ಧ್ಯಾನ ಮಂದಿರದಲ್ಲಿ ಸಿದ್ದಲಿಂಗ ಶ್ರೀಗಳು ಧ್ಯಾನ ಮಾಡಿ ಪೂಜೆ ಸಲ್ಲಿಸಿದರು.

ಧ್ಯಾನ ಮಂದಿರದಲ್ಲಿ ಸಿದ್ದಲಿಂಗ ಶ್ರೀಗಳ ಧ್ಯಾನ.

ಹಣ್ಣುಗಳಿಂದ ಕಂಗೊಳಿಸಿದ ಶ್ರೀಗಳ ಗದ್ದುಗೆ.

ತುಮಕೂರು : ತುಮಕೂರಿನ ಕ್ಯಾತ್ಸಂದ್ರ ಸಮೀಪದ ಸಿದ್ದಗಂಗಾ ಮಠದಲ್ಲಿ, ಶಿವೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ 7ನೇ ವರ್ಷದ ಪುಣ್ಯಸ್ಮರಣೆ ಭಕ್ತಿಭಾವದಿಂದ ನಡೆಯುತ್ತಿದೆ.

ಶಿವಕುಮಾರ ಸ್ವಾಮೀಜಿ ಪುತ್ತಳಿ ಮುಂದೆ ಮೌನ ಪ್ರಾರ್ಥನೆ: ಪುಣ್ಯಸ್ಮರಣೆ ಹಿನ್ನೆಲೆ, ಧ್ಯಾನಮಂದಿರದಲ್ಲಿರುವಶ್ರೀಶಿವಕುಮಾರಸ್ವಾಮೀಜಿಪುತ್ತಳಿಮುಂದೆ ಮಠಾಧ್ಯಕ್ಷ ಸಿದ್ದಲಿಂಗಶ್ರೀಗಳುಧ್ಯಾನದಲ್ಲಿತೊಡಗಿದರು. ವಿಶೇಷ ಪೂಜಾ ಕಾರ್ಯಕ್ರಮದಲ್ಲೂ ಅವರು ಭಾಗವಹಿಸಿದರು.

ಸಿದ್ದಲಿಂಗ ಶ್ರೀಗಳೊಂದಿಗೆ ಹಲವು ಗುರುಹರ ಚರಣರು ಹಾಗೂ ಭಕ್ತರು ಪುಣ್ಯಸ್ಮರಣೋತ್ಸವದಲ್ಲಿ ಭಾಗಿಯಾಗಿ ಶ್ರೀಗಳಿಗೆ ನಮನ ಸಲ್ಲಿಸಿದರು.

ಗದ್ದುಗೆಗೆ ವಿಶೇಷ ಅಲಂಕಾರ: ಹಣ್ಣುಗಳಿಂದ ಕಂಗೊಳಿಸಿದ ಶ್ರೀಗಳ ಗದ್ದುಗೆ ಶಿವೈಕ್ಯ ಡಾ. ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆವಿಶೇಷಅಲಂಕಾರ ಮಾಡಲಾಗಿದೆ.

  • ಹತ್ತಕ್ಕೂ ಹೆಚ್ಚು ಬಗೆಯ ಹಣ್ಣುಗಳು
  • ಮನಮೋಹಕ ವಿನ್ಯಾಸ
  • ಭಕ್ತರ ಕಣ್ಮನ ಸೆಳೆದ ಅಲಂಕಾರ

ಈ ವಿಶಿಷ್ಟ ಹಣ್ಣು ಅಲಂಕಾರದಿಂದ ಶ್ರೀಗಳ ಗದ್ದುಗೆ ಕಂಗೊಳಿಸುತ್ತಿದೆ.ಪುಣ್ಯಸ್ಮರಣೆ ಹಿನ್ನೆಲೆ ವಿಶೇಷ ವಾತಾವರಣ ಪುಣ್ಯಸ್ಮರಣೆ ಅಂಗವಾಗಿ ಸಿದ್ದಗಂಗಾ ಮಠದಲ್ಲಿ ಭಕ್ತಿಭಾವದ ವಾತಾವರಣ ನಿರ್ಮಾಣವಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮಠಕ್ಕೆ ಆಗಮಿಸುತ್ತಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *