ಮಧ್ಯಪ್ರದೇಶ : ಆಸ್ಪತ್ರೆಯ ಕೈದಿ ವಾರ್ಡಿನಿಂದ ಪೊಲೀಸರ ರೈಫಲ್ ಕದ್ದುಕೊಂಡೇ ಪರಾರಿಯಾದ ಕೈದಿಯ ಘಟನೆ ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ ನಿದ್ದೆಗೆ ಜಾರಿದ್ದನ್ನು ಸದುಪಯೋಗಪಡಿಸಿಕೊಂಡ ಕೈದಿ, ಮೊದಲು ಅಧಿಕಾರಿಯ ಜೇಬಿನಿಂದ ಕೀ ಕದ್ದುಕೊಂಡು, ಗೇಟ್ ಲಾಕ್ ಮಾಡಿ, ನಂತರ ರೈಫಲ್‌ನ್ನು ತೆಗೆದುಕೊಂಡೇ ಸ್ಥಳದಿಂದ ಓಡಿಹೋದ. ಪರಾರಿಯಾಗಿರುವ ಕೈದಿಯನ್ನು ರವೀಂದ್ರ ಸಿಂಗ್ ಪರಿಹಾರ್ ಎಂದು ಗುರುತಿಸಲಾಗಿದ್ದು, ಇವನು ಈಗಾಗಲೇ ಪೊಲೀಸರ ಮೇಲೆ ಗುಂಡು ಹಾರಿಸಿದ ಪ್ರಕರಣ ಸೇರಿದಂತೆ ಅನೇಕ ಅಪರಾಧಗಳಲ್ಲಿ ತೊಡಗಿಸಿಕೊಂಡಿದ್ದಾನೆ.ಪೊಲೀಸರ ಪ್ರಕಾರ, ಆಸ್ಪತ್ರೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಎಸ್ಪಿ ಆಗಮ್ ಜೈನ್ ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ನಿರ್ಲಕ್ಷ್ಯ ತೋರಿದ ನಾಲ್ವರು ಕಾನ್ಸ್ಟೆಬಲ್‌ಗಳು — ರಾಕೇಶ್ ಅಹಿರ್ವಾರ್, ಹರಿಶ್ಚಂದ್ರ ಅಹಿರ್ವಾರ್, ಪಂಕಜ್ ತಿವಾರಿ ಮತ್ತು ಶಿವಂ ಶರ್ಮಾ — ಅಮಾನತುಗೊಂಡಿದ್ದಾರೆ.
ಕೈದಿಯನ್ನು ಹಿಡಿದುಕೊಡುವವರಿಗೆ 10,000 ರೂ. ಬಹುಮಾನ ಘೋಷಿಸಲಾಗಿದೆ. ಕೆಲವೇ ದಿನಗಳ ಹಿಂದೆ ಇದೇ ಅಪರಾಧಿಗೆ 30,000 ರೂ. ಬಹುಮಾನ ಘೋಷಿಸಲಾಗಿತ್ತು. ನಂತರ ನಡೆದ ಎನ್ಕೌಂಟರ್ ನಂತರ ಬಂಧಿಸಲ್ಪಟ್ಟಿದ್ದ ಈತ ಇದೀಗ ಮತ್ತೆ ಪರಾರಿಯಾಗಿದ್ದಾನೆ.
For More Updates Join our WhatsApp Group :




