ಮನೆ ಕಟ್ಟುವವರಿಗೆ ಗುಡ್ ನ್ಯೂಸ್.!

ಮನೆ ಕಟ್ಟುವವರಿಗೆ ಗುಡ್ ನ್ಯೂಸ್

ಸೆಟ್‌ಬ್ಯಾಕ್ ಬಿಡದೆ ನಿರ್ಮಾಣಕ್ಕೆ ಅವಕಾಶ

ಬೆಂಗಳೂರು: ಗೃಹ ನಿರ್ಮಾಣ ಮಾಡುವವರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಇನ್ಮುಂದೆ ಸೆಟ್​​ ಬ್ಯಾಕ್ (ಕಟ್ಟಡದ ಸುತ್ತಲು ಕಡ್ಡಾಯವಾಗಿ ಬಿಡಬೇಕಾದ ಖಾಲಿ ಜಾಗ)​​ ಬಿಡದೆ ಮನೆ ನಿರ್ಮಿಸಲು ಅವಕಾಶ ನೀಡಲಾಗಿದೆ. ಸೆಟ್ ಬ್ಯಾಕ್​​ನಲ್ಲಿ ವಿನಾಯಿತಿ ನೀಡಿ ನಗರಾಭಿವೃದ್ಧಿ ಇಲಾಖೆ ಮಹತ್ವದ‌ ಆದೇಶ ಹೊರಡಿಸಿದೆ. ಆ ಮೂಲಕ ಸಿಲಿಕಾನ್ ಸಿಟಿಯ ಜನರಿಗೆ ಸಂಕ್ರಾಂತಿ ಹಬ್ಬಕ್ಕೆ ಸರ್ಕಾರ ಗಿಫ್ಟ್ ನೀಡಿದೆ. ಇನ್ನು ಸೆಟ್​​ ಬ್ಯಾಕ್​​ ಬಿಡದೆ ಸಮಸ್ಯೆ ಎದುರಿಸುತ್ತಿರುವ ಮನೆ ಮಾಲೀಕರು ನಿಟ್ಟುಸಿರು ಬಿಟ್ಟಿದ್ದಾರೆ.

ಸೆಟ್ಬ್ಯಾಕ್ನಿಯಮಗಳಲ್ಲಿ ಬದಲಾವಣೆ

ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಸೆಟ್ ​ಬ್ಯಾಕ್​ ನಿಯಮಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಿದೆ. ಈ ಮೊದಲು ಮನೆಗಳಿಗೆ 12ಮೀ ವರೆಗೆ ಅಂದರೆ 8 ಅಡಿಯಿಂದ 40 ಅಡಿ ವರೆಗೆ ಸೆಟ್ ಬ್ಯಾಕ್ ಬಿಡುವ ಅವಶ್ಯಕತೆ ಇತ್ತು. ಆದರೆ ಇದೀಗ ಸರ್ಕಾರ ಸೆಟ್​​ ಬ್ಯಾಕ್ ಕಡಿತ ಹಾಗೂ ವಿನಾಯಿತಿ ನೀಡಿದ್ದು, ಕಟ್ಟಡದ ಯಾವುದಾದರೂ ಒಂದು ಬದಿಯಲ್ಲಿ ಸೆಟ್ ಬ್ಯಾಕ್ ಬಿಟ್ಟರೆ ಸಾಕು. ಉಳಿದ ಮೂರು ಕಡೆಗಳಲ್ಲಿ ಯಾವುದೇ ಸೆಟ್ ಬ್ಯಾಕ್ ಬಿಡುವ ಅನಿವಾರ್ಯ ಇಲ್ಲ.

ಯಾವ ಜಾಗಕ್ಕೆ ಎಷ್ಟು ಸೆಟ್ ಬ್ಯಾಕ್ ಬಿಡಬೇಕು?

  • 600 ಚದರ ಅಡಿ ವರೆಗಿನ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಕೇವಲ 0.60ಮೀ ಅಂದರೆ 2 ಅಡಿಗೆ ಇಳಿಕೆ ಮಾಡಲಾಗಿದೆ.
  • 600 ಚದರ ಅಡಿ ಇಂದು 1,500 ಚದರ ಅಡಿ ವರೆಗಿನ ಜಾಗದಲ್ಲಿ ಮನೆ ನಿರ್ಮಾಣಕ್ಕೆ 0.70ಮೀ, ಅಂದರೆ 2.5 ಅಡಿಗೆ ಇಳಿಕೆ ಮಾಡಲಾಗಿದೆ.
  • 1,500 ಚದರ ಅಡಿ ಇಂದ 2,500 ಚದರ ಅಡಿ ವರೆಗಿನ ಜಾಗದ ಮನೆಗಳಿಗೆ ಎಲ್ಲಾ ಬದಿಯಲ್ಲೂ ಕನಿಷ್ಠ 0.80ಮೀ ಅಂದರೆ 3 ಅಡಿ ಸೆಟ್ ಬ್ಯಾಕ್ ಬಿಡುವುದು ಕಡ್ಡಾಯ.
  • 2,500 ಚದರ ಅಡಿಯಿಂದ 40 ಸಾವಿರ ಚದರ ಅಡಿ ವರೆಗಿನ ಜಾಗದಲ್ಲಿ ಮನೆ ನಿರ್ಮಾಣ ಮಾಡಲು ಜಾಗದ 8% ನಷ್ಟು ಸೆಟ್ ಬ್ಯಾಕ್ ಬಿಡುವುದು ಕಡ್ಡಾಯ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *