ನಿಮಗೆ ಪದೇಪದೇ ಶೀತವಾಗುತ್ತಿದೆಯಾ? ಈ ತರಕಾರಿ ಸೇವನೆ ತಪ್ಪಿಸಿ

ನಿಮಗೆ ಪದೇಪದೇ ಶೀತವಾಗುತ್ತಿದೆಯಾ? ಈ ತರಕಾರಿ ಸೇವನೆ ತಪ್ಪಿಸಿ

ಸೌತೆಕಾಯಿ ಕೆಲವರಿಗೆ ಆರೋಗ್ಯ ಸಮಸ್ಯೆ ಹೆಚ್ಚಿಸಬಹುದು ಎಚ್ಚರಿಕೆ.

ಸೌತೆಕಾಯಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂಬುದು ತಿಳಿದ ವಿಚಾರ. ಇದನ್ನು ಹೆಚ್ಚಾಗಿ ಸಲಾಡ್, ರೈತಾ ಅಥವಾ ಜ್ಯೂಸ್ ರೂಪದಲ್ಲಿ ಸೇವನೆ ಮಾಡಲಾಗುತ್ತದೆ. ಇದರಲ್ಲಿ 95% ನೀರು ಇರುವುದರಿಂದ, ಇದು ನಿರ್ಜಲೀಕರಣ, ತೂಕ ಇಳಿಕೆ ಮತ್ತು ಜೀರ್ಣಕ್ರಿಯೆಗೆ ಅದ್ಭುತವಾಗಿ ಕೆಲಸ ಮಾಡುತ್ತದೆ. ಜೊತೆಗೆ ಇವು ವಿಟಮಿನ್ ಕೆ ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್‌ನಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಆದರೆ ಪೌಷ್ಟಿಕತಜ್ಞೆ ಶ್ವೇತಾ ಅವರ ಪ್ರಕಾರ, ಈ ರೀತಿ ಪೋಷಕಾಂಶಗಳು ಹೆಚ್ಚಿರುವುದು ಕೆಲವರ ದೇಹಕ್ಕೆ ಒಳ್ಳೆಯದಲ್ಲ. ಏಕೆಂದರೆ ಇದರ ಸೇವನೆಯಿಂದ ಆರೋಗ್ಯ ಸಮಸ್ಯೆಗಳು ಉಲ್ಬಣಗೊಳ್ಳುವ ಅಪಾಯ ಹೆಚ್ಚಾಗಿರುತ್ತದೆ. ಆಯುರ್ವೇದದ ಪ್ರಕಾರ, ಸೌತೆಕಾಯಿ ದೇಹವನ್ನು ತಂಪಾಗಿಸುವ ಗುಣವನ್ನು ಹೊಂದಿದ್ದು ಕೆಲವರಿಗೆ ಇದು ಒಳ್ಳೆಯದಲ್ಲ. ಹಾಗಾದರೆ ಇದು ಯಾರಿಗೆ ಒಳ್ಳೆಯದಲ್ಲ, ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಶೀತಅಸ್ತಮಾ: ಸೌತೆಕಾಯಿ ದೇಹದಲ್ಲಿ ಕಫವನ್ನು ಹೆಚ್ಚಿಸುತ್ತದೆ. ಶೀತ, ಕೆಮ್ಮು, ಕಫ, ಸೈನಸ್ ಅಥವಾ ಮೂಗಿನ ದಟ್ಟಣೆ ಇರುವವರು ಸೌತೆಕಾಯಿ ಸೇವನೆ ಮಾಡುವುದನ್ನು ತಪ್ಪಿಸಬೇಕು. ಅದರಲ್ಲಿಯೂ ಚಳಿಗಾಲದಲ್ಲಿ, ಸೌತೆಕಾಯಿ ಸೇವನೆ ಇಂತಹ ಸಮಸ್ಯೆಗಳನ್ನು ಮತ್ತಷ್ಟು ಉಲ್ಬಣಗೊಳಿಸಬಹುದು.

