“ನಾನೇನೂ ತೆಗೆದುಕೊಂಡಿಲ್ಲ” ಎಂದಿದ್ದ ಹೇಳಿಕೆ ಸುಳ್ಳು?
ಬೆಂಗಳೂರು: ಹೆಚ್ಎಸ್ಆರ್ ಲೇಔಟ್ ಠಾಣೆಯ ಪೊಲೀಸಪ್ಪನ ಜೊತೆ ಪೇರಿಕಿತ್ತ ಪ್ರಕರಣದಿಂದ ರಾಜ್ಯದ ಗಮನ ಸೆಳೆದಿದ್ದ ರೀಲ್ಸ್ ರಾಣಿ ಮೋನಿಕಾ ಕೇಸ್ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಪತಿಯ ಮನೆ ಬಿಟ್ಟು ಹೋಗುವಾಗ ತಾನು ಯಾವುದೇ ಒಡವೆ ಅಥವಾ ಬಟ್ಟೆ ಮುಟ್ಟಿಲ್ಲ ಎಂದು ಹೇಳಿಕೆ ನೀಡಿದ್ದ ‘ಮಾಯಾಂಗಿನಿ ಮೋನಿಕಾ’ಳ ಕಳ್ಳಾಟ ಇದೀಗ ಬಯಲಾಗಿದೆ.
ಮನೆ ಬಿಟ್ಟು ಎಸ್ಕೇಪ್ ಆಗುವಾಗ ನಾನೇನೂ ತಗೊಂಡು ಹೋಗಿಲ್ಲ ಎಂದು ಹೇಳಿಕೆ ನೀಡಿದ್ದ ಮೋನಿಕಾ, ವಾಸ್ತವವಾಗಿ ಮನೆಯಲ್ಲಿದ್ದ ಬಟ್ಟೆ ಮತ್ತು ಒಡವೆಗಳನ್ನು ತುಂಬಿಕೊಂಡು ಪರಾರಿಯಾಗಿದ್ದಾಳೆ. ಸೆಪ್ಟೆಂಬರ್ 31, 2025 ರಂದು ಮಧ್ಯಾಹ್ನ ಮನೆಗೆ ಎಂಟ್ರಿ ಕೊಟ್ಟಿದ್ದ ಮೋನಿಕಾ, ಎರಡು ದೊಡ್ಡ ಬ್ಯಾಗ್ಗಳಲ್ಲಿ ತನ್ನ ವಸ್ತುಗಳನ್ನು, ಲಗೇಜ್ ಅನ್ನು ತುಂಬಿಕೊಂಡು ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಸಂಬಂಧ ಮೋನಿಕಾಳ ವಿರುದ್ಧ ಪತಿ ಮಂಜುನಾಥ್ ದೂರು ದಾಖಲಿಸಿದ್ದಾರೆ.
For More Updates Join our WhatsApp Group :




