ಕಾಂಗ್ರೆಸ್ ಒಳರಾಜಕಾರಣದಲ್ಲಿ ಹೊಸ ಕಿಚ್ಚು.

ಕಾಂಗ್ರೆಸ್ ಒಳರಾಜಕಾರಣದಲ್ಲಿ ಹೊಸ ಕಿಚ್ಚು.

ಯತೀಂದ್ರ ಹೇಳಿಕೆಗೆ ಡಿಕೆಶಿ ವ್ಯಂಗ್ಯ; “ಅವರೇ ನಮ್ಮ ಹೈಕಮಾಂಡ್”

ಮಂಗಳೂರು : ಸಿದ್ದರಾಮಯ್ಯ 5 ವರ್ಷ ಸಿಎಂ. ಪೂರ್ಣಾವಧಿ ಆಡಳಿತಕ್ಕೆ ಹೈಕಮಾಂಡ್ ಗ್ರೀನ್​ ಸಿಗ್ನಲ್ ಕೊಟ್ಟಿದೆ. ನಾಯಕತ್ವ ಬದಲಾವಣೆ ಇಲ್ಲವೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಹೊಸ ಬಂಬ್ ಸಿಡಿಸಿದ್ದಾರೆ. ಇದು ಕಾಂಗ್ರೆಸ್​​​ನಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಇದಕ್ಕೆ ಸಿಎಂ ಆಕಾಂಕ್ಷಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ ಯತೀಂದ್ರ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ. ಮಂಗಳೂರಿನ ಬಜ್ಪೆ ಏರ್​ಪೋರ್ಟ್​ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಎಂಎಲ್​ಸಿ ಯತೀಂದ್ರ ಅವರೇ ಕಾಂಗ್ರೆಸ್ ಪಕ್ಷದ ಹೈಕಮಾಂಡ್. ಅವರು ಏನು ಹೇಳ್ತಾರೋ ಅದನ್ನು ಗೌರವದಿಂದ ಸ್ವೀಕಾರ ಮಾಡೋಣ. ಯತೀಂದ್ರ ಅವರನ್ನೇ ನಮ್ಮ ಹೈಕಮಾಂಡ್ ಅಂತ ಸ್ವೀಕಾರ ಮಾಡೋಣ. ನಾನು ಈ ಬಗ್ಗೆ ಯಾರಿಗೂ ಪ್ರತಿಕ್ರಿಯೆ ಕೊಡಲ್ಲ ಎಂದಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *