ನೆಲಮಂಗಲ: ನೆಲಮಂಗಲ ತಾಲೂಕಿನ ಮಾದಾವಾರ ಗ್ರಾಮದ ನಿವಾಸಿಗಳು ತೀವ್ರ ಆತಂಕದಲ್ಲಿದ್ದಾರೆ. ಕೇವಲ ಎರಡು ವರ್ಷಗಳ ಹಿಂದೆಯೇ ನಿರ್ಮಾಣಗೊಂಡ ಮೂರು ಅಂತಸ್ತಿನ ಕಟ್ಟಡವೊಂದು ಬಿರುಕಿನಿಂದ ಕೂಡಿದ್ದು, ರಾತ್ರೋರಾತ್ರಿ ವಾಲಿರುವ ಘಟನೆ ಸ್ಥಳೀಯರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಎಲ್ಲಿ, ಯಾರಿಗೆ ಸೇರಿದ್ದು?
ಕಟ್ಟಡವು ಮಾದನಾಯಕನಹಳ್ಳಿಯ ಗಾರೆ ಸೀನಪ್ಪ ಅವರಿಗೆ ಸೇರಿದದ್ದು. ಹೊಸದಾಗಿ ನಿರ್ಮಿಸಿದರೂ ಕೂಡಾ ಬಿರುಕುಗಳು ಬೀಳುತ್ತಿದ್ದಿದ್ದು, ಇದೀಗ ಸಂಪೂರ್ಣವಾಗಿ ವಾಲಿರುವ ಸ್ಥಿತಿ ನಿರ್ಮಾಣವಾಗಿದೆ.
ಬಾಡಿಗೆದಾರರು ಭೀತಿಯಿಂದ ಸ್ಥಳ ಖಾಲಿ!
ಇತಿಮಧ್ಯೆ ಕಟ್ಟಡದಲ್ಲಿ ವಾಸವಿದ್ದ ಬಾಡಿಗೆದಾರರು ತಕ್ಷಣ ಸ್ಥಳವನ್ನು ಖಾಲಿ ಮಾಡಿದ್ದಾರೆ. ಯಾವುದೇ ಪ್ರಾಣಹಾನಿ ಸಂಭವಿಸದಿದ್ದರೂ, ಭವಿಷ್ಯದಲ್ಲಿ ಸಂಭವಿಸಬಹುದಾದ ಅಪಾಯದಿಂದ ತಪ್ಪಿಸಿಕೊಳ್ಳಲು ಎಚ್ಚರಿಕೆಯ ಕ್ರಮ ಕೈಗೊಂಡಿದ್ದಾರೆ.
ಅದು ತಾಂತ್ರಿಕ ದೋಷವೇ? ಪ್ರಾಮಾಣಿಕ ತನಿಖೆ ಅಗತ್ಯ
ಈ ಘಟನೆಯಿಂದ ಅದು ನಿರ್ಮಾಣ ದೋಷವೇ ಅಥವಾ ಭೂ ಸಮತಟ್ಟಣೆಯ ಸಮಸ್ಯೆಯೇ? ಎಂಬ ಪ್ರಶ್ನೆ ಉದ್ಭವವಾಗಿದೆ. ಸ್ಥಳೀಯರು ಕಟ್ಟಡದ ಭದ್ರತೆ ಕುರಿತು ಶಂಕೆ ವ್ಯಕ್ತಪಡಿಸುತ್ತಿದ್ದು, ಸ್ಪಷ್ಟ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.
For More Updates Join our WhatsApp Group :




