ಮಗಳ ಕಣ್ಣು ಮುಂದೆ ತಂದೆ ಬರ್ಬರ ಹ*.

ಮಗಳ ಕಣ್ಣು ಮುಂದೆ ತಂದೆ ಬರ್ಬರ ಹ*.

ತುಮಕೂರು: ಹುಳಿಯಾರು ಹೋಬಳಿಯಲ್ಲಿ ಸಂಭವಿಸಿದ ಕೃತ್ಯ ಗ್ರಾಮಸ್ಥರ ನಡುವೆ ಆಘಾತ.

ತುಮಕೂರು: ಅದು ಊರಿನ ಹೊರಗಿರುವ ತೋಟದ ಮನೆ. ಅಪ್ಪ ಅಮ್ಮ ಇಬ್ಬರು ಮಕ್ಕಳು ವಾಸವಾಗಿದ್ದರು. ತಾವಾಯ್ತು ನಮ್ಮ ಬದುಕಾಯ್ತು ಎಂದು ಕುಟುಂಬ ಜೀವನ ನಡೆಸುತ್ತಿತ್ತು. ಹೀಗೆ ನೆಮ್ಮದಿ ಜೀವನ ಮಾಡುತಿದ್ದವರ ಮೇಲೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ರಾತ್ರೋರಾತ್ರಿ ದುಷ್ಕರ್ಮಿಗಳ ಗುಂಪೊಂದು ಮನೆ ಯಜಮಾನನ ಮೇಲೆ ದಾಳಿ ಮಾಡಿದೆ. ಮಗಳ ಕಣ್ಣೆದುರೇ ಮಾರಕಾಸ್ತ್ರದ ದಾಳಿಗೆ ತಂದೆ ಬಲಿಯಾಗಿದ್ದಾರೆ ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಹುಳಿಯಾರು ಹೋಬಳಿಯಲ್ಲಿ ನಡೆದ ಕೃತ್ಯಕ್ಕೆ ಊರಿಗೆ ಊರೇ ಬೆಚ್ಚಿ ಬಿದ್ದಿದೆ.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಹುಳಿಯಾರು ಹೋಬಳಿಯ ಕೆಂಕೆರೆ ನಿವಾಸಿ ಮಂಜುನಾಥ್​, ದಿನಸಿ ಅಂಗಡಿ ಹಾಗೂ ಟೆಂಟ್ ಹೌಸ್ ನಡೆಸುತ್ತಿದ್ದರು. ಊರಿನ ಹೊರಗಡೆಯ ತೋಟದ ಮನೆಯಲ್ಲಿ ವಾಸವಿದ್ದರು. ತಾನಾಯ್ತು ತಮ್ಮ ಬದುಕಾಯ್ತು ಅಂತ ನೆಮ್ಮದಿ ಜೀವನ ಸಾಗಿಸುತ್ತಿದ್ದರು. ಆದರೆ ನಿನ್ನೆ ತಡರಾತ್ರಿ ಬರ್ಬರವಾಗಿ ಹತ್ಯೆಯಾಗಿದ್ದಾರೆ.

ನಡೆದದ್ದೇನು

ಮಂಜುನಾಥ್ ತನ್ನಿಬ್ಬರು ಮಕ್ಕಳ ಜೊತೆ ಮನೆಯಿಂದ ಹೊರಗೆ ಬಂದಿದ್ದರು. ಟೆಂಟ್ ಹೌಸ್​ನ ಅಂಗಡಿ ಮುಂದೆ ಮಕ್ಕಳ ಜೊತೆ ಮಾತನಾಡುತ್ತಾ ಕುಳಿತಿದ್ದರಂತೆ ಆದರೆ, ಈ ವೇಳೆ ಪ್ರತ್ಯಕ್ಷರಾದ ನಾಲ್ಕೈದು ಜನರ ಗುಂಪು ಮಂಜುನಾಥ್ ಮೇಲೆ ದಾಳಿಗೆ ಮುಂದಾಗಿದ್ದಾರೆ. ಇದನ್ನು ಕಂಡ ಓರ್ವ ಮಗಳು ಮನೆಯೊಳಗೆ ಓಡಿದರೆ, ಮತ್ತೊಬ್ಬಳನ್ನು ದುಷ್ಕರ್ಮಿ ಹಿಡಿದು ಕಿರುಚಾಡದಂತೆ ಬಾಯಿ ಮುಚ್ಚಿಸಿದ್ದಾರೆ. ಆ ಬಳಿಕ ಚಾಕು ತೆಗೆದ ಹಂತಕರು ಮಂಜುನಾಥ್​ನ ಎದೆ ಭಾಗ ಸೇರಿದಂತೆ ಹಲವು ಕಡೆ ಇರಿದು ಎಸ್ಕೇಪ್ ಆಗಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *