ಮುಂಬೈ: ಪತ್ನಿ ಹಾಗೂ ಅಪ್ರಾಪ್ತ ಮಗಳ ಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈನ ದಹಿಸರ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಹನುಮಂತ್ ಸೋನ್ವಾಲ್ ಎಂಬುವವರು 14 ವರ್ಷದ ಮಗಳು ಪ್ರಿಯಾಂಶಿ ಮೇಲೆ ಹಲ್ಲೆ ನಡೆಸಿದ್ದಾರೆ. ಗಾಯ ಎಷ್ಟು ಆಳವಾಗಿತ್ತೆಂದರೆ ಕುತ್ತಿಗೆಗೆ ಐದು ಹೊಲಿಗೆಗಳನ್ನು ಹಾಕಲಾಗಿದೆ. ಆಕೆಯ ಹೇಳಿಕೆಯ ಆಧಾರದ ಮೇಲೆ, ಪೊಲೀಸರು ಕೊಲೆ ಯತ್ನ ಪ್ರಕರಣವನ್ನು ದಾಖಲಿಸಿಕೊಂಡು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಸೋನ್ವಾಲ್‌ನನ್ನು ಡಿಸೆಂಬರ್ 3 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಪ್ರಿಯಾಂಶಿ ತನ್ನ ಹೆತ್ತವರಾದ ರಾಜಶ್ರೀ ಮತ್ತು ಹನುಮಂತ್ ಜೊತೆ ದಹಿಸರ್‌ನಲ್ಲಿ ವಾಸವಿದ್ದಾಳೆ.ರಾಜಶ್ರೀ ವಜ್ರ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಸೋನ್ವಾಲ್ ಕೀಟ ನಿಯಂತ್ರಣ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ.ನಿರಂತರ ಕೌಟುಂಬಿಕ ಹಿಂಸೆ ಮತ್ತು ಕಿರುಕುಳದಿಂದಾಗಿ ರಾಜಶ್ರೀ ಈಗಾಗಲೇ ಬಾಂದ್ರಾ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿಯನ್ನು ಸಲ್ಲಿಸಿದ್ದರು .
ತನ್ನ ತಂದೆ ಹೆಚ್ಚಾಗಿ ತನ್ನ ತಾಯಿಯ ಮೇಲೆ ದೈಹಿಕವಾಗಿ ಹಲ್ಲೆ ಮಾಡುತ್ತಿದ್ದರು, ಕುಡಿದಾಗ ಅವರು ಮನುಷ್ಯರೇ ಆಗಿರುತ್ತಿರಲಿಲ್ಲ. ಶನಿವಾರ, ರಾಜಶ್ರೀ ಮತ್ತು ಪ್ರಿಯಾಂಶಿ ಹುಟ್ಟುಹಬ್ಬವನ್ನು ಆಚರಿಸಲು ರೆಸ್ಟೋರೆಂಟ್ಗೆ ತೆರಳಿದ್ದರು. ಸೋನ್ವಾಲ್ ಅವರನ್ನು ಮನೆಯಲ್ಲಿಯೇ ಬಿಟ್ಟು ಹೋಗಿದ್ದರು. ಅವರಿಬ್ಬರು ಹಿಂದಿರುಗಿದ ಬಳಿಕ ನಿಂದಿಸಿದ್ದಾರೆ.ವಿಚ್ಛೇದನದ ಕುರಿತು ವಕೀಲರನ್ನು ಸಂಪರ್ಕಿಸಲು ರಾಜಶ್ರೀ ನಲಸೋಪಾರಕ್ಕೆ ಹೋದರು.
ಅವರು ಮನೆಗೆ ಹಿಂದಿರುಗಿದಾಗ, ಮತ್ತೊಂದು ಬಿಸಿ ವಾಗ್ವಾದ ನಡೆಯಿತು. ಘರ್ಷಣೆಯ ಸಮಯದಲ್ಲಿ, ರಾಜಶ್ರೀ ಅವರು ತಮ್ಮ ಮನೆಯನ್ನು ಮಾರಿ ಪ್ರಿಯಾಂಶಿಯೊಂದಿಗೆ ಪುಣೆಗೆ ಸ್ಥಳಾಂತರಗೊಳ್ಳಲು ಉದ್ದೇಶಿಸಿರುವುದಾಗಿ ಸೋನ್ವಾಲ್‌ಗೆ ತಿಳಿಸಿರುವುದಾಗಿ ವರದಿಯಾಗಿದೆ.
For More Updates Join our WhatsApp Group :
