ವೈಟಿಂಗ್ ಲಿಸ್ಟ್ದಲ್ಲಿದ್ದರೂ ತುರ್ತು ಪರಿಸ್ಥಿತಿಯಲ್ಲಿ ಪ್ರಯಾಣಿಸಬಹುದಾದ ಸೀಟುಗಳು.
ಭಾರತೀಯ ರೈಲ್ವೆಯಲ್ಲಿನ ತುರ್ತು ಕೋಟಾ ಸೇರಿದಂತೆ ಹಲವಾರು ಬುಕಿಂಗ್ ಕೋಟಾಗಳನ್ನು ಪರಿಚಯಿಸಿದೆ. ಇದರಿಂದ ಯಾರಿಗೆಲ್ಲ ಲಾಭವಾಗಲಿದೆ. ಇದನ್ನು ಪಡೆಯುವುದು ಹೇಗೆ ಎಂಬಲ್ಲ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಸಾಮಾನ್ಯವಾಗಿ ರೈಲುಗಳಲ್ಲಿ ಸೀಟುಗಳು ಭರ್ತಿಯಾದಾಗ ‘ವೈಟಿಂಗ್ ಲಿಸ್ಟ್’ ಇರುತ್ತದೆ. ಆದರೆ, ಅತೀ ತುರ್ತು ಸಂದರ್ಭಗಳಲ್ಲಿ ಪ್ರಯಾಣಿಸಬೇಕಾದವರಿಗಾಗಿ ರೈಲ್ವೆ ಇಲಾಖೆಯು ಕೆಲವು ಸೀಟುಗಳನ್ನು ಮೀಸಲಿಟ್ಟಿರುತ್ತದೆ. ಇದು ಎಲ್ಲರಿಗೂ ಮುಕ್ತವಾಗಿಲ್ಲ ಮತ್ತು ಕೆಲವು ವರ್ಗದ ಪ್ರಯಾಣಿಕರಿಗೆ ಮಾತ್ರ ಮೀಸಲಾಗಿರುತ್ತದೆ. ಈ ಕೋಟಾವನ್ನು ಬೆಂಗಳೂರು ಮತ್ತು ಮಂಗಳೂರು ಪ್ರಯಾಣಿಕರು ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.
ಯಾರಿಗೆ ಈ ಕೋಟಾ ಅನ್ವಯವಾಗುತ್ತದೆ?
ಗಣ್ಯ ವ್ಯಕ್ತಿಗಳು: ಕೇಂದ್ರ ಮತ್ತು ರಾಜ್ಯ ಸಚಿವರು, ಸಂಸದರು (MP), ಶಾಸಕರು (MLA), ಸಾಂವಿಧಾನಿಕ ಹುದ್ದೆಯಲ್ಲಿರುವವರು ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳು ಈ ಕೋಟಾವನ್ನು ಬಳಸಿಕೊಳ್ಳಬಹುದು.
ತುರ್ತು ಅಗತ್ಯವಿರುವ ಸಾಮಾನ್ಯ ಪ್ರಯಾಣಿಕರು: ಕುಟುಂಬದಲ್ಲಿ ಸಾವು ಸಂಭವಿಸಿದಾಗ, ವೈದ್ಯಕೀಯ ತುರ್ತು ಪರಿಸ್ಥಿತಿ, ಅಥವಾ ಉದ್ಯೋಗದ ಸಂದರ್ಶನಕ್ಕೆ ಹೋಗುವವರು ಈ ಕೋಟಾದಡಿ ಅರ್ಜಿ ಸಲ್ಲಿಸಬಹುದು.
ಇದು ಹೇಗೆ ಕೆಲಸ ಮಾಡುತ್ತದೆ?:
ರೈಲ್ವೆಯ ಪ್ರತಿಯೊಂದು ವಿಭಾಗದಲ್ಲೂ ಈ ಸೀಟುಗಳನ್ನು ಹಂಚಿಕೆ ಮಾಡಲು ಅಧಿಕಾರಿಗಳಿರುತ್ತಾರೆ. ಪ್ರಯಾಣಿಕರು ಮೊದಲು ವೈಟಿಂಗ್ ಲಿಸ್ಟ್ ಟಿಕೆಟ್ ಹೊಂದಿರಬೇಕು. ನಂತರ ಸಂಬಂಧಪಟ್ಟ ವಲಯದ ಹಿರಿಯ ಅಧಿಕಾರಿಗಳಿಗೆ ಅಥವಾ ‘ವಿಭಾಗೀಯ ರೈಲ್ವೆ ಮ್ಯಾನೇಜರ್’ (DRM) ಕಚೇರಿಗೆ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯ ಜೊತೆಗೆ ತುರ್ತು ಪರಿಸ್ಥಿತಿಯ ದಾಖಲೆಗಳನ್ನು (ವೈದ್ಯಕೀಯ ವರದಿ ಅಥವಾ ಇನ್ಯಾವುದೇ ಪುರಾವೆ) ಲಗತ್ತಿಸುವುದು ಕಡ್ಡಾಯ.
For More Updates Join our WhatsApp Group :