ಕೀಲು ನೋವು: ಸೌತೆಕಾಯಿ ದೇಹ ತಂಪಾಗಿಸುವುದರಿಂದ ವಾತ ದೋಷವನ್ನು ಉಲ್ಬಣಗೊಳಿಸುತ್ತದೆ. ಕೀಲು ನೋವು ಅಥವಾ ದೇಹದಲ್ಲಿ ಊತದಿಂದ ಈಗಾಗಲೇ ಬಳಲುತ್ತಿರುವವರಲ್ಲಿ, ಈ ಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆಯಿದೆ.

ಜೀರ್ಣಕ್ರಿಯೆ ಸಮಸ್ಯೆಗಳು: ಸೌತೆಕಾಯಿಯಲ್ಲಿ ನಾರಿನಂಶ ಹೆಚ್ಚಿದ್ದರೂ, ಸೂಕ್ಷ್ಮ ಜೀರ್ಣಾಂಗ ವ್ಯವಸ್ಥೆ ಇರುವವರಿಗೆ ಇದು ಸಮಸ್ಯೆಯಾಗಬಹುದು. ಇದರಲ್ಲಿರುವ ಕುಕುರ್ಬಿಟಾಸಿನ್ ಎಂಬ ಕಹಿ ಸಂಯುಕ್ತವು ಅನಿಲ, ಉಬ್ಬುವುದು ಅಥವಾ ಅಜೀರ್ಣದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.

ಮೂತ್ರ ಸಂಬಂಧಿ ಸಮಸ್ಯೆಗಳು: ಸೌತೆಕಾಯಿಯಲ್ಲಿ ಹೆಚ್ಚಿನ ನೀರಿನ ಅಂಶವಿದ್ದು, ಇದು ನೈಸರ್ಗಿಕವಾಗಿ ಮೂತ್ರದ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಆದರೆ ಮೂತ್ರದ ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ಸಮಸ್ಯೆಯನ್ನು ಮತ್ತಷ್ಟು ಹದಗೆಡಿಸಬಹುದು.

ಮಧುಮೇಹ: ಸೌತೆಕಾಯಿ ಮಧುಮೇಹ ಇರುವವರಿಗೆ ಸುರಕ್ಷಿತ. ಆದರೆ ಇನ್ಸುಲಿನ್ ಅಥವಾ ಗ್ಲೂಕೋಸ್ ಕಡಿಮೆಗೊಳಿಸುವ ಔಷಧಿಗಳನ್ನು ತೆಗೆದುಕೊಳ್ಳುವವರಿಗೆ ಸೌತೆಕಾಯಿ ಸಮಸ್ಯೆಗಳನ್ನು ಉಂಟುಮಾಡಬಹುದು. ಕೆಲವರಲ್ಲಿ ನಡುಕ ಮತ್ತು ತಲೆತಿರುಗುವಿಕೆಗೆ ಕಾರಣವಾಗಬಹುದು.

ಅದರಲ್ಲಿಯೂ ಆರೋಗ್ಯ ತಜ್ಞರು ಸಾಮಾನ್ಯವಾಗಿ ಊಟ ಮಾಡಿದ ನಂತರ ಸೌತೆಕಾಯಿ ಸೇವನೆ ಮಾಡುವುದನ್ನು ತಪ್ಪಿಸಿ ಎನ್ನುತ್ತಾರೆ. ಏಕೆಂದರೆ ಇದು ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತದೆ. ಅಷ್ಟು ಮಾತ್ರವಲ್ಲ, ಇದರಲ್ಲಿರುವ ಹೆಚ್ಚಿನ ನೀರಿನ ಅಂಶವು ನಿದ್ರೆಗೆ ಅಡ್ಡಿಪಡಿಸಬಹುದು. ಹಾಗಾಗಿ ಸೌತೆಕಾಯಿಯ ಸೇವನೆ ಮಾಡುವ ಮೊದಲು ತಜ್ಞರ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *