ಸೂಪರ್ ಸ್ಟಾರ್ ಉಪೇಂದ್ರ ಅವರು ತೆಲುಗು ಸಿನಿಮಾ ‘ಆಂಧ್ರ ಕಿಂಗ್ ತಾಲ್ಲೂಕ’ (ಎಕೆಟಿ)ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿಶೇಷವೆಂದರೆ ಉಪೇಂದ್ರ ಈ ಸಿನಿಮಾನಲ್ಲಿ ಸೂಪರ್ ಸ್ಟಾರ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ನಾಯಕ ರಾಮ್ ಚರಣ್, ಅಭಿಮಾನಿಯ ಪಾತ್ರದಲ್ಲಿ ನಟಿಸಿದ್ದಾರೆ. ಇದು ಒಬ್ಬ ಅಭಿಮಾನಿ ಮತ್ತು ಸೂಪರ್ ಸ್ಟಾರ್ ನಡುವೆ ನಡೆಯುವ ಕತೆಯನ್ನು ಒಳಗೊಂಡಿದೆ. ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರ ಕಾರ್ಯ ಚಾಲ್ತಿಯಲ್ಲಿದೆ. ಇತ್ತೀಚೆಗಷ್ಟೆ ಸಿನಿಮಾ ತಂಡ ಬೆಂಗಳೂರಿಗೆ ಬಂದಿತ್ತು. ಈ ವೇಳೆ ಉಪೇಂದ್ರ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದರು.
‘ಈ ಸಿನಿಮಾನಲ್ಲಿ ನಾನೋ ಅಥವಾ ರಾಮ್ ಅವರೋ ನಾಯಕ ಅಲ್ಲ. ಈ ಸಿನಿಮಾಕ್ಕೆ ನಾಯಕ ನೀವುಗಳು. ಏಕೆಂದರೆ ಇದು ಅಭಿಮಾನಿಗಳ ಸಿನಿಮಾ, ಅಭಿಮಾನಿಗಳಿಗಾಗಿ ಮಾಡಿದ ಸಿನಿಮಾ. ಈ ಸಿನಿಮಾ ನೋಡಿ ಹೊರಬರುವಾಗ ನೀವೆಲ್ಲ ಕಾಲರ್ ಮೇಲಕ್ಕೇರಿಸಿಕೊಂಡು ಬರುವುದು ಪಕ್ಕಾ. ಇದೊಂದು ಪಕ್ಕಾ ಕಮರ್ಶಿಯಲ್ ಸಿನಿಮಾ. ಇದರಲ್ಲಿ ಹಾಡುಗಳಿವೆ, ಡ್ಯಾನ್ಸ್ ಇದೆ, ಫೈಟ್ಸ್ ಇದೆ, ಲವ್ ಇದೆ ಎಲ್ಲವೂ ಹೊಂದಿರುವ ಪಕ್ಕಾ ಪ್ಯಾಕೇಜ್ ಈ ಸಿನಿಮಾ’ ಎಂದರು ಉಪ್ಪಿ.
‘ಈ ಸಿನಿಮಾ ಒಪ್ಪಿಕೊಳ್ಳಲು ಸಹ ನೀವುಗಳೇ (ಅಭಿಮಾನಿಗಳು) ಕಾರಣ. ನಿಮ್ಮಿಂದಲೇ ನಾವುಗಳು. ಈ ಸಿನಿಮಾನಲ್ಲಿ ಎಲ್ಲ ಅಭಿಮಾನಿಗಳನ್ನು ರಾಮ್ ಪೋತಿನೇನಿ ಪ್ರತಿನಿಧಿಸಿದ್ದಾರೆ. ಅಭಿಮಾನಿಯ ಮನಸ್ಥಿತಿಯನ್ನು ಅವರು ತೋರಿಸಿಕೊಟ್ಟಿದ್ದಾರೆ. ನಾನು ಇಲ್ಲಿ ಎಲ್ಲ ಸ್ಟಾರ್ ನಟರನ್ನು ಪ್ರತಿನಿಧಿಸಿದ್ದೇನೆ. ಇದು ಅಭಿಮಾನಿ ಹಾಗೂ ಸ್ಟಾರ್ ನಟನ ನಡುವಿನ ಬಂಧದ ಕತೆ’ ಎಂದರು ಉಪೇಂದ್ರ.
For More Updates Join our WhatsApp Group :




