ಶಾಲಾ ಮಕ್ಕಳ ಸುರಕ್ಷತೆಗೆ ನೂತನ ಹೆಜ್ಜೆ: ಅಮೆರಿಕ–ಸಿಂಗಾಪುರ್ ಮಾದರಿಯಲ್ಲಿ ಭಾರತದಲ್ಲಿ RFID ಟ್ರ್ಯಾಕಿಂಗ್ ಸಿಸ್ಟಂ ಯೋಜನೆ.

ಶಾಲಾ ಮಕ್ಕಳ ಸುರಕ್ಷತೆಗೆ ನೂತನ ಹೆಜ್ಜೆ: ಅಮೆರಿಕ–ಸಿಂಗಾಪುರ್ ಮಾದರಿಯಲ್ಲಿ ಭಾರತದಲ್ಲಿ RFID ಟ್ರ್ಯಾಕಿಂಗ್ ಸಿಸ್ಟಂ ಯೋಜನೆ

ನವದೆಹಲಿ: ಕೆಲವೇ ಪ್ರತಿಷ್ಠಿತ ಶಾಲೆಗಳಲ್ಲಿ ಇರುವಂತಹ, ಹಾಗೂ ಅಮೆರಿಕ, ಸಿಂಗಾಪುರ್, ಚೀನಾದಂತಹ ದೇಶಗಳಲ್ಲಿ ಇರುವಂತಹ ರೀತಿಯ ಟ್ರ್ಯಾಕಿಂಗ್ ಸಿಸ್ಟಂಗಳನ್ನು ಎಲ್ಲಾ ಶಾಲೆಗಳಲ್ಲೂ ಭಾರತದಲ್ಲಿ ತರಲು ಸರ್ಕಾರ ಯೋಜಿಸುತ್ತಿದೆ. ಶಾಲಾ ಮಕ್ಕಳ ಸುರಕ್ಷತೆಗೆ ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ರೇಡಿಯೋ ಫ್ರೀಕ್ವೆನ್ಸಿ ಐಡಿ ಆಧಾರಿತವಾದ ಟ್ರ್ಯಾಕಿಂಗ್ ಸಿಸ್ಟಂ ಅನ್ನು ಅಳವಡಿಸಬಹುದು ಎಂದು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ. ಈ ಬಗ್ಗೆ ಮಿಂಟ್ ಪತ್ರಿಕೆಯಲ್ಲಿ ವರದಿಯೊಂದು ಪ್ರಕಟವಾಗಿದ್ದು, ಈ ಯೋಜನೆ ಜಾರಿಗೆ ಬಂದರೆ, ಮಕ್ಕಳ ಸುರಕ್ಷತೆಯನ್ನು ಪೋಷಕರು ಮತ್ತು ಶಾಲೆಗಳು ಖಚಿತಪಡಿಸಿಕೊಳ್ಳಬಹುದಾದಂತಹ ವ್ಯವಸ್ಥೆ ಏರ್ಪಡಲಿದೆ.

ಈ ವರದಿ ಪ್ರಕಾರ, ಮಕ್ಕಳನ್ನು ರಿಯಲ್ ಟೈಮ್​ನಲ್ಲಿ ಟ್ರ್ಯಾಕ್ ಮಾಡಲು ಸಾಧ್ಯವಾಗುವಂತಹ ಮಾದರಿ ವ್ಯವಸ್ಥೆಯನ್ನು ಬಿಐಎಸ್ ಅಥವಾ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಅಭಿವೃದ್ಧಿಪಡಿಸುತ್ತಿದೆ. ಶಾಲಾ ಬಸ್ಸುಗಳಲ್ಲಿ ಮಕ್ಕಳ ಸುರಕ್ಷತೆಯನ್ನು ಹೇಗೆ ಖಚಿತಪಡಿಸಬಹುದು ಎಂದು ಇದೇ ಬಿಐಎಸ್ ಒಂದು ರಿಸರ್ಚ್ ಪ್ರಾಜೆಕ್ಟ್ ಕೈಗೊಳ್ಳುತ್ತಿದೆ.

ಬೇರೆ ಕೆಲ ದೇಶಗಳಲ್ಲಿ ಬಳಕೆಯಾಗುತ್ತಿರುವ ಆರ್​​ಎಫ್​ಐಡಿ ಮತ್ತು ಜಿಪಿಎಸ್ ತಂತ್ರಜ್ಞಾನಗಳನ್ನು ಬಳಸಿ ಶಾಲಾ ಬಸ್ಸುಗಳನ್ನು ಟ್ರ್ಯಾಕ್ ಮಾಡುವ ವ್ಯವಸ್ಥೆ ಇದೆ. ಈ ಮಾದರಿಯನ್ನು ಭಾರತದಲ್ಲಿ ತರುವ ಬಗ್ಗೆ ಬಿಐಎಸ್ ತನ್ನ ರಿಸರ್ಚ್ ಪ್ರಾಜೆಕ್ಟ್​ನಲ್ಲಿ ಅವಲೋಕಿಸಲಿದೆ.

ಹೇಗೆ ಇರಲಿದೆ ಆರ್​ಎಫ್​ಐಡಿ ವ್ಯವಸ್ಥೆ?

ಮಕ್ಕಳಿಗೆ ರೇಡಿಯೋ ಫ್ರೀಕ್ವೆನ್ಸಿ ಐಡಿ ಟ್ಯಾಗ್​ಗಳನ್ನು ನೀಡಲಾಗುತ್ತದೆ. ಶಾಲಾ ಬಸ್ಸುಗಳಲ್ಲಿ ಆರ್​ಎಫ್​ಐಡಿ ರೀಡರ್​ಗಳನ್ನು ಇಡಲಾಗುತ್ತದೆ. ಇದರ ಜೊತೆಗೆ ಜಿಪಿಎಸ್, ಜಿಎಸ್​ಎಂ ಕಮ್ಯೂನಿಕೇಶನ್ ಮಾಡ್ಯೂಲ್, ಮತ್ತು ಐಪಿ ಆಧಾರಿತ ಕ್ಯಾಮೆರಾಗಳನ್ನೂ ಬಸ್ಸುಗಳಲ್ಲಿ ಅಳವಡಿಸಲಾಗಿರುತ್ತದೆ.

ಮಗು ಬಸ್ಸು ಹತ್ತಿದಾಗ ಆರ್​ಎಫ್​ಐಡಿ ಟ್ಯಾಗ್ ಮೂಲಕ ಟ್ರ್ಯಾಕ್ ಆಗತೊಡಗುತ್ತದೆ. ಮಗು ಬಸ್ಸಿನಿಂದ ಕೆಳಗಿಳಿದಾಗಲೂ ಅದು ದಾಖಲಾಗುತ್ತದೆ. ಮಗು ಬಸ್ಸನ್ನು ಎಲ್ಲಿ ಹತ್ತಿದ್ದು, ಎಲ್ಲಿ ಇಳಿದಿದ್ದು ಎಂಬುದೆಲ್ಲವೂ ರಿಯಲ್ ಟೈಮ್​ನಲ್ಲಿ ದಾಖಲಾಗುತ್ತದೆ. ಮಗುವಿನ ಪೋಷಕರು ಇದನ್ನು ರಿಯಲ್ ಟೈಮ್​ನಲ್ಲಿ ನೋಡಬಹುದು. ಶಾಲಾ ಆಡಳಿತವೂ ಕೂಡ ಎಲ್ಲಾ ಶಾಲಾ ಬಸ್ಸುಗಳಲ್ಲಿನ ಮಕ್ಕಳ ಚಲನವಲನಗಳನ್ನು ರಿಯಲ್ ಟೈಮ್​ನಲ್ಲಿ ನೋಡಬಹುದು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *