ಆನ್ಲೈನ್ ಜೂಜಿನ ಜಗಳಕ್ಕೆ ಕತ್ತು ಹಿಸುಕಿ ಹತ್ಯೆ, ಆತ್ಮಹ*ನಾಟಕ ವಿಫಲ.
ಬರೇಲಿ : ಪತ್ನಿಯೊಬ್ಬಳು ಮದುವೆಯಾಗಿ ಎರಡು ತಿಂಗಳಿಗೆ ಪತಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಬರೇಲಿಯಲ್ಲಿ ನಡೆದಿದೆ. ವ್ಯಕ್ತಿಯೊಬ್ಬರು ಬರೇಲಿಯಲ್ಲಿರುವ ಬಾಡಿಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತಯಾಗಿದ್ದರು. ಜಿತೇಂದ್ರ ಯಾದವ್ ಎಂಬುವವರು ಕೊಲೆಯಾದ ವ್ಯಕ್ತಿ. ಆರಂಭದಲ್ಲಿ ಅದು ಆತ್ಮಹತ್ಯೆ ಕೊಲೆಯಲ್ಲ ಎನ್ನುವ ನಿರ್ಧಾರಕ್ಕೆ ಪೊಲೀಸರು ಬಂದಿದ್ದರು. ಆನ್ಲೈನ್ ಜೂಜಿನಲ್ಲಿ 20,000 ರೂ. ಕಳೆದುಕೊಂಡ ಕಾರಣದಿಂದ ಉಂಟಾದ ವಿವಾದದ ನಂತರ, ಯಾದವ್ ಅವರನ್ನು ಅವರ ಪತ್ನಿ ಕತ್ತು ಹಿಸುಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖಾಧಿಕಾರಿಗಳ ದಾರಿ ತಪ್ಪಿಸಲು ಮಹಿಳೆ ಯತ್ನಿಸಿದ್ದಾಳೆ, ಆರೋಪಿಯು ತನ್ನ ಕುಟುಂಬ ಸದಸ್ಯರ ಸಹಾಯದಿಂದ ಬಾಡಿಗೆ ಮನೆಯೊಳಗೆ ಶವಕ್ಕೆ ನೇಣು ಹಾಕಿ, ಆತ್ಮಹತ್ಯೆ ಎಂದು ಬಿಂಬಿಸಲು ಮುಂದಾಗಿದ್ದಳು. ಜಿತೇಂದ್ರ ಅವರ ಸಹೋದರ ಸಲ್ಲಿಸಿದ ದೂರಿನ ಆಧಾರದ ಮೇಲೆ ಈ ಪ್ರಕರಣವನ್ನು ಆರಂಭದಲ್ಲಿ ಆತ್ಮಹತ್ಯೆ ಎಂದು ದಾಖಲಿಸಲಾಗಿತ್ತು. ಆದಾಗ್ಯೂ, ಮರಣೋತ್ತರ ಪರೀಕ್ಷೆಯಲ್ಲಿ ಕುತ್ತಿಗೆಯ ಮೇಲಿನ ಗಾಯಗಳು ಕಂಡು ಬಂದ ಹಿನ್ನೆಲೆಯಲ್ಲಿ ಇದು ಸಹಜಸಾವಲ್ಲ, ಕೊಲೆ ಎನ್ನುವ ನಿರ್ಧಾರಕ್ಕೆ ಬಂದರು.
ಮೃತ ವ್ಯಕ್ತಿಯ ದೇಹದ ಸ್ಥಾನ, ಮಲದ ಸ್ಥಾನ ಮತ್ತು ದೈಹಿಕ ಸ್ಥಿತಿಯು ಆತ್ಮಹತ್ಯೆಗೆ ಹೊಂದಿಕೆಯಾಗುವುದಿಲ್ಲ ಎಂದು ವಿಧಿವಿಜ್ಞಾನ ಸಾಕ್ಷ್ಯಗಳು ತೋರಿಸಿದಾಗ ತನಿಖೆ ನಿರ್ಣಾಯಕ ತಿರುವು ಪಡೆದುಕೊಂಡಿತು. ಪೊಲೀಸ್ ಅಧಿಕಾರಿಗಳ ಪ್ರಕಾರ, ಒಂಬತ್ತು ವರ್ಷಗಳ ಸುದೀರ್ಘ ಸಂಬಂಧದ ನಂತರ, ಜಿತೇಂದ್ರ ಕಳೆದ ವರ್ಷ ನವೆಂಬರ್ 25 ರಂದು ಜ್ಯೋತಿಯನ್ನು ವಿವಾಹವಾದರು ಮತ್ತು ದಂಪತಿ ಘಟನೆ ನಡೆದ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು.
For More Updates Join our WhatsApp Group :




