ನೆಲಮಂಗಲ: ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಬೆಂಗಳೂರಲ್ಲಿ ಜಿಬಿಎ ಕಠಿಣ ಕ್ರಮಕ್ಕೆ ಮುಂದಾಗಿದೆ. ಕಸ ಎಸೆಯುವವರ ಮನೆ ಮುಂದೆ ಲೋಡ್ಗಟ್ಟಲೆ ಕಸ ತಂದು ಸುರಿದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಜೊತೆಗೆ ದಂಡವನ್ನೂ ವಿಧಿಸುವ ಕೆಲಸ ಮಾಡುತ್ತಿದೆ. ಆದ್ರೆ ಬೆಂಗಳೂರು ಗ್ರಾಮಾಂತರದ ನೆಲಮಂಗಲದಲ್ಲಿ ಈ ಮಾದರಿ ಉಲ್ಟಾ ಆಗಿದೆ. ಎಲ್ಲೆಂದರಲ್ಲಿ ತ್ಯಾಜ್ಯ ಸುರಿದಿದ್ದಕ್ಕೆ ಪಂಚಾಯತ್ ಕಚೇರಿ ಮುಂದೆಯೇ ಕಸ ತಂದು ಸುರಿದು ಜನ ಪಾಠ ಕಲಿಸಿದ್ದಾರೆ.
ಸೋಪುರ ಕೈಗಾರಿಕಾ ಪ್ರದೇಶದಲ್ಲಿ ಸಂಗ್ರಹವಾಗುವ ಕಸವನ್ನ ಸ್ಮಶಾನದಲ್ಲಿ ಸುರಿದ ಪಂಚಾಯತ್ ನಡೆಗೆ ಸಿಡಿದೆದ್ದ ಸಾರ್ವಜನಿಕರು, ಮನೆಗಳಲ್ಲಿ ಸಂಗ್ರಹ ಮಾಡುವ ಕಸವನ್ನು ಕಚೇರಿ ಮುಂದೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಮಶಾನದಲ್ಲಿ ಕಸ ಹಾಕಲು ಸೂಚನೆ ನೀಡಿದ್ದ ಪಿಡಿಓ ವಿರುದ್ಧ ಕಿಡಿ ಕಾರಿದ್ದಾರೆ.
For More Updates Join our WhatsApp Group :
