ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ಕರ್ಮಕಾಂಡಗಳು ಒಂದೊಂದಾಗಿ ಹೊರಬರುತ್ತಿವೆ. ಐಷಾರಾಮಿ ಬದುಕಿನ ಒಂದೊಂದೇ ಕರಾಳತೆ ಬಯಲಾಗುತ್ತಿದೆ. ಈ ಬೆನ್ನಲ್ಲೇ ಗೃಹ ಇಲಾಖೆ ಅಲರ್ಟ್ ಆಗಿದೆ. ಇಬ್ಬರು ಜೈಲಧಿಕಾರಿಗಳ ತಲೆದಂಡವಾಗಿದೆ. ಇದೀಗ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ವಿಚಾರವಾಗಿ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಮೂರು ಎನ್ಸಿಆರ್ ಮತ್ತು ಒಂದು ಎಫ್ಐಆರ್ ದಾಖಲಾಗಿದೆ. ಜೊತೆಗೆ ಎನ್ಐಎ ಎಂಟ್ರಿ ಆಗಿದೆ.
ವಿಕೃತ ಕಾಮಿ, ನಟೋರಿಯಸ್ ರೌಡಿಶೀಟರ್ಗಳು, ಅಷ್ಟೇ ಯಾಕೆ ಮೋಸ್ಟ್ ವಾಂಟೆಡ್ ಉಗ್ರಗಾಮಿಗಳು ಪರಪ್ಪನ ಅಗ್ರಹಾರ ಜೈಲಿಗೆ ಯಾವುದೋ ರೆಸಾರ್ಟ್ಗೆ ಬಂದಂತಿದ್ದಾರೆ. ಹೈಪ್ರೊಫೈಲ್ ಕೇಸ್ಗಳ ಆರೋಪಿಗಳು, ಅಪರಾಧಿಗಳು ಶಿಕ್ಷೆ ಸನುಭವಿಸುತ್ತಿರುವ ಈ ಜೈಲು ಕ್ರಿಮಿನಲ್ಗಳ ಪಾಲಿಗೆ ಸ್ವರ್ಗ. ಅದಕ್ಕೆ ಸಾಕ್ಷಿಯಾಗಿ ಕೈದಿಗಳು ಮೋಜು ಮಸ್ತಿ ಮಾಡುತ್ತಿದ್ದ ಸಾಲು ಸಾಲು ವಿಡಿಯೋಗಳು ರಾಜ್ಯದ ಜನರನ್ನು ಬೆಚ್ಚಿಬೀಳಿಸಿವೆ.
ಒಟ್ಟು ನಾಲ್ಕು ಪ್ರಕರಣಗಳ ದಾಖಲು
ಜೈಲಿನಲ್ಲಿ ಕೈದಿಗಳು ಡ್ಯಾನ್ಸ್ ವಿಡಿಯೋ ವೈರಲ್ ಹಿನ್ನೆಲೆ ಈವರೆಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಒಟ್ಟು ನಾಲ್ಕು ದೂರು ನೀಡಲಾಗಿದೆ. ಈ ಪೈಕಿ ಮೂರು ಎನ್ಸಿ ಆರ್ ದಾಖಲಾದರೆ, ಒಂದು ಎಫ್ಐಆರ್ ದಾಖಲಾಗಿದೆ.
ಇಂದು ಸಸ್ಪೆಂಡ್ ಆಗಿರುವ ಜೈಲಿನ ಅಧೀಕ್ಷಕ ಮ್ಯಾಗೇರಿ ಅವರಿಂದಲೇ ದೂರು ನೀಡಲಾಗಿದೆ. ಅವರ ದೂರಿನ ಮೇರೆಗೆ ಜೈಲಿನಲ್ಲಿ ತಟ್ಟೆ, ಡ್ರಮ್ ಬಾರಿಸಿ ಡ್ಯಾನ್ಸ್ ಮಾಡಿದ್ದ ಸಜಾ ಬಂಧಿ ಪ್ಯಾಟ್ರಿಕ್ ಟೀಮ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಎನ್ಸಿಆರ್ ಪ್ರಕರಣಗಳನ್ನ ಪೊಲೀಸರು ಎಫ್ಐಆರ್ ಮಾಡಿಕೊಳ್ಳಲಿದ್ದಾರೆ. ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಸದ್ಯ ತನಿಖೆ ನಡೆಸುತ್ತಿದ್ದಾರೆ.
For More Updates Join our WhatsApp Group :
