ಗದಗದಲ್ಲಿ ಭೀಕರ ಅಪ*ತ: ಹಸೆಮಣೆ ಏರಬೇಕಿದ್ದ ಇಬ್ಬರು ಕಾನ್ಸ್ಟೇಬಲ್‌ ಸೇರಿ ಮೂವರು ಸಾ*!

ಗದಗದಲ್ಲಿ ಭೀಕರ ಅಪ*ತ: ಹಸೆಮಣೆ ಏರಬೇಕಿದ್ದ ಇಬ್ಬರು ಕಾನ್ಸ್ಟೇಬಲ್ ಸೇರಿ ಮೂವರು ಸಾ*!

ಗದಗ: ಗದಗ ತಾಲೂಕಿನ ಹರ್ಲಾಪುರ ಸಮೀಪದ ರಾಷ್ಟ್ರೀಯ ಹೆದ್ದಾರಿ 67 ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ, ಇಬ್ಬರು ಯುವ ಪೊಲೀಸ್ ಕಾನ್ಸ್ಟೇಬಲ್ಗಳು ಹಾಗೂ ಒಬ್ಬರು ಅವರ ಸಂಬಂಧಿ ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರನ್ನು ಅರ್ಜುನ್ ನೆಲ್ಲೂರ (29), ವೀರೇಶ್ ಉಪ್ಪಾರ (31) ಮತ್ತು ಅರ್ಜುನ್ ಅವರ ಚಿಕ್ಕಪ್ಪ ರವಿ ನೆಲ್ಲೂರ (43) ಎಂದು ಗುರುತಿಸಲಾಗಿದೆ.

ಅತಿವೇಗವೇ ಅಪಘಾತಕ್ಕೆ ಕಾರಣ?

ಮೃತರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಾರು ಚಾಲಕನ ನಿಯಂತ್ರಣ ತಪ್ಪಿ, ಡಿವೈಡರ್‌ಗೆ ಡಿಕ್ಕಿ ಹೊಡೆದು, ನಂತರ ಎದುರಿನಿಂದ ಬರುವ ಗೋವಾ ಬಸ್ಗೆ ತೀವ್ರವಾಗಿ ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಾಶವಾಗಿ, ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಸಾಕ್ಷಿಯಾಗಿ ಬಸ್ ಚಾಲಕ – ನಿರ್ವಾಹಕ

ಅಪಘಾತದ ಸಾಕ್ಷಿಯಾದ ಗೋವಾ ಬಸ್ ಚಾಲಕ ದಿಲೀಪ್ ಮತ್ತು ನಿರ್ವಾಹಕ ಹೀರೇಶ ಟಿವಿ9ಗೆ ಹೇಳಿಕೆ ನೀಡಿದ್ದು, “ಅದು ಫುಟ್ಬಾಲ್ ತ್ರಾಸಿ ಹೊಡೆಯುವಂತಿತ್ತು. ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಏರಳಿ ಬಸ್‌ಗೆ ಬಡಿದು ಬಿತ್ತು. ನಾವು ತಕ್ಷಣ ಕೆಳಗೆ ಇಳಿದು ನೋಡಿದಾಗ, ಕಾರಿನಲ್ಲಿದ್ದ ಎಲ್ಲರೂ ಮೃತಪಟ್ಟಿದ್ದರು” ಎಂದಿದ್ದಾರೆ.

ಹಸೆಮಣೆ ಏರಬೇಕಿದ್ದವರ ದಾರುಣ ಅಂತ್ಯ

ಇದರಲ್ಲೇ ಇನ್ನೊಂದು ದುಃಖದ ವಿಷಯವೆಂದರೆ, ಮೃತರಾದ ಅರ್ಜುನ್ ಮತ್ತು ವೀರೇಶ್ ಇಬ್ಬರು ಕೂಡ ವಿವಾಹಿತರಾಗಬೇಕಿದ್ದವರು. ಅವರ ಮದುವೆಗೆ ದಿನಗಣನೆ ಮಾತ್ರ ಉಳಿದಿತ್ತು.

  • ಅರ್ಜುನ್ ನೆಲ್ಲೂರ – ಹಾವೇರಿ ಜಿಲ್ಲಾ ಪೊಲೀಸ್ ವೈರ್ಲೆಸ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು.
  • ವೀರೇಶ್ ಉಪ್ಪಾರ – ಕೊಪ್ಪಳ ಜಿಲ್ಲೆಯಲ್ಲಿ ಪೊಲೀಸ್ ವೈರ್ಲೆಸ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
  • ಅರ್ಜುನ್ ಟಿವಿ9 ಆಯೋಜಿಸಿದ್ದ ಪೋಲಿಸ್ ಸೆಲ್ಯೂಟ್ ಪ್ರಶಸ್ತಿಗೆ ಭಾಜನರಾಗಿದ್ದರು.

ಪೊಲೀಸ್ ಇಲಾಖೆಯವರಿಗೆ ಹಾಗೂ ಕುಟುಂಬಗಳಿಗೆ ಗಾಢ ಸಂತಾಪ

ಇಂತಹ ಯುವ ಮತ್ತು ಸಮರ್ಪಿತ ಅಧಿಕಾರಿಗಳ ಅಕಾಲಿಕ ಮರಣ ಪೊಲೀಸ್ ಇಲಾಖೆಗೆ ತುಂಬಲಾರದ ನಷ್ಟ. ಅವರ ಕುಟುಂಬ, ಬಂಧುಗಳು ಈ ದುಃಖದ ಘಟನೆಯನ್ನು ಸಹಿಸುವ ಶಕ್ತಿಯನ್ನು ಪಡೆದಿರಲಿ ಎಂದು ನಾಡು ಪ್ರಾರ್ಥಿಸುತ್ತಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

 

Leave a Reply

Your email address will not be published. Required fields are marked *