ಬೆಳಗಾವಿ: ಆತ ಪೊಲೀಸ್ ಕಾನ್ಸ್ಟೇಬಲ್ ಆಕೆ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ,ಪ್ರೀತಿಸಿ ಮದ್ವೆಯಾದವ್ರಿಗೆ ಒಬ್ಬ ಮುದ್ದಾದ ಮಗನೂ ಇದ್ದ. ಆದ್ರೆ, ದುಶ್ಚಟಗಳ ದಾಸನಾದ ಗಂಡ ಕೊಡಬಾರದ ಕಾಟ ಕೊಡ್ತಿದ್ದ. ಹೀಗಾಗಿ ಗಂಡನಿಂದ ದೂರವಾಗುತ್ತಿದ್ದಂತೆಯೇ ಇಳಿ ಸಂಜೆ ಹೊತ್ತಲ್ಲಿ ಅಟ್ಟಹಾಸ ಮೆರೆದಿದ್ದಾನೆ. ಹೌದು..ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಾಕೆ ಗಂಡ ಬುದ್ದಿ ಕಲಿಲ್ಲ ಎಂದು ವಿಚ್ಛೇಧನ ಪಡೆದು ತನ್ನಷ್ಟಕ್ಕೆ ತಾನು ಬದುಕುತ್ತಿದ್ದಳು. ಆದ್ರೆ ಒಂಟಿಯಾಗಿ ಬದುಕು ಕಟ್ಟಿಕೊಳ್ಳುತ್ತಿದ್ದವಳು ಭೀಕರವಾಗಿ ಹತ್ಯೆಯಾಗಿ ಹೋಗಿದ್ದಾಳೆ. ಅಷ್ಟಕ್ಕೂ ಆಕೆಯೆ ಹೆಸರು ಕಾಶಮ್ಮಾ ನೆಲ್ಲಿಗಣಿ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ನಿವಾಸಿಯಾಗಿದ್ದ ಈಕೆ ಬರ್ಬರವಾಗಿ ಹತ್ಯೆಯಾಗಿ ಹೋಗಿದ್ದಾರೆ.
ಬಸ್ ಕಂಡೆಕ್ಟರ್ ಆಗಿ ಕೆಲಸ ಮಾಡ್ತಿದ್ದ ಈಕೆ ತನ್ನೂರು ಬಿಟ್ಟು ಸವದತ್ತಿ ಪಟ್ಟಣದ ರಾಮಸೈಟ್ ನಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದಳು. ಅಕ್ಟೋಬರ್ 13ರಂದು ಕೆಲಸ ಮುಗಿಸಿ ಮನೆಗೆ ಬಂದಾಕೆ ವಾಪಾಸ್ ಹೋಗಿರಲಿಲ್ಲ. ಇದಾದ ಬಳಿಕ ಇಂದು ಬೆಳಗ್ಗೆ ಮನೆಯಿಂದ ದುರ್ವಾಸನೆ ಬರಲಾರಂಭಿಸಿತ್ತು, ಇದನ್ನ ಗಮನಿಸಿದ ಅಕ್ಕ ಪಕ್ಕದ ಜನರು ಕೂಡಲೇ ಸವದತ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದು ನೋಡಿದ ಪೊಲೀಸರು ಕಾಶಮ್ಮ ಬರ್ಬರವಾಗಿ ಕೊಲೆಯಾಗಿದ್ದಳು. ಸತ್ತು ನಾಲ್ಕು ದಿನದ ಬಳಿಕ ಗೊತ್ತಾಗಿದ್ದು ಕೂಡಲೇ ಆಕೆಯ ಹೆತ್ತವರಿಗೆ ಸುದ್ದಿ ಮುಟ್ಟಿಸಿ ಸ್ಥಳಕ್ಕೆ ಕರೆಯಿಸಿಕೊಂಡಿದ್ದರು.
ಅಷ್ಟಕ್ಕೂ ಇಲ್ಲಿ ಕಾಶಮ್ಮ ಮನೆಯವರ ವಿರೋಧದ ನಡುವೆ 13ವರ್ಷದ ಹಿಂದೆ ಕಾಗವಾಡ ತಾಲೂಕಿನ ಬನಜವಾಡ ಗ್ರಾಮದ ಸಂತೋಷ್ ಕಾಂಬಳೆ ಎಂಬಾತನ ಪ್ರೀತಿಸಿ ಮದುವೆಯಾಗಿದ್ದಳು. ಇನ್ನೂ ಗಂಡ ಪೊಲೀಸ್ ಪೇದೆಯಾಗಿ ಕೆಲಸ ಮಾಡ್ತಿದ್ರೇ ಹತ್ತು ವರ್ಷದ ಹಿಂದೆ ಈಕೆಯೂ ಕಂಡೆಕ್ಟರ್ ನೌಕರಿ ಮಾಡುತ್ತಿದ್ದಳು. ಆದ್ರೆ ಕೆಲ ವರ್ಷಗಳ ಬಳಿಕ ಇಬ್ಬರ ನಡುವೆ ಸಣ್ಣ ಪುಟ್ಟ ವಿಚಾರಕ್ಕೆ ಮನಸ್ತಾಪ ಶುರುವಾಗಿತ್ತು. ಅದರಲ್ಲೂ ಪತ್ನಿ ಕಾಶಮ್ಮಳ ಮೇಲೆ ಗಂಡ ಸಂತೋಷ್ ಸಂಶಯ ಪಡಲಾರಂಭಿಸಿದ್ದ, ಇದೇ ವಿಚಾರಕ್ಕೆ ಆಕೆಗೆ ಕಿರುಕುಳ ಕೂಡ ನೀಡುತ್ತಿದ್ದ. ಇದರಿಂದ ರೋಷಿ ಹೋಗಿದ್ದ ಕಾಶಮ್ಮ ಈತನ ಸಹವಾಸ ಬೇಡ ಎಂದು ಬಿಟ್ಟು ತವರು ಮನೆ ಸೇರಿದ್ದಳು. ಜೊತೆಗೆ ಸವದತ್ತಿ ಬಸ್ ಡಿಪೋಗೆ ವರ್ಗಾವಣೆ ಕೂಡ ಮಾಡಿಸಿಕೊಂಡು ಇಲ್ಲಿಯೇ ನೌಕರಿ ಶುರು ಮಾಡಿದ್ದಳು.
For More Updates Join our WhatsApp Group :




