“ಡೆಪ್ಯೂಟಿ CM ಡಿಕೆಶಿ ಬಣದ ತಂತ್ರಕ್ಕೆ CM ಬಣದಿಂದ ಪ್ರತಿತಂತ್ರ:ಸಿದ್ದರಾಮಯ್ಯ ತಂಡದ ಹೊಸ ಪ್ಲ್ಯಾನ್ ಏನು?”

 “ಡೆಪ್ಯೂಟಿ CM ಡಿಕೆಶಿ ಬಣದ ತಂತ್ರಕ್ಕೆ CM ಬಣದಿಂದ ಪ್ರತಿತಂತ್ರ:ಸಿದ್ದರಾಮಯ್ಯ ತಂಡದ ಹೊಸ ಪ್ಲ್ಯಾನ್ ಏನು?”

ಬೆಂಗಳೂರು: ಡಿಸಿಎಂ ಡಿಕೆಶಿ ಬಣ ದೆಹಲಿಗೆ ಭೇಟಿ ನೀಡಿರುವ ಹಿನ್ನಲೆ ಸಿದ್ದರಾಮಯ್ಯ ಅಪ್ತ ಬಣದಿಂದಲೂ ಪ್ರತಿತಂತ್ರ ರೆಡಿಯಾಗಿದೆ. ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ನಡೆದ ಡಿನ್ನರ್ ಮೀಟಿಂಗ್​ನಲ್ಲಿ ಈ ವಿಷಯ ಪ್ರಸ್ತಾಪವಾಗಿದ್ದು, ದೆಹಲಿಗೆ ಹೋದ್ರೆ ಹೈಕಮಾಂಡ್‌ ಮನ್ನಣೆ ಕೊಡುವುದಿಲ್ಲ.

 ಗುಂಪುಗಾರಿಕೆಗೆ ಪಕ್ಷದ ಹೈಕಮಾಂಡ್ ಪ್ರಾಮುಖ್ಯತೆ ನೀಡದ ಕಾರಣ, ಹೈಕಮಾಂಡ್ ನಾಯಕರಿಗೆ ರಾಜ್ಯದ ಪರಿಸ್ಥಿತಿಯನ್ನು ವಿವರಿಸೋಣ. ಅವರೇ ಇಲ್ಲಿಗೆ ಬರುವಂತೆ ಮನವಿ ಮಾಡೋಣ ಎಂದು ಡಿನ್ನರ್​ ಮೀಟಿಂಗ್​​ನಲ್ಲಿ​ ಸಿಎಂ ಸಿದ್ದರಾಮಯ್ಯ ಆಪ್ತರು ಹೇಳಿದ್ದಾರೆ. ಪಕ್ಷದಲ್ಲಿರುವ ಗೊಂದಲಕ್ಕೆ ಹೈಕಮಾಂಡ್​ ಶೀಘ್ರ ತೆರೆ ಎಳೆಯಬೇಕು. ಇಲ್ಲದಿದ್ರೆ ಪಕ್ಷಕ್ಕೆ ಇನ್ನಷ್ಟು ಡ್ಯಾಮೇಜ್ ಆಗುತ್ತೆ. ಇನ್ನೂ 6-7 ತಿಂಗಳು ಅಂತಾ ವಿಳಂಬ ಮಾಡಿದರೆ ಕಷ್ಟ. ಹೀಗಾಗಿ ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಬೇಕೆಂದು ಸಭೆಯಲ್ಲಿ ಚರ್ಚೆಯಾಗಿದೆ ಎನ್ನಲಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *