ಬೆಂಗಳೂರಿನಲ್ಲಿ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ.

ಬೆಂಗಳೂರಿನಲ್ಲಿ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ.

ಬೆಂಗಳೂರಿನಲ್ಲಿ ಇಂದು ಪವರ್ ಕಟ್.

ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯವಾಗಲಿದೆ. ಈ ಬಗ್ಗೆ ಬೆಸ್ಕಾಂ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಕೆಲವು ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 4 ರ ವರೆಗೆ ಹಾಗೂ ಇನ್ನು ಕೆಲವು ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರ ವರೆಗೆ ಪವರ್ ಕಟ್ ಇರಲಿದೆ.

ಬೆಂಗಳೂರಿನಲ್ಲಿ ಎಲ್ಲೆಲ್ಲಿ ಪವರ್ ಕಟ್?

ಎಸ್1-ನಿಮ್ಹಾನ್ಸ್ ಕಿದ್ವಾಯಿ, ಜಯದೇವ, ರಾಜೀವ್‌ಗಾಂಧಿ, ಸಂಜಯಗಾಂಧಿ ಮತ್ತು ಇಂದಿರಾ ಗಾಂಧಿ ಆಸ್ಪತ್ರೆ, 1, 2, 3, 4, 9 ಟಿ ಬ್ಲಾಕ್, ಸೋಮೇಶ್ವರನಗರ, ವಿಲ್ಸನ್ ಗಾರ್ಡನ್ ರಸ್ತೆ, ಬನ್ನೇರುಘಟ್ಟ ರಸ್ತೆ, ಆರ್.ವಿ ರಸ್ತೆ, ಐಎಎಸ್ ಕಾಲೊನಿ, ಕೆಎಎಸ್ ಕಾಲೊನಿ, ಎನ್.ಎನ್.ಪಾಳ್ಯ ಕೈಗಾರಿಕಾ ಪ್ರದೇಶ, ಬಿಎಚ್​ಇಎಲ್ ಲೇಔಟ್, ಎಸ್​​ಆರ್‌ಕೆ ಗಾರ್ಡನ್ಸ್ ತಿಲಕ್ ನಗರ, ಶಾಂತಿ ವಾರ್ಕ್ ಮತ್ತು ಅಪಾರ್ಟ್ ಮೆಂಟ್, ರಂಕಾ ಕಾಲೊನಿ ರಸ್ತೆ, ಜಿಆರ್‌ಬಿ ಮುಖ್ಯರಸ್ತೆ, ಜೈನ ದೇವಾಲಯ ರಸ್ತೆ, ಬಿಟಿಎಂ 4ನೇ ಹಂತದ ಕೆಲವು ಭಾಗಗಳು, ಬಿಟಿಎಂ 2ನೇ ಹಂತ, ಮಂತ್ರಿ ಅಪಾರ್ಟ್ ಮೆಂಟ್, ಶೋಭಾ ಅಪಾರ್ಟ್ ಮೆಂಟ್, ವೆಗಾಸಿಟಿ ಮಾಲ್, ಬನ್ನೇರುಘಟ್ಟ ಮುರುಗುರಪ್ಪನ ಪಾಳ್ಯ, ಉತ್ತರಹಳ್ಳಿ ಪೂರ್ಣ ಪ್ರಜ್ಞಾ ಲೇಔಟ್, ಬನಶಂಕರಿ 6ನೇ ಹಂತ, ಶ್ರೀನಗರ, ಹೊಸಕರಹಳ್ಳಿ, ತ್ಯಾಗರಾಜನಗರ, ಬಸವನಗುಡಿ, ಕತ್ರಿಗುಪ್ಪೆ, ಗಿರಿನಗರ 4ನೇ ಹಂತ, ಐಟಿಐ ಲೇಔಟ್, 100 ಆಡಿ ವರ್ಮುಲ ರಸ್ತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 4 ಗಂಟೆ ವರೆಗೆ ವಿದ್ಯುತ್ ಕಡಿತ ಇರಲಿದೆ.

ಬ್ರಿಗೇಟ್ ರಸ್ತೆ, ಕೇಂಬ್ರಿಡ್ಜ್ ರಸ್ತೆ, ಕ್ಯಾಸಲ್ ಸ್ಟ್ರೀಟ್, ಚರ್ಚ್ ಸ್ಟ್ರೀಟ್, ಕಮರ್ಶಿಯಲ್ ಸ್ಟ್ರೀಟ್, ಡಿಕನ್ಸನ್ ರಸ್ತೆ, ಇನ್‌ಫೆಂಟ್ರಿ ರಸ್ತೆ, ಈಶ್ವರ ಲೇಔಟ್, ಜೋಗುಪಾಳ್ಯ, ಕಾಮರಾಜ ರಸ್ತೆ, ಎಂ.ಜಿ.ರಸ್ತೆ (ಚಿನ್ನಸ್ವಾಮಿ ಸೇಡಿಯಂ ಸಮೀಪದ ಭಾಗ ಸಹಿತ). ಮ್ಯೂಸಿಯಂ ರಸ್ತೆ, ಪ್ಲೇನ್ ಸ್ಟ್ರೀಟ್, ಪ್ರೆಸ್ಟೀಜ್ ಹೆರ್ಮಿಟೇಜ್ ಅಪಾರ್ಟ್‌ಮೆಂಟ್, ರಿಚ್ಯಂಡ್ ಟೌನ್, ಯೂನಿಯನ್ ಸ್ಟ್ರೀಟ್, ವೆಲಿಂಗ್ಟನ್ ರಸ್ತೆ, ವುಡ್ ಸ್ಟ್ರೀಟ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *