ಕೋಗಿಲು ಲೇಔಟ್: ಅಕ್ರಮವಾಸಿಗಳಿಗೆ ಮನೆ ಹಂಚಿಕೆ.

ಕೋಗಿಲು ಲೇಔಟ್: ಅಕ್ರಮವಾಸಿಗಳಿಗೆ ಮನೆ ಹಂಚಿಕೆ.

ವಸತಿ ಸಚಿವ ಜಮೀರ್ ಅಹ್ಮದ್ “ಮೊದಲ ಹಂತದಲ್ಲಿ 26 ಮನೆ”

ಬೆಂಗಳೂರು: ಕೋಗಿಲು ಲೇಔಟ್ ಅಕ್ರಮವಾಸಿಗಳಿಗೆ ಮನೆ ಭಾಗ್ಯ ಸಿಗುವ ಕಾಲ ಸನ್ನಿಹಿತವಾಗುತ್ತಿದೆ. ಬಿಜೆಪಿ ನಾಯಕರ ವಿರೋಧದ ನಡುವೆಯೂ ಸರ್ಕಾರ ಅಕ್ರಮವಾಸಿಗಳಿಗೆ ಮನೆ ಹಂಚಲು ನಿರ್ಧರಿಸಿದೆ. ಇಂದೇ 26 ಮನೆಗಳ ಹಂಚಿಕೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಸುಳಿವು ನೀಡಿರುವ ವಸತಿ ಸಚಿವ ಜಮೀರ್ ಅಹ್ಮದ್  26 ಮನೆಗಳನ್ನು ಕೊಡಬಹುದು. ಉಳಿದ ಅರ್ಜಿಗಳ ಪರಿಶೀಲನೆಯಾಗುತ್ತಿದೆ ಎಂದಿದ್ದಾರೆ. ಹಾಗೆಯೇ ಅರ್ಜಿ ಹಾಕಿದ ಎಲ್ಲರಿಗೂ ಕೊಡಲ್ಲ. ಹೊರಗಿನವರಿಗಂತೂ ಮನೆ ಕೊಡುವುದೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಮನೆ ಹಂಚಿಕೆಗೆ ಮಾನದಂಡವೇನು?

  • ಕರ್ನಾಟಕದ ಬೇರೆ ಭಾಗದಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರಬೇಕು.
  • ಕೋಗಿಲು ಲೇಔಟ್‌ನಲ್ಲಿ ಐದು ವರ್ಷದಿಂದ ವಾಸ ಇರಬೇಕು.
  • ಮಾತೃ ಭಾಷೆ ಬೇರೆ ಆಗಿದ್ದರೂ ಕರ್ನಾಟಕದವರಾಗಿರಬೇಕು.
  • ಒಂದಕ್ಕಿಂತ ಹೆಚ್ಚಿನ ಅರ್ಜಿ ಸಲ್ಲಿಸಿದ್ದಲ್ಲಿ ರೇಷನ್ ಕಾರ್ಡ್ ಪರಿಗಣನೆ.
  • ವೋಟರ್ ಐಡಿ, ರೇಷನ್ ಕಾರ್ಡ್, ಮಕ್ಕಳ ಶಾಲಾ ದಾಖಲಾತಿ ಪತ್ರ ಪರಿಗಣನೆ.

ಹೀಗಾಗಿಯೇ ವಸತಿ ಸಚಿವ ಜಮೀರ್ ಅಹ್ಮದ್, ಹೊರಗಿನವ್ರಿಗೆ ಮನೆ ಕೊಡಲ್ಲ ಅಂತಾ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ, ಬಿಜೆಪಿ ನಾಯಕರು ಮಾತ್ರ ಬಾಂಗ್ಲಾದವರಿಗೆ ಮನೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕೋಗಿಲು ನಿರಾಶ್ರಿತರ ಪಟ್ಟಿ ರಿಲೀಸ್ ಮಾಡಿದ ಸರ್ಕಾರ

ಕೋಗಿಲು ಲೇಔಟ್‌ನಲ್ಲಿ ಸರ್ವೆ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿರುವ ಅಧಿಕಾರಿಗಳು ಅರ್ಹರ ಪಟ್ಟಿ ಸಿದ್ಧಪಡಿಸಿದ್ದಾರೆ. ಯಾವ ಭಾಷೆಯ ಎಷ್ಟೆಷ್ಟು ಕುಟುಂಬವಿದೆ ಎಂದು ಪಟ್ಟಿ ತಯಾರಿಸಿದ್ದು, ಅದನ್ನು ಸರ್ಕಾರ ರಿಲೀಸ್ ಮಾಡಿದೆ. ಸರ್ಕಾರ ರಿಲೀಸ್ ಮಾಡಿರುವ ನಿರಾಶ್ರಿತರ ಪಟ್ಟಿ ‘ಟಿವಿ9’ಗೆ ಲಭ್ಯವಾಗಿದೆ.

ಕೋಗಿಲು ನಿರಾಶ್ರಿತರ ಕುಟುಂಬಗಳ ಭಾಷಾವಾರು ಪಟ್ಟಿ

  • ಕನ್ನಡ ಭಾಷಿಕರು – 108
  • ಉರ್ದು ಮಾತನಾಡುವವರು – 103
  • ತಮಿಳು ಭಾಷಿಕರು – 13
  • ಹಿಂದಿ ಭಾಷಿಕರು – 11
  • ಮರಾಠಿ ಮಾತನಾಡುವವರು – 03
  • ತೆಲುಗು ಭಾಷಿಕ ಕುಟುಂಬ – 03

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *