4 ಕಾಲಘಟ್ಟಗಳಲ್ಲಿ ಸಾಗುವ ಲವ್ ಸ್ಟೋರಿ
ತೆಳು ಹಾಸ್ಯದ ಜೊತೆಯಲ್ಲಿ ಗಾಢವಾದ ಕಥೆಯನ್ನು ಹೇಳುವಲ್ಲಿ ನಿರ್ದೇಶಕ ಸಿಂಪಲ್ ಸುನಿ ಅವರು ಸಖತ್ ಫೇಮಸ್. ಕಳೆದ ವರ್ಷ ಅವರು ಆ್ಯಕ್ಷನ್-ಕಟ್ ಹೇಳಿದ್ದ ‘ಗತವೈಭವ’ ಸಿನಿಮಾ ರಿಲೀಸ್ ಆಗಿತ್ತು. ಚಿತ್ರಮಂದಿರಗಳಲ್ಲಿ ಬಿಡುಗಡೆ ಆದಾಗ ಆ ಸಿನಿಮಾಗೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದರು. ಉತ್ತಮ ವಿಮರ್ಶೆ ಕೂಡ ಸಿಕ್ಕಿತ್ತು. ‘ಗತವೈಭವ’ ಸಿನಿಮಾ ಈಗ ಒಟಿಟಿಗೆ ಬಂದಿದೆ. ಚಿತ್ರಮಂದಿರಗಳಲ್ಲಿ ಮಿಸ್ ಮಾಡಿಕೊಂಡವರು ಈಗ ಒಟಿಟಿಯಲ್ಲಿ ಈ ಚಿತ್ರ ನೋಡಬಹುದು. ‘ಅಮೇಜಾನ್ ಪ್ರೈಮ್ ವಿಡಿಯೋ’ ಮೂಲಕ ಮನೆಯಲ್ಲೇ ಕುಳಿತು ‘ಗತವೈಭವ’ ವೀಕ್ಷಿಸಬಹುದು.
ಯುವ ನಟ ದುಷ್ಯಂತ್ ಅವರು ‘ಗತವೈಭವ’ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದಾರೆ. ನಾಲ್ಕು ಬೇರೆ ಬೇರೆ ಕಾಲಘಟ್ಟದಲ್ಲಿ ಈ ಸಿನಿಮಾದ ಕಥೆ ಸಾಗುತ್ತದೆ. ಆ ನಾಲ್ಕು ಕಾಲಘಟ್ಟಗಳಿಗೆ ತಕ್ಕಂತೆ ನಾಲ್ಕು ಬೇರೆ ಬೇರೆ ಗೆಟಪ್ಗಳಲ್ಲಿ ಆಶಿಕಾ ರಂಗನಾಥ್ ಮತ್ತು ದುಷ್ಯಂತ್ ಅವರು ಅಭಿನಯಿಸಿದ್ದಾರೆ.
2025ರ ನವೆಂಬರ್ 14ರಂದು ಚಿತ್ರಮಂದಿರಗಳಲ್ಲಿ ‘ಗತವೈಭವ’ ಸಿನಿಮಾ ತೆರೆಕಂಡಾಗ ಪ್ರೇಕ್ಷಕರು 4 ಡಿಫರೆಂಟ್ ಕಥೆಗಳನ್ನು ನೋಡಿ ಎಂಜಾಯ್ ಮಾಡಿದ್ದರು. ಈಗ ಒಟಿಟಿಯಲ್ಲಿ ಈ ಸಿನಿಮಾವನ್ನು ನೋಡಿದ ಪ್ರೇಕ್ಷಕರು ಕೂಡ ಪಾಸಿಟಿವ್ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸಿನಿಮಾದಲ್ಲಿನ ಕಾಡುವ ಲವ್ ಸ್ಟೋರಿ ಎಲ್ಲರಿಗೂ ಇಷ್ಟ ಆಗುತ್ತಿದೆ. ಮೇಕಿಂಗ್ ಗಮನ ಸೆಳೆಯುತ್ತಿದೆ.
ನಟ ದುಷ್ಯಂತ್ ಅವರಿಗೆ ಇದು ಮೊದಲ ಸಿನಿಮಾ. ಚೊಚ್ಚಲ ಚಿತ್ರಕ್ಕಾಗಿ ಅವರು ಸಾಕಷ್ಟು ತಯಾರಿ ಮಾಡಿಕೊಂಡು ನಟಿಸಿದ್ದರು. ಹಾಗಾಗಿ ಒಬ್ಬ ಅನುಭವಿ ಹೀರೋ ರೀತಿ ಅವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಫೈಟ್, ಡ್ಯಾನ್ಸ್, ಅಭಿನಯ.. ಹೀಗೆ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದಾರೆ. 4 ಡಿಫರೆಂಟ್ ಪಾತ್ರಗಳನ್ನು ಅವರು ಉತ್ತಮವಾಗಿ ನಿಭಾಯಿಸಿದ್ದಾರೆ.
For More Updates Join our WhatsApp Group :




