ಬೆಂಗಳೂರು : ಬೆಂಗಳೂರಿನಲ್ಲಿ ವಾತಾರವಣ ತುಂಬಾ ಬದಲಾವಣೆ ಆಗಿದೆ. ಚಳಿ ಶುರುವಾಗಿದೆ . ಇನ್ನು ಈ ವೀಕೆಂಡ್ನಲ್ಲಿ ಜನರ ಚಳಿಗೆ ಹೊರಗೆ ಬರಲೇ ಇಲ್ಲ. ಇದೀಗ ಈ ವಾತಾವರಣದ ಬಗ್ಗೆ ಪೋಸ್ಟ್ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶನಿವಾರದಂದು (ನ.29) ಬೆಂಗಳೂರಿನಲ್ಲಿ ದಾಖಲೆಯ ಚಳಿಯ ವಾತಾವರಣ ಇತ್ತು. ತಾಪಮಾನ 21.6 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿತ್ತು. ಚಳಿಯಿಂದ ಜನರ ಹೊರಗೆ ಬರಲು ಮನಸ್ಸೇ ಮಾಡಿಲ್ಲ. ಈ ಹವಮಾನದ ನಡುವೆ ಮಹಿಳೆಯೊಬ್ಬರು ಸೆರೆ ಹಿಡಿದಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಶನಿವಾರದಂದು ಬೆಳಿಗ್ಗಿನ ಹೊತ್ತು ಮೋಡದಿಂದ ಇಡೀ ವಾತಾವರಣ ಕತ್ತಲಾಗಿತ್ತು. ಇದು ಬೆಂಗಳೂರಿನ ಇತಿಹಾಸದಲ್ಲೇ ಮೊದಲು ಎಂದು ಹೇಳಲಾಗಿದೆ.
ಇನ್ನು ಈ ದಶ್ಯವನ್ನು ನೋಡಿ, “ಬೆಂಗಳೂರು ಫ್ರಿಡ್ಜ್ ಒಳಗೆ” ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಬೆಂಗಳೂರಿನ ತೇವ, ಶೀತ ವಾತಾವರಣ ಹೇಗಿದೆ ಎಂಬುದನ್ನು ಈ ಪೋಸ್ಟ್ನಲ್ಲಿ ನೋಡಬಹುದು. ರಾಜಶ್ರೀ ಭುಯಾನ್ ಎಂಬ ಮಹಿಳೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. “ಇಡೀ ನಗರ ಮೂರು ನಾಲ್ಕು ದಿನದಿಂದ ಚಳಿಯಿಂದ ನಡುಗುತ್ತಿದೆ. ಇದರ ಮಧ್ಯೆ ಇಂದು (ಶನಿವಾರ) ಬೆಂಗಳೂರಿನ ವಾತಾರವರಣ ಕಂಡು ಬಂದದ್ದು ಹೀಗೆ” ಎಂದು ಹೇಳಿದ್ದಾರೆ. ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಗರಿಷ್ಠ ತಾಪಮಾನವು 23 ರಿಂದ 24 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಆದರೆ ಶನಿವಾರ ಮಾತ್ರ ಈ ರೀತಿಯ ವಾತಾವರಣ ಸೃಷ್ಟಿಯಾಗಿದೆ. ಇದು ಇದೇ ಮೊದಲು ನೋಡುವುದು ಎಂದು ಹೇಳಿದ್ದಾರೆ.
For More Updates Join our WhatsApp Group :




