ಡಿಸೆಂಬರ್‌ನಲ್ಲಿ ಭಾರತದಲ್ಲಿ ಹಣದುಬ್ಬರ ಹೆಚ್ಚಳ.

ಡಿಸೆಂಬರ್‌ನಲ್ಲಿ ಭಾರತದಲ್ಲಿ ಹಣದುಬ್ಬರ ಹೆಚ್ಚಳ.

ನವೆಂಬರ್ 0.7% ರಿಂದ ಡಿಸೆಂಬರ್ 1.3% – ಅಂಕಿಅಂಶಗಳು ತಾಜಾ.

ನವದೆಹಲಿ: ಭಾರತದ ರೀಟೇಲ್ ಹಣದುಬ್ಬರ ಡಿಸೆಂಬರ್ ತಿಂಗಳಲ್ಲಿ ಬಹುತೇಕ ಎರಡು ಪಟ್ಟು ಹೆಚ್ಚಿದೆ. ನವೆಂಬರ್​ನಲ್ಲಿ ಶೇ. 0.71 ಇದ್ದ ಬೆಲೆ ಏರಿಕೆ ಮಟ್ಟ ಡಿಸೆಂಬರ್​ನಲ್ಲಿ 1.33 ಪ್ರತಿಶತ ಆಗಿದೆ. ಕಳೆದ ಮೂರು ತಿಂಗಳಲ್ಲೇ ಡಿಸೆಂಬರ್​ನ ಹಣದುಬ್ಬರ ಗರಿಷ್ಠ ಮಟ್ಟ ಎನಿಸಿದೆ. ಆದರೂ ಕೂಡ ಈ ದರವು ಆರ್​ಬಿಐ ತಾಳಿಕೆ ಮಿತಿಗಿಂತ ಕಡಿಮೆ ಇದೆ. ಮುಂಬರುವ ತಿಂಗಳುಗಳಲ್ಲಿ ಹಣದುಬ್ಬರವು ಮತ್ತಷ್ಟು ಮೇಲೇರುವ ಸಾಧ್ಯತೆ ಇದೆ.

ಡಿಸೆಂಬರ್ ತಿಂಗಳಲ್ಲಿ ಅಧಿಕ ಹಣದುಬ್ಬರಕ್ಕೆ ಕಾರಣವಾಗಿದ್ದು ತರಕಾರಿ, ಮಾಂಸ, ಮಸಾಲೆ, ಬೇಳೆ ಕಾಳುಗಳು ಇತ್ಯಾದಿ ಆಹಾರಪದಾರ್ಥಗಳ ಬೆಲೆಗಳು ಅಧಿಕಗೊಂಡಿದ್ದು. ತರಕಾರಗಳ ಬೆಲೆ ಕಳೆದ ಎರಡು ತಿಂಗಳಲ್ಲಿ ಗಣನೀಯವಾಗಿ ಕಡಿಮೆ ಆಗಿದ್ದರಿಂದ ಆ ಎರಡೂ ತಿಂಗಳು ಹಣದುಬ್ಬರ ದರ ತೀರಾ ಕೆಳಗೆ ಇತ್ತು. ಈಗ ಬೆಲೆ ಚೇತರಿಕೆ ಪಡೆದಿರುವುದರಿಂದ ಹಣದುಬ್ಬರವು ಮೇಲ್ಮಟ್ಟಕ್ಕೆ ಹೋಗಲು ಸಾಧ್ಯವಾಗದೆ.

ಹಣದುಬ್ಬರ ಮತ್ತಷ್ಟು ಮೇಲೆ ಹೋಗಲು ಆರ್ಬಿಐ ಬಯಸುತ್ತದಾ?

ಹಣದುಬ್ಬರವನ್ನು ಶೇ. 4ರ ಆಸುಪಾಸಿನಲ್ಲಿ ಇರಿಸಬೇಕು ಎಂದು ಆರ್​ಬಿಐಗೆ ಸರ್ಕಾರ ಸೂಚನೆ ಕೊಟ್ಟಿದೆ. ಈ ಮಟ್ಟವನ್ನು ಕಾಯ್ದುಕೊಳ್ಳಲು ಆರ್​ಬಿಐ ಹಣದುಬ್ಬರಕ್ಕೆ ತಾಳಿಕೆ ಮಿತಿಯಾಗಿ ಶೇ. 2ರಿಂದ ಶೇ. 6 ಅನ್ನು ನಿಗದಿ ಮಾಡಿದೆ. ಈ ದರವು ಈ ತಾಳಿಕೆ ಶ್ರೇಣಿಯೊಳಗೆಯೇ ಇರುವಂತೆ ಮಾಡುವುದು ಆರ್​ಬಿಐನ ಗುರಿಯಾಗಿದೆ.

ಕಡಿಮೆ ಹಣದುಬ್ಬರ ಇದ್ದರೆ ಉದ್ಯಮ ಸಂಸ್ಥೆಗಳ ಬೆಳವಣಿಗೆ ಕುಂಠಿತವಾಗುತ್ತದೆ. ಆರ್ಥಿಕತೆ ಒಂದು ಗತಿಯಲ್ಲಿ ಸಾಗಬೇಕಾದರೆ ಹೆಚ್ಚೂ ಅಲ್ಲದ, ಕಡಿಮೆಯೂ ಅಲ್ಲದ ಹಣದುಬ್ಬರ ಸ್ಥಿತಿಯ ವಾತಾವರಣ ಬೇಕು ಎಂಬುದು ಆರ್ಥಿಕ ತಜ್ಞರುಗಳ ಅನಿಸಿಕೆ.

ಭಾರತದಲ್ಲಿ ಕಳೆದ 11 ತಿಂಗಳಿಂದಲೂ ಹಣದುಬ್ಬರವು ಶೇ. 4ರ ಮಟ್ಟಕ್ಕಿಂತಲೂ ಕಡಿಮೆ ಇದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ (2025-26) ಹಣದುಬ್ಬರ ಶೇ. 2ರಷ್ಟಾಗಬಹುದು ಎಂಬುದು ಆರ್​ಬಿಐ ಎಂಪಿಸಿ ಸಮಿತಿಯ ಅಂದಾಜು. ಈ ಹಿಂದೆ ಅದು ನಿರೀಕ್ಷೆ ಮಾಡಿದುದಕ್ಕಿಂತಲೂ ಕಡಿಮೆ ಹಣದುಬ್ಬರದ ಸ್ಥಿತಿ ಬರಬಹುದು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *