ವಿವಿ ಎಚ್ಚೆತ್ತು, ಅಂಕಪಟ್ಟಿಗಳನ್ನು ಕಳೆವದ ಮೊದಲು ಪೋಸ್ಟ್ ಮಾಡಲಿರುವ ತೀರ್ಮಾನ.

ವಿವಿ ಎಚ್ಚೆತ್ತು, ಅಂಕಪಟ್ಟಿಗಳನ್ನು ಕಳೆವದ ಮೊದಲು ಪೋಸ್ಟ್ ಮಾಡಲಿರುವ ತೀರ್ಮಾನ.

ಬಳ್ಳಾರಿಎಲ್ಲರೂ ಡಿಗ್ರಿ ಪರೀಕ್ಷೆ ಮುಗಿಸಿ, ಫಲಿತಾಂಶ ಬಂದ ಮೇಲೆ ಮಾರ್ಕ್ಸ್ ಕಾರ್ಡ್​​  ಪಡೆಯುತ್ತಾರೆ. ಆದರೆ ಬಳ್ಳಾರಿಯ ವಿಎಸ್​ಕೆ ವಿವಿ ಅಡಿಯಲ್ಲಿ ಬರುವ 80 ಕಾಲೇಜುಗಳ ವಿದ್ಯಾರ್ಥಿಗಳ ಅಂಕ ಪಟ್ಟಿ ಮಾತ್ರ ವಿಶ್ವವಿದ್ಯಾಲಯದಲ್ಲೇ ಕೊಳೆಯುತ್ತಿವೆ. 6 ತಿಂಗಳಿಂದ ಮಾರ್ಕ್ಸ್ ಕಾರ್ಡ್​ಗಳನ್ನ ತೆಗೆದುಕೊಂಡು ಹೊಗಲು ಯಾರು ಬಂದಿಲ್ಲ. ಇಂತಹದೊಂದು ಘಟನೆಗೆ ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಸಾಕ್ಷಿಯಾಗಿದೆ.

ವಿಎಸ್ ಕೆ ವಿವಿ ಅಡಿ ಬಳ್ಳಾರಿ, ವಿಜಯನಗರ, ಕೊಪ್ಪಳ‌ ಹಾಗೂ ರಾಯಚೂರು ಜಿಲ್ಲೆಯ ಕಾಲೇಜು ಸೇರಿ ಒಟ್ಟು 80 ಕಾಲೇಜುಗಳು ಬರುತ್ತವೆ. ಸುಮಾರು 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಓದುತ್ತಿದ್ದಾರೆ.‌ ತಾಂತ್ರಿಕ ಕಾರಣದಿಂದ ಎರಡು ಸೆಮಿಸ್ಟರ್ ಮಾರ್ಕ್ ಕಾರ್ಡ್ಗಳು ಬಂದಿರಲಿಲ್ಲ. ಕಳೆದ ಆರು ತಿಂಗಳ ಹಿಂದೆ ಎಲ್ಲ ಮಾರ್ಕ್ಸ್ ಕಾರ್ಡ್ಗಳು ಬಂದಿದ್ದು, ವಿವಿಯ ಪರೀಕ್ಷಾಂಗ ವಿಭಾಗದಲ್ಲಿವೆ.

ನಿಯಮದ ಪ್ರಕಾರ ಆಯಾ ಕಾಲೇಜಿನ ಪ್ರಾಂಶುಪಾಲರು ಅಥವಾ ಸಿಬ್ಬಂದಿ ಬಂದು ಈ ಮಾರ್ಕ್ಸ್ ಕಾರ್ಡ್ ಗಳನ್ನ ತೆಗೆದುಕೊಂಡು ಹೋಗಿ, ವಿದ್ಯಾರ್ಥಿಗಳಿಗೆ ವಿತರಣೆ ಮಾಡಬೇಕು. ‌ದುರಂತ ಅಂದರೆ 6 ತಿಂಗಳಿಂದ ಈ ಮಾರ್ಕ್ಸ್ ಕಾರ್ಡ್​​ಗಳನ್ನ ತೆಗೆದುಕೊಂಡು ಹೊಗಲು ಯಾರು ಬಂದಿಲ್ಲ.

ಇನ್ನು ಮಾರ್ಕ್ಸ್ ಕಾರ್ಡ್​​ಗಳನ್ನ ತೆಗೆದುಕೊಂಡು ಹೊಗ್ರಪ್ಪಾ ಅಂತಾ ವಿವಿಯಿಂದ ಮೂರು ಬಾರಿ ಸುತ್ತೋಲೆ ಹೊರಡಿಸಲಾಗಿದೆ. ಅಲ್ಲದೇ ಎರಡು ಬಾರಿ ಪ್ರಾಂಶುಪಾಲರ ಸಭೆ ಮಾಡಲಾಗಿದೆ. ಹೀಗಿದ್ದರೂ ನಿರ್ಲಕ್ಷ್ಯ ಮಾಡಲಾಗಿದೆ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮಾರ್ಕ್ಸ್ ಕಾರ್ಡ್ಗಳನ್ನ ಕೇಳಿದರೆ ಇನ್ನೂ ವಿವಿಯಿಂದ ಬಂದಿಲ್ಲ ಅಂತಾ ವಿವಿ ಮೇಲೆ ಹಾಕುತ್ತಿದ್ದಾರಂತೆ ಕಾಲೇಜು ಆಡಳಿತ ಮಂಡಳಿ. ಹೀಗಾಗಿ ವಿವಿಗೆ ಕೆಟ್ಟ ಹೆಸರು ಬರುತ್ತಿದ್ದು, ಅದನ್ನ ತಪ್ಪಿಸೋದಕ್ಕೆ 70 ಸಾವಿರ ಮಾರ್ಕ್ಸ್ ಕಾರ್ಡ್ಗಳನ್ನ ಆಯಾ ಕಾಲೇಜಿಗೆ ಪೋಸ್ಟ್ ಮಾಡಲು ವಿವಿ ತಯಾರಿ ನಡೆಸಿರುವುದಾಗಿ ಮೌಲ್ಯ ಮಾಪನ ಕುಲಸಚಿವ ಎನ್ ಎಂ ಸಾಲಿ ಹೇಳಿದ್ದಾರೆ.

ಒಟ್ಟಾರೆ ಮಾರ್ಕ್ಸ್ ಕಾರ್ಡ್​ಗಳ ವಿಚಾರದಲ್ಲಿ ಕಾಲೇಜುಗಳ ಪ್ರಾಂಶುಪಾಲರ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು, ಈಗಲಾದರೂ ಎಚ್ಚೆತ್ತು ಸರಿಯಾಗಿ ವಿದ್ಯಾರ್ಥಿಗಳಿಗೆ ವಿತರಿಸಬೇಕಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *