಿಮ್ ಕಳೆದುಹೋದ್ರೆ ತಕ್ಷಣ ಏನು ಮಾಡಬೇಕು?

  1.  ತಕ್ಷಣ ಸಿಮ್ ಅನ್ನು ಅಮಾನತುಗೊಳಿಸಿ
    ನಿಮ್ಮ ಜಿಯೋ ಸಿಮ್ ಅಥವಾ ಇತರೆ any carrier ಸೇವೆ ಸಿಗುವ ಹೋಮ್‌ಪೇಜ್ ಅಥವಾ ಅಪ್ಲಿಕೇಶನ್ ಮೂಲಕ ತಕ್ಷಣ ಸಿಮ್‌ ಲಾಸ್ ರಿಪೋರ್ಟ್ ಮಾಡಿ.
  2.  ಜಿಯೋ ಯೂಸರ್ಆಗಿದ್ದರೆ ಕರೆ ಮಾಡಿ – 1800-889-9999
    ಇದರಿಂದ ಕೂಡ ಕೂಡಲೇ ನಿಮ್ಮ ನಂಬರಿಗೆ ಸಂಬಂಧಿಸಿದ ಸೇವೆಗಳನ್ನು ಸ್ಥಗಿತಗೊಳಿಸಬಹುದು.
  3. ಅಧಿಕೃತ ವೆಬ್ಸೈಟ್ ಮೂಲಕ ಹೇಗೆ ಬ್ಲಾಕ್ ಮಾಡುವುದು?
    1. ಜಿಯೋ ಅಧಿಕೃತ ವೆಬ್‌ಸೈಟ್‌ಗೆ ಹೋಗಿ
    1. ಮೆನು ಬಾರ್‌ನಲ್ಲಿರುವ Support ಆಯ್ಕೆ ಮೇಲೆ ಕ್ಲಿಕ್ ಮಾಡಿ
    1. ಕೆಳಗೆ ಸ್ಕ್ರಾಲ್ ಮಾಡಿ > Lost SIM ಆಯ್ಕೆ ಮಾಡಿ
    1. ನಿಮ್ಮ ನಂಬರ್ ನಮೂದಿಸಿ > ಮುಂದುವರಿಸಿ ಕ್ಲಿಕ್ ಮಾಡಿ
    1. ಸೇವೆಯನ್ನು ಸ್ಥಗಿತಗೊಳಿಸಿ

ಸಿಮ್ ರಿಪ್ಲೇಸ್ ಮಾಡಬೇಕಾದ್ರೆ…

  • ಹತ್ತಿರದ ಜಿಯೋ ಶಾಪ್ಗೆ ಭೇಟಿ ನೀಡಿ
  • ನಿಮ್ಮ ಆಧಾರ್ ಕಾರ್ಡ್ ಅಥವಾ ಮಾನ್ಯ ಗುರುತಿನ ಪುರಾವೆ (POI) ಕೊಂಡೊಯ್ಯಿ
  • ₹50 ಶುಲ್ಕ ಪಾವತಿಸಿ ಸಿಮ್ ಬದಲಾಯಿಸಿ
  • ನಿಮ್ಮ ನಂಬರ್‌ನಲ್ಲಿ ಸಕ್ರಿಯ ರೀಚಾರ್ಜ್ ಪ್ಲಾನ್ ಇರಬೇಕು
  • ಸಿಮ್ ಬದಲಾವಣೆಯ ನಂತರ 24 ಗಂಟೆಗಳವರೆಗೆ SMS ಸೇವೆ ಲಭ್ಯವಿಲ್ಲ

ಉಪಯುಕ್ತ ಟಿಪ್ಸ್:

  • ನಿಮ್ಮ ಫೋನ್‌ ಲಾಕ್‌ನಲ್ಲಿ ಬಯೋಮೆಟ್ರಿಕ್ ಅಥವಾ ಪಿನ್ ಇರಲಿ
  • ಬ್ಯಾಂಕ್‌ಗಳು ಅಥವಾ UPI ಸೇವೆಗಳಿಗಾಗಿ ಪ್ರತ್ಯೇಕ ದ್ವಿತೀಯ ನಂಬರ್ ಬಳಸಿ
  • ನಂಬರ್ ಕಳೆದುಹೋದರೆ, ಸೈಬರ್ ಸೆಲ್ ಅಥವಾ ಪೋಲೀಸ್ನಲ್ಲಿ FIR ದಾಖಲಿಸಿಡಿ (ಆಪ್ಷನಲ್ ಆದರೆ ಸುರಕ್ಷಿತ)

For More Updates Join our WhatsApp Group:

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *