ಚಾಮರಾಜನಗರದಲ್ಲಿ ಅಂಬೇಡ್ಕರ್ ಭಾವಚಿತ್ರ ಹರಿದು, ಬುದ್ಧನ ಪ್ರತಿಮೆ ಧ್ವಂಸ: ‘ಪೆಂಡಾಲ್ ಮಂಜ’ ಅರೆಸ್ಟ್!

ಚಾಮರಾಜನಗರದಲ್ಲಿ ಅಂಬೇಡ್ಕರ್ ಭಾವಚಿತ್ರ ಹರಿದು, ಬುದ್ಧನ ಪ್ರತಿಮೆ ಧ್ವಂಸ: ‘ಪೆಂಡಾಲ್ ಮಂಜ’ ಅರೆಸ್ಟ್!

ಚಾಮರಾಜನಗರ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ​ ಭಾವಚಿತ್ರ ಹರಿದುಹಾಕಿ ಬುದ್ಧನ ಪ್ರತಿಮೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿ ಮಂಜುನಾಥ್ ಅಲಿಯಾಸ್ ಪೆಂಡಾಲ್ ಮಂಜ ಎಂಬಾತನನ್ನು ಚಾಮರಾಜನಗರ ಪೂರ್ವ ಠಾಣಾ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಅಕ್ಟೋಬರ್ 23ರಂದು ಜ್ಯೋತಿಗೌಡನಪುರದಲ್ಲಿ ಘಟನೆ ನಡೆದಿತ್ತು.

60 ಸಾವಿರ ರೂ ದಂಡ

ಆರೋಪಿ ಮಂಜುನಾಥ್ ಅಲಿಯಾಸ್ ಪೆಂಡಾಲ್ ಮಂಜ, ಎರಡು ತಿಂಗಳ ಹಿಂದೆ ದಲಿತ ಮಹಿಳೆಗೆ ಚಪ್ಪಲಿಯಿಂದ ಹೊಡೆದಿದ್ದ. ಆಗ ಊರಿನ ಯಜಮಾನರು ತಪ್ಪಿಗಾಗಿ 60 ಸಾವಿರ ರೂ ದಂಡ ವಿಧಿಸಿದ್ದರು. ದಂಡದ ಹಣ ಪಾವತಿಸಲು ಮಂಜುನಾಥ್​ ತನ್ನ ಬೈಕ್ ಅಡವಿಟ್ಟಿದ್ದ. ಸದ್ಯ ಮಂಜುನಾಥ್​ನನ್ನು​ ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಚಾಮರಾಜನಗರ ತಾಲ್ಲೂಕಿನ ತಾಲೂಕಿನ ಜ್ಯೋತಿಗೌಡನಪುರ ಗ್ರಾಮದಲ್ಲಿ‌ ಅಕ್ಟೋಬರ್ 23ರಂದು ಗ್ರಾಮದ ಮೂರು ಕಡೆ ಯಾರು ಕಿಡಿಗೇಡಿಗಳು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಹರಿದು ಬುದ್ದನ ವಿಗ್ರಹ ಧ್ವಂಸಗೊಳಿಸಿದ್ದರು. ಈ ಘಟನೆ ಸಾರ್ವಜನಿಕ ವಲಯದಲ್ಲಿಆಕ್ರೋಶಕ್ಕೆ ಕಾರಣವಾಗಿತ್ತು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿತ್ತು.

ಇನ್ನು ಇತ್ತೀಚೆಗೆ ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹಾಗೂ ಸ್ಥಳೀಯ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ವಿವರ ಪಡೆದುಕೊಂಡಿದ್ದರು. ಬಳಿಕ ಪ್ರತಿಭಟನಾಕಾರರ ಮನವಿ ಆಲಿಸಿದ್ದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *