ಬೆಂಗಳೂರು: ರಾಜಕೀಯ ವಿಚಾರಗಳಲ್ಲಿ ತೊಡಗಿಸಿಕೊಳ್ಳಬೇಕು, ಹಾಗೂ ಅದರ ಬಗ್ಗೆ ಅಧ್ಯಯನ ಮಾಡಬೇಕು ಎನ್ನುವವರು ಮೊದಲು ಈ ಕೋರ್ಸ್ ಮಾಡಿದ್ರೆ ಇನ್ನೂ ಉತ್ತಮ. ಭವಿಷ್ಯದಲ್ಲಿ ರಾಜಕಾರಣಕ್ಕೆ ಬರುವವರಿಗೆ ಹಾಗೂ ರಾಜಕೀಯದಲ್ಲಿ ಆಸಕ್ತಿಯುಳ್ಳವವರಿಗೆ ಸುವರ್ಣ ಅವಕಾಶವೊಂದನ್ನು ಸರ್ಕಾರ ನೀಡುತ್ತಿದೆ. ಬೆಂಗಳೂರಿನಲ್ಲಿ ರಾಜಕೀಯ ಪದವಿ ಕಾಲೇಜು ಆರಂಭಿಸಲು ಸರ್ಕಾರ ಮುಂದಾಗಿದ್ದು, 2026 ಜೂನ್ನಲ್ಲಿ ಬೆಂಗಳೂರಿನಲ್ಲಿ ರಾಜಕೀಯ ಪದವಿ ಕಾಲೇಜು ಆರಂಭಿಸಲಾಗುವುದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಂಗಳವಾರ (ಅ.14) ಹೇಳಿದ್ದಾರೆ.
ಈ ರಾಜಕೀಯ ಪದವಿ ಮೂರು ವರ್ಷಗಳ ಕೋರ್ಸ್ ಆಗಿದ್ದು, ಇದರ ಪಠ್ಯಕ್ರಮವು ರಾಜಕೀಯ ನೀತಿ ಸಂಹಿತೆ ಮತ್ತು ಸಿದ್ಧಾಂತವನ್ನು ಒಳಗೊಂಡಿರುತ್ತದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಇನ್ನು ಇದರ ಪಠ್ಯಕ್ರಮವನ್ನು ಸಿದ್ಧಪಡಿಸುವಾಗ ನಿವೃತ್ತ ಪ್ರಾಧ್ಯಾಪಕರು, ಹಿರಿಯ ರಾಜಕಾರಣಿಗಳು ಮತ್ತು ರಾಜಕೀಯದ ಬಗ್ಗೆ ಜ್ಞಾನವಿರುವ ಸಾರ್ವಜನಿಕರ ಸಲಹೆಯನ್ನು ಪಡೆಯಲಾಗುವುದು. ಇನ್ನು ಒಂದು ತಿಂಗಳಲ್ಲಿ ಇದರ ಬಗ್ಗೆ ಸಂಪೂರ್ಣ ಚಿತ್ರಣ ಹೊರಬರಲಿದೆ ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರೊಂದಿಗೆ ಚರ್ಚೆ ನಡೆಸಲಾಗಿದ್ದು, ಈ ವಿಚಾರದ ಬಗ್ಗೆ ಮುಖ್ಯಮಂತ್ರಿಗಳ ಮುಂದೆ ಇಡಲಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೂಡ ಯೋಜಿತ ಕಾಲೇಜಿಗೆ ಅನುದಾನ ನೀಡುವ ಭರವಸೆ ನೀಡಿದ್ದಾರೆ.ಇದೇ ವೇಳೆ ರಾಜ್ಯದಲ್ಲಿ 29,000 ಶಿಕ್ಷಕರ ಹುದ್ದೆಗಳು ಖಾಲಿ ಇವೆ. 1,900 ಪ್ರಾಥಮಿಕ ಶಾಲೆಗಳಲ್ಲಿ 10 ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ಅಧಿಕಾರದಲ್ಲಿರುವವರ ನಿರ್ಧಾರಗಳಿಂದಾಗಿ ಕನ್ನಡ ಮಾಧ್ಯಮ ಶಾಲೆಗಳು ದುರ್ಬಲವಾಗುತ್ತಿವೆ ಎಂದು ಹೇಳಿದ್ದಾರೆ.
For More Updates Join our WhatsApp Group :




