ಸಿಸಿಟಿವಿ ದೃಶ್ಯದಿಂದ ಸ್ಫೋಟಕ ಸತ್ಯ ಬಿರುಸಾಗಿದ್ದು
ಬೆಂಗಳೂರು : ವೈಟ್ ಫೀಲ್ಡ್ ಬಳಿ ಆರು ವರ್ಷದ ಬಾಲಕಿಯನ್ನು ದುಷ್ಕರ್ಮಿಗಳು ಅಪಹರಿಸಿ ಕೊಲೆ ಮಾಡಿ ಮೋರಿಗೆ ಎಸೆದ ಪ್ರಕರಣ ಸಂಬಂಧಿಸಿದಂತೆ ಸ್ಫೋಟಕ ಸತ್ಯ ಹೊರ ಬಂದಿದೆ. ಪಶ್ಚಿಮ ಬಂಗಾಳ ಮೂಲದ ಇಜಾಮುಲ್ ಶೇಕ್ ಎಂಬುವವರ ಪುತ್ರಿ ಶಹಜಾನ್ ಕತೂನ್ (6) ಕೊಲೆಯಾದ ಬಾಲಕಿ. ಇದೀಗ ಈ ಬಾಲಕಿಯ ಕೊಲೆಯ ಸುತ್ತ, ಹಲವು ಅನುಮಾನಗಳು ಮೂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ನಡೆದಿದ್ದಾರೆ.ಈ ಬಾಲಕಿಯ ಕೊಲೆಗೆ ಆಕೆಯ ತಾಯಿಯೇ ನೇರ ಕಾರಣ ಎಂದು ಹೇಳಲಾಗುತ್ತದೆ. ಬಾಲಕಿ ತಾಯಿ ಜೊತೆ ಜಗಳಕ್ಕೆ ಕೊಲೆ ಮಾಡಿರಬಹುದು ಎಂಬ ಅನುಮಾನ ಮೂಡಿದೆ. ಮತ್ತೊಂದು ಕಡೆ ಬಾಲಕಿ ತಾಯಿ ಜತೆಗೆ ಜಗಳ ಮಾಡಿಲ್ಲ ಎಂದು ಬಾಲಕಿಯ ತಂದೆ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಈಗಾಗಲೇ ಪೊಲೀಸರ ತನಿಖೆಯಲ್ಲಿ ಈ ಕೊಲೆಯನ್ನು ಯೂಸುಫ್ ಮೀರ್ ಎಂಬ ವ್ಯಕ್ತಿ ಮಾಡಿದ್ದಾನೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಒಂದು ಸಿಸಿಟಿವಿ ದೃಶ್ಯ ಪತ್ತೆಯಾಗಿದೆ. ಆರೋಪಿ ಯೂಸುಫ್ ಮೀರ್ ಲೇಬರ್ ಶೆಡ್ಗಳಲ್ಲಿರುವ ಎಲ್ಲ ಮಕ್ಕಳ ಜೊತೆ ಚೆನ್ನಾಗಿ ಸಲುಗೆಯಿಂದ ಇದ್ದ. ಪ್ರತಿ ದಿನ ಮಕ್ಕಳಿಗೆ ತಿಂಡಿ ಬಿಸ್ಕೆಟ್ ನೀಡಿ, ಪ್ರೀತಿಯಿಂದ ಕಾಣುತ್ತಿದ್ದ ಎಂದು ಹೇಳಲಾಗಿದೆ. ಅದರೂ ಆತ ಕೊಲೆ ಮಾಡಿದ್ದಾನೆ ಎಂದು ಹೇಳಿದ್ದಾರೆ.
ಆರೋಪಿ ಯೂಸುಫ್ ಮೀರ್ ಮಗುವನ್ನು ಕರೆದೊಯ್ದರುವ ಸಿಸಿಟಿವಿ ದೃಶ್ಯ ಇದೀಗ ಪೊಲೀಸರ ಕೈಗೆ ಸಿಕ್ಕಿದೆ. ಚಾಕೊಲೇಟ್ ಕೊಡಿಸೋದಾಗಿ ಮಗುವನ್ನು ಕರೆದುಕೊಂಡು ಹೋಗಿದ್ದಾನೆ ಎಂದು ಹೇಳಲಾಗಿದೆ. ಕಳೆದ ವಾರ (ಜ.5)ಈ ಘಟನೆ ನಡೆದಿದೆ. ಆರೋಪಿ ಯೂಸೂಫ್ ಒಬ್ಬ ಸೈಕೋ ಎಂಬ ಅನುಮಾನ ಶುರುವಾಗಿದೆ.
For More Updates Join our WhatsApp Group :




