ಯಶ್ ಮತ್ತೆ ಟ್ರೆಂಡ್ ಸೆಟ್ಟರ್ ಎನ್ನುವ ಚರ್ಚೆ.
ಈಗ ಎಲ್ಲೆಲ್ಲೂ ‘ಟಾಕ್ಸಿಕ್’ vs ‘ಧುರಂಧರ್ 2’ ಎಂಬ ಚರ್ಚೆ ಜೋರಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವರು ‘ಟಾಕ್ಸಿಕ್’ ಸಿನಿಮಾ ಪರ ವಹಿಸಿಕೊಂಡು ಬಂದರೆ ಇನ್ನೂ ಕೆಲವರು ‘ಧರುಂಧರ್ 2’ ಚಿತ್ರದ ಪರವಾಗಿ ಮಾತನಾಡುತ್ತಿದ್ದಾರೆ. ಹೀಗಿರುವಾಗಲೇ ‘ಧುರಂಧರ್ 2’ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಯಶ್ ನಟನೆಯ ‘ಕೆಜಿಎಫ್ ಚಾಪ್ಟರ್ 2’ ಚಿತ್ರದಿಂದ ಸ್ಫೂರ್ತಿ ಪಡೆದು ಇದನ್ನು ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.
‘ಕೆಜಿಎಫ್’ ಹಾಗೂ ‘ಕೆಜಿಎಫ್ ಚಾಪ್ಟರ್ 1’ ಚಿತ್ರದಲ್ಲಿ ರಕ್ತದ ಹೊಳೆ ಹರಿದಿದೆ. ಇದನ್ನು ಸೂಚ್ಯವಾಗಿ ತೋರಿಸಲು ಕೆಜಿಎಫ್ ಪೋಸ್ಟರ್ನಲ್ಲಿ ರಕ್ತದ ಬಣ್ಣದ ಬ್ಯಾಕ್ಗ್ರೌಂಡ್ ನೀಡಲಾಗಿತ್ತು. ಸಿನಿಮಾದ ಕಥೆಗೆ ಪೋಸ್ಟರ್ ಸರಿಯಾಗಿ ಹೊಂದಿಕೆ ಆಗಿತ್ತು. ಈಗ ‘ಧುರಂಧರ್ 2’ ಕೂಡ ಇದನ್ನು ಫಾಲೋ ಮಾಡಿದೆ. ‘ಧುಂಧರ್ 2’ ಚಿತ್ರದಲ್ಲಿ ರಿವೇಂಜ್ ಇರುವುದರಿಂದ, ಈ ಪೋಸ್ಟರ್ ಕೂಡ ಕೆಂಪು ಬಣ್ಣದಲ್ಲೇ ಬಂದಿದೆ. ಇದು ಚರ್ಚೆಯ ಕೇಂದ್ರಬಿಂದು ಆಗಿದೆ. ಯಶ್ ಅವರನ್ನು ಅನೇಕರು ಟ್ರೆಂಡ್ ಸೆಟ್ಟರ್ ಎಂದು ಕರೆದಿದ್ದಾರೆ. ‘ಧುರಂಧರ್ 2’ ಚಿತ್ರವನ್ನು ಟ್ರೆಂಡ್ ಫಾಲೋವರ್ ಎಂದು ಕರೆಯಲಾಗಿದೆ.
ಸಿನಿಮಾ ವಿಷಯದಲ್ಲಿ ಯಶ್ ಅವರು ತಮ್ಮನ್ನು ತಾವು ಟ್ರೆಂಡ್ ಸೆಟ್ಟರ್ ಆಗಿ ಮಾಡಿಕೊಳ್ಳಲು ಇಷ್ಟಪಡುತ್ತಾರೆ. ‘ಕೆಜಿಎಫ್’ ರೀತಿಯ ಗ್ಯಾಂಗ್ಸ್ಟರ್ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿರಲಿಲ್ಲ. ಈ ಕಾರಣದಿಂದಲೇ ಆ ಸಿನಿಮಾ ಸೂಪರ್ ಹಿಟ್ ಆಯಿತು. ‘ಕೆಜಿಎಫ್ 2’ ಸಿನಿಮಾ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ‘ಕೆಜಿಎಫ್’ ಶೈಲಿಯನ್ನು ಅನುಸರಿಸಿ ಅನೇಕ ಸಿನಿಮಾಗಳು ಬಂದವು. ‘ಕೆಜಿಎಫ್’ ಚಿತ್ರದ ಕಥೆಯ ಪ್ಯಾಟರ್ನ್ನ ‘ಪುಷ್ಪ’ದವರೂ ಫಾಲೋ ಮಾಡಿದ್ದಾರೆ ಎಂಬ ಮಾತು ಕೂಡ ಇದೆ.
‘ಧುರಂಧರ್ 2’ ಚಿತ್ರದ ಟೀಸರ್ ಫೆಬ್ರವರಿ 3ರಂದು ರಿಲೀಸ್ ಆಯಿತು. ಈ ಟೀಸರ್ ಅಷ್ಟಾಗಿ ಗಮನ ಸೆಳೆದಿಲ್ಲ. ‘ಧುರಂಧರ್’ ಸಿನಿಮಾ ಕೊನೆಯಲ್ಲಿ ಬರೋ ಎಂಡ್ ಕಾರ್ಡ್ ಅನ್ನೇ ಟೀಸರ್ ಮಾಡಿ ಬಿಡಲಾಗಿದೆ.
For More Updates Join our WhatsApp Group :




