ಆತ್ಮಹ*ಗೆ ಯತ್ನಿಸಿದ್ದ ಮಂಜುನಾಥ್ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು
ಚಿಕ್ಕಬಳ್ಳಾಪುರ : ಬಾಲ್ಯ ವಿವಾಹವಾಗಿದ್ದಕ್ಕೆ ಪೋಕ್ಸೋ ಕೇಸ್ ದಾಖಲು ಹಿನ್ನೆಲೆ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವಂತಹ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲೂಕಿನ ದಿಗವಮಾರಪ್ಪಗಾರಿಪಲ್ಲಿ ಗ್ರಾಮದಲ್ಲಿ ನಡೆದಿದೆ. ಮಂಜುನಾಥ್(19) ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಯುವಕ. ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಚೇಳೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿತ್ತು.
ನಡೆದಿದ್ದೇನು?
ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲೂಕಿನ ದಿಗವಮಾರಪ್ಪಗಾರಿಪಲ್ಲಿ ಗ್ರಾಮದ ನಿವಾಸಿಯಾಗಿದ್ದ ಮಂಜುನಾಥ್ ಇನ್ಸ್ಟಾಗ್ರಾಮ್ನಲ್ಲಿ ಸಾತನೂರು ಮೂಲದ ಹುಡುಗಿಯನ್ನು ಪರಿಚಯ ಮಾಡಿಕೊಂಡು ಬಳಿಕ 2025ರಲ್ಲಿ ಮದುವೆಯಾಗಿದ್ದರು. ಮಂಜುನಾಥ್ 18 ವರ್ಷದವನಿದ್ದಾಗ 16 ವರ್ಷದ ಬಾಲಕಿಯನ್ನು ಪ್ರೀತಿಸಿ ಮದುವೆಯಾಗಿದ್ದ.
ಹುಷಾರಿಲ್ಲ ಎಂದು ಬಾಗೇಪಲ್ಲಿ ಆಸ್ಪತ್ರೆಗೆ ಬಂದಿದ್ದಾರೆ. ಬಾಲಕಿ ವಯಸ್ಸು ಕಡಿಮೆ ಎಂದು ತಿಳಿದ ಮಹಿಳಾ ಮತ್ತು ಮಕ್ಕಳ ರಕ್ಷಣಾ ಇಲಾಖಾ ಅಧಿಕಾರಿಗಳು ಈ ವೇಳೆ ಆಗಮಿಸಿ ಬಾಲಕಿಯನ್ನು ಕರೆದುಕೊಂಡು ಹೋಗಿದ್ದಾರೆ. ಪರಿಶೀಲನೆ ವೇಳೆ ಇದೀಗ ಅಪ್ರಾಪ್ತ ಬಾಲಕಿ 8 ತಿಂಗಳ ಗರ್ಭಿಣಿಯಾಗಿರುವುದು ತಿಳಿದುಬಂದಿದೆ. ಸದ್ಯ ಬಾಲಕಿಯನ್ನ ಸರ್ಕಾರಿ ಬಾಲಕಿಯರ ಬಾಲಮಂದಿರದಲ್ಲಿ ಇರಿಸಲಾಗಿದೆ. ಹೀಗಿರುವಾಗ ತನಗೆ ಏನಾದರೂ ಮಾಡಿದರೆ ಎಂಬ ಭಯದಲ್ಲಿ ಮಂಜುನಾಥ್ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಂಗಳೂರಿನಲ್ಲಿ 4ನೇ ಮಹಡಿಯಿಂದ ಬಿದ್ದು ಯುವಕ ಸಾವು:
ಬೆಂಗಳೂರಿನಲ್ಲಿ 4ನೇ ಮಹಡಿಯಿಂದ ಬಿದ್ದು ಅನುಮಾನಾಸ್ಪದವಾಗಿ ಯುವಕ ಸಾವನ್ನಪ್ಪಿರುವಂತಹ ಘಟನೆ ಭಾರತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಂಬಂಧಿಕರ ಮನೆಗೆ ಬಂದಾಗ ದುರಂತ ಸಂಭವಿಸಿದೆ.
ಇರ್ಫಾನ್ ಮುಲ್ಲಾನಿ(26) ಮೃತ ಯುವಕ. ಮನೆ ಮೇಲಿಂದ ಯುವಕ ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಭಾರತಿನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಎಂದು ಕೇಸ್ ದಾಖಲಾಗಿದೆ.
For More Updates Join our WhatsApp Group :




