15 ವರ್ಷ ಕಿರಿಯ ಗೇಬ್ರಿಯೆಲಾ ಜೊತೆ ಹೊಸ ಅಧ್ಯಾಯ.
ಬಾಲಿವುಡ್ ನಟ ಅರ್ಜುನ್ ರಾಮ್ಪಾಲ್ ಅವರು ಗೇಬ್ರಿಯೆಲಾ ಡೆಮೆಟ್ರಿಯಾಡ್ಸ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ರಿಯಾ ಚಕ್ರವರ್ತಿ ಪಾಡ್ಕಾಸ್ಟ್ನಲ್ಲಿ ಈ ವಿಷಯವನ್ನು ಖಚಿತಪಡಿಸಲಾಗಿದೆ. 15 ವರ್ಷಗಳ ವಯಸ್ಸಿನ ಅಂತರವಿದ್ದರೂ, ಇವರ ಆರು ವರ್ಷಗಳ ಸಂಬಂಧ ಪ್ರೀತಿಗೆ ಅಡ್ಡಿಯಾಗಿಲ್ಲ. ಸದ್ಯಕ್ಕೆ ವಿವಾಹವಾಗಿಲ್ಲ ಎಂದೂ ಸ್ಪಷ್ಟಪಡಿಸಲಾಗಿದೆ.
ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದ ಅರ್ಜುನ್ ರಾಮ್ಪಾಲ್ ಅವರು ಈಗ ವೈಯಕ್ತಿಕ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಬಾಲಿವುಡ್ನ ಬ್ಲಾಕ್ಬಸ್ಟರ್ ಚಿತ್ರ ‘ಧುರಂಧರ್’ ಸಿನಿಮಾದಲ್ಲಿ ಅವರು ನಟಿಸಿದ್ದರು. ಈ ಚಿತ್ರ ಹಿಟ್ ಆದ ಬಳಿಕ ಅವರು ಒಂದು ಖುಷಿ ಸುದ್ದಿ ಹಂಚಿಕೊಂಡಿದ್ದಾರೆ. ನಟ ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ಅವರ ಪಾಡ್ಕಾಸ್ಟ್ನಲ್ಲಿ ಈ ವಿಷಯವನ್ನು ಅವರು ಖಚಿತಪಡಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಅರ್ಜುನ್ ರಾಮ್ಪಾಲ್ ಅವರು ಕಳೆದ ಆರು ವರ್ಷಗಳಿಂದ ಗೇಬ್ರಿಯೆಲಾ ಡೆಮೆಟ್ರಿಯಾಡ್ಸ್ ಜೊತೆ ಸುತ್ತಾಡುತ್ತಿದ್ದರು. ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ವಿಷಯವನ್ನು ಅರ್ಜುನ್ ಖಚಿತಪಡಿಸಿದ್ದಾರೆ. ಈ ಶೋನ ಟೀಸರ್ನ ರಿಯಾ ಹಂಚಿಕೊಂಡಿದ್ದಾರೆ. ಇದರಲ್ಲಿ ಇಬ್ಬರೂ ನಿಶ್ಚಿತಾರ್ಥದ ವಿಷ ಖಚಿಪಡಿಸಿದ್ದಾರೆ. ಆದರೆ, ಇನ್ನೂ ವಿವಾಹ ಆಗಿಲ್ಲ ಎಂಬುದನ್ನು ಕೂಡ ಸ್ಪಷ್ಟಪಡಿಸಲಾಗಿದೆ. ಗೇಬ್ರಿಯೆಲಾ ಅವರು ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್.
ಅರ್ಜುನ್ ಅವರು 1998ರಲ್ಲಿ ಮಾಡೆಲ್ ಹಾಗೂ ನಿರ್ಮಾಪಕಿ ಮೆಹರ್ ಜೆಸಿಯಾ ಅವರನ್ನು ವಿವಾಹ ಆದರು. 2018ರಲ್ಲಿ ಇವರ ಸಂಬಂಧ ಕೊನೆ ಆಯಿತು. ವಿಚ್ಛೇದನದ ಬಳಿಕವೂ ಮಕ್ಕಳಿಗಾಗಿ ಇವರು ಆಗಾಗ ಒಟ್ಟಿಗೆ ಸೇರುತ್ತಿದ್ದರು. 2019ರಲ್ಲಿ ಅರ್ಜುನ್ ಅವರು ಗೇಬ್ರಿಯೆಲಾ ಡೆಮೆಟ್ರಿಯಾಡ್ಸ್ ಜೊತೆ ಸುತ್ತಾಡುತ್ತಿರುವ ಸುದ್ದಿ ಹೊರಬಿತ್ತು. ಈಗ ಅವರೇ ವಿಷಯವನ್ನು ಖಚಿಪಡಿಸಿದ್ದಾರೆ.
For More Updates Join our WhatsApp Group :



