ಆರ್ಥಿಕ ಪ್ರಗತಿಗೆ ಕೇಂದ್ರ ಬಜೆಟ್ 2026ರಿಂದ ಬಲದ ಅಡಿಸ್ಥಾನ.

ಆರ್ಥಿಕ ಪ್ರಗತಿಗೆ ಕೇಂದ್ರ ಬಜೆಟ್ 2026ರಿಂದ ಬಲದ ಅಡಿಸ್ಥಾನ.

ಮ್ಯಾನುಫ್ಯಾಕ್ಚರಿಂಗ್, ಎಂಎಸ್ಎಂಇ, ಇನ್ಫ್ರಾಸ್ಟ್ರಕ್ಚರ್ ಮತ್ತು ನಗರಾಭಿವೃದ್ಧಿಗೆ ವಿಶೇಷ ಒತ್ತು.

ನವದೆಹಲಿ: ಭಾರತದ ಆರ್ಥಿಕ ಪ್ರಗತಿಯ ವೇಗವನ್ನು ಕಾಯ್ದುಕೊಂಡು ಹೋಗಲು ಮತ್ತು ಹೆಚ್ಚಿಸಲು ಬಜೆಟ್​ನಲ್ಲಿ ಆರಂಶಗಳ ನಕ್ಷೆ ವಿವರಿಸಲಾಗಿದೆ. ಮ್ಯಾನುಫ್ಯಾಕ್ಚರಿಂಗ್, ಇನ್​ಫ್ರಾಸ್ಟ್ರಕ್ಚರ್, ಎಂಎಸ್​ಎಂಇ, ನಗರಾಭಿವೃದ್ಧಿ ಸೆಕ್ಟರ್​ಗಳಿಗೆ ಪ್ರಾಮುಖ್ಯತೆ ಕೊಡಲಾಗಿದೆ. ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಅವರು ಆರು ಕ್ಷೇತ್ರಗಳಲ್ಲಿ ಸರ್ಕಾರ ಒತ್ತುಕೊಡುತ್ತಿರುವುದಾಗಿ ತಿಳಿಸಿದ್ದಾರೆ. ಅವರು ಹೇಳಿದ ಆರು ಅಂಶಗಳು ಈ ಕೆಳಕಂಡಂತಿವೆ:

  1. ಹಲವಾರು ಪ್ರಮುಖ ಸೆಕ್ಟರ್​ಗಳಲ್ಲಿ ಮ್ಯಾನುಫ್ಯಾಕ್ಚರಿಂಗ್ ಅನ್ನು ಬಲಪಡಿಸುವುದು
  2. ಪ್ರಮುಖ ಕೈಗಾರಿಕಾ ಸೆಕ್ಟರ್​ಗಳಿಗೆ ಪುಷ್ಟಿ ಕೊಡುವುದು
  3. ಪ್ರಬಲ ಎಂಎಸ್​ಎಂಇಗಳನ್ನು ಸೃಷ್ಟಿಸುವುದು
  4. ಇನ್​ಫ್ರಾಸ್ಟ್ರಕ್ಚರ್​ಗೆ ಭರ್ಜರಿ ಪುಷ್ಟಿ ಕೊಡುವುದು
  5. ದೀರ್ಘಾವಧಿ ಭದ್ರತೆ ಮತ್ತು ಸ್ಥಿರತೆ ಸಾಧಿಸುವುದು
  6. ನಗರ ಆರ್ಥಿಕ ಪ್ರದೇಶಗಳನ್ನು ಅಭಿವೃದ್ದಿಪಡಿಸುವುದು.

ವೈದ್ಯಕೀಯ, ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್, ರಾಸಾಯನಿಕಗಳ ತಯಾರಿಕೆ ಹೆಚ್ಚಿಸಲು ಸರ್ಕಾರ ಒತ್ತುಕೊಡುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಬಯೋಫಾರ್ಮಾ ಶಕ್ತಿ

ಭಾರತವನ್ನು ಜಾಗತಿಕ ಬಯೋಫಾರ್ಮಾ ಉತ್ಪಾದನಾ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಗುರಿ ಇದೆ. ಬಯೋಫಾರ್ಮಾ ಶಕ್ತಿ ಯೋಜನೆಗೆ ಮುಂದಿನ 5 ವರ್ಷದಲ್ಲಿ 10,000 ಕೋಟಿ ರೂ ಅನುದಾನ ಕೊಡಲಾಗುತ್ತದೆ. ಬಯೋಲಾಜಿಕ್ಸ್ ಮತ್ತು ಬಯೋಸಿಮಿಲರ್​ಗಳನ್ನು ದೇಶೀಯವಾಗಿ ಉತ್ಪಾದಿಸಲು ಇಕೋಸಿಸ್ಟಂ ನಿರ್ಮಿಸಲಾಗುತ್ತದೆ ಎಂದಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *