ಕಬ್ಬನ್ ಪಾರ್ಕ್ ಪೊಲೀಸರು ಕೇಸ್ ಕ್ಲೋಸ್; ವಕೀಲ ಅಸಮಾಧಾನ.
ಶಾರುಖ್ ಖಾನ್ ಮಗ ಆರ್ಯನ್ ಖಾನ್ ಅವರು ಕೆಲ ತಿಂಗಳ ಹಿಂದೆ ಬೆಂಗಳೂರಲ್ಲಿ ಸಾರ್ವಜನಿಕರ ಮುಂದೆ ಮಧ್ಯ ಬೆಟ್ಟು ತೋರಿಸಿ ಅಸಭ್ಯ ವರ್ತನೆ ಮಾಡಿದ್ದರು. ಈ ಪ್ರಕರಣಕ್ಕೆ ಇತಿಶ್ರೀ ಹಾಡಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ. ಅಸಭ್ಯ ವರ್ತನೆ ಸಂಬಂಧ ಸಾಕ್ಷ್ಯಾಧಾರಗಳ ಕೊರತೆ ಕಾಣಿಸಿದೆ. ಈ ಕಾರಣದಿಂದ ಕಬ್ಬನ್ ಪಾರ್ಕ್ ಪೊಲೀಸರು ಕೇಸ್ ಮುಕ್ತಾಯ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದಕ್ಕೆ ದೊಡ್ಡವರ ಒತ್ತಡ ಕಾರಣ ಎಂಬ ಆರೋಪವೂ ಕೇಳಿ ಬಂದಿದೆ.
ಆರ್ಯನ್ ಖಾನ್ ಕಳೆದ ವರ್ಷ ನವೆಂಬರ್ 28ರಂದು ಬೆಂಗಳೂರಿಗೆ ಬಂದಿದ್ದರು. ಅವರು ಪಬ್ ಒಂದರ ಉದ್ಘಾಟನೆಗೆ ತೆರಳಿದ್ದರು. ಆರ್ಯನ್ ಅವರನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರಿದ್ದರು. ಆಗ ಆರ್ಯನ್ ಜನರಿಗೆ ಮಧ್ಯ ಬೆರಳು ತೋರಿಸಿದರು ಎನ್ನಲಾದ ವಿಡಿಯೋ ವೈರಲ್ ಆಗಿತ್ತು. ಆರ್ಯನ್ ಖಾನ್ ವಿರುದ್ಧ ಅನೇಕರು ಕೋಪ ಹೊರಹಾಕಿದ್ದರು. ಈಗ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಾಗಿತ್ತು.
ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣದ ವಿಚಾರಣೆ ನಡೆಸಿದ್ದಾರೆ. ಘಟನೆ ಸಂಬಂಧ ಪಬ್ ಅಧಿಕಾರಿ, ಸಿಬ್ಬಂದಿ ವಿಚಾರಣೆ ಮಾಡಲಾಗಿದೆ. ಅವರೆಲ್ಲರಿಂದ ‘ಆರ್ಯನ್ ಉದ್ದೇಶಪೂರ್ವಕವಾಗಿ ನಡೆದುಕೊಂಡಿಲ್ಲ’ ಎಂಬ ಉತ್ತರ ಬಂದಿದೆ. ಹೀಹಾಗಿ, ಕೇಸ್ ಕ್ಲೋಸ್ಗೆ ಸಿದ್ಧತೆ ಮಾಡಲಾಗುತ್ತಿದೆ. ಪೊಲೀಸರು ಶೀಘ್ರದಲ್ಲೇ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದ್ದಾರೆ.
ದೂರು ದಾರ ವಕೀಲನ ಆಕ್ರೋಶ
ಆರ್ಯನ್ ಖಾನ್ ದುರ್ವರ್ತನೆ ಪ್ರಕರಣ ಮುಕ್ತಾಯ ಹಂತ ತಲುಪಿರುವುದರಿಂದ ದೂರುದಾರಲ್ಲೊಬ್ಬರಾದ ವಕೀಲ ಹುಸೇನ್ ಅಸಮಾಧಾನಗೊಂಡಿದ್ದಾರೆ. ‘ಸೋಶಿಯಲ್ ಮೀಡಿಯಾದಲ್ಲಿ ವೀಡಿಯೊ ವೈರಲ್ ಆಗಿದ್ದರಿಂದ ದೂರು ಕೊಟ್ಟಿದೆ. ಈಗ ಪ್ರಕರಣ ಮುಕ್ತಾಯ ಮಾಡುತ್ತಿರುವುದು ಗೊತ್ತಾಗಿದೆ. ಪೊಲೀಸರು ವಿಡಿಯೋನ ಎಫ್ಎಸ್ಎಲ್ ಕಳುಹಿಸಿದ್ರೆ ಗೊತ್ತಾಗುತ್ತಿತ್ತು. ಕೋರ್ಟ್ಗೆ ರಿಪೋರ್ಟ್ ಸಲ್ಲಿಕೆ ಬಳಿಕ ನಾನು ಪ್ರಶ್ನೆ ಮಾಡುತ್ತೇನೆ’ ಎಂದು ಅವರು ಹೇಳಿದ್ದಾರೆ.
ಶಾರುಖ್ ಪುತ್ರನ ಜೊತೆ ಬೇರೆ ಬೇರೆ ವ್ಯಕ್ತಿಗಳು ಇದ್ದರು. ಬಹುಶಃ ಪ್ರಕರಣದಲ್ಲಿ ಅವರ ಒತ್ತಡ ಇರಬಹುದು. ಅವರ ಸ್ನೇಹಿತರಿಗೆ ಸನ್ನೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಆ ರೀತಿ ಸನ್ನೆ ಮಾಡೋದಾಗಿದ್ರೆ ಅವರು ರೂಮ್ ಅಲ್ಲಿ ಹೋಗಿ ಮಾಡ್ಕೊಬೇಕಿತ್ತು’ ಎಂದು ಹುಸೇನ್ ಹೇಳಿದ್ದಾರೆ.
ಆರ್ಯನ್ ಪರ ಮಾತನಾಡಿದ್ದ ಝೈದ್ ಖಾನ್
ಈ ಘಟನೆ ನಡೆಯುವಾಗ ಸಚಿವ ಜಮೀರ್ ಅಹ್ಮದ್ ಖಾನ್ ಮಗ ಝೈದ್ ಖಾನ್ ಕೂಡ ಅಲ್ಲಿಯೇ ಇದ್ದರು. ಘಟನೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದ ಅವರು, ‘ಅದು ಸಾರ್ವಜನಿಕರಿಗೆ ತೋರಿಸಿದ್ದಲ್ಲ, ಗೆಳೆಯನಿಗೆ ತೋರಿಸಿದ್ದು. ಗೆಳೆಯರ ಮಧ್ಯೆ ಇದೆಲ್ಲ ಕಾಮನ್’ ಎಂದಿದ್ದರು.
For More Updates Join our WhatsApp Group :




