ಕಾರ್ತಿಕ್ ಮಹೇಶ್ಗೆ ನೆಗೆಟಿವ್ ಪಾತ್ರ.
ಹೇಮಂತ್ ಕುಮಾರ್ ‘ಆಲ್ಫಾ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಫೆಬ್ರವರಿ 20ಕ್ಕೆ ರಿಲೀಸ್ ಆಗಲಿರುವ ಈ ಚಿತ್ರದ ಟ್ರೇಲರ್ ಗಮನ ಸೆಳೆದಿದೆ. ಡ್ರಗ್ಸ್, ಪ್ರೇಮಕಥೆ ಒಳಗೊಂಡ ಈ ಚಿತ್ರದಲ್ಲಿ ಕಾರ್ತಿಕ್ ಮಹೇಶ್ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೇಮಂತ್ ಫೈಟ್, ಡ್ಯಾನ್ಸ್‌ನಲ್ಲಿ ಶ್ರಮ ಹಾಕಿರುವುದನ್ನು ಟ್ರೇಲರ್‌ನಲ್ಲಿ ನೋಡಬಹುದು.
ಕನ್ನಡ ಚಿತ್ರರಂಗಕ್ಕೆ ಹೊಸ ಹೊಸ ಪ್ರತಿಭೆಗಳ ಎಂಟ್ರಿ ಆಗುತ್ತಲೇ ಇರುತ್ತದೆ. ಈಗ ಹೇಮಂತ್ ಕುಮಾರ್ ಹೆಸರಿನ ಹೊಸ ಪ್ರತಿಭೆ ‘ಆಲ್ಫಾ’ ಸಿನಿಮಾ ಮೂಲಕ ಎಂಟ್ರಿ ಕೊಡಲು ರೆಡಿ ಆಗಿದ್ದಾರೆ. ಫೆಬ್ರವರಿ 20ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರದ ಟ್ರೇಲರ್ ರಿಲೀಸ್ ಆಗಿ ಗಮನ ಸೆಳೆದಿದೆ. ಈ ಚಿತ್ರದಲ್ಲಿ ಕಾರ್ತಿಕ್ ಮಹೇಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟ್ರೇಲರ್ ಸಖತ್ ರಾ ಆಗಿದೆ.
ಹೇಮಂತ್ ಅವರು ‘ಆಲ್ಫಾ’ ಚಿತ್ರಕ್ಕಾಗಿ ಸಾಕಷ್ಟು ಶ್ರಮ ಹಾಕಿದ್ದಾರೆ. ಅವರು ಫೈಟ್, ಡ್ಯಾನ್ಸ್ ಶ್ರದ್ಧೆಯಿಂದ ಕಲಿತಿರೋದು ಟ್ರೇಲರ್ ಅಲ್ಲಿ ನೋಡಿದರೆ ಗೊತ್ತಾಗುತ್ತದೆ. ಟ್ರೇಲರ್ ನೋಡಿದರೆ ಡ್ರಗ್ಸ್ ಹಾಗೂ ಇತರ ವಿಷಯಗಳ ಬಗ್ಗೆ ನಿರ್ದೇಶಕರು ಹೇಳಲು ಹೊರಟಂತೆ ಇದೆ. ಈ ಚಿತ್ರದಲ್ಲಿ ಒಂದು ಸುಂದರ ಪ್ರೇಮಕಥೆ ಕೂಡ ಇದೆ.
‘ಆಲ್ಫಾ’ ಸಿನಿಮಾದಲ್ಲಿ ಕಾರ್ತಿಕ್ ನಟಿಸುತ್ತಿದ್ದಾರೆ ಎಂದಾಗಲೇ ಸಾಕಷ್ಟು ಚರ್ಚೆಗಳು ನಡೆದವು. ಈಗ ಸಿನಿಮಾದಲ್ಲಿ ಅವರ ಅವತಾರ ರಿವೀಲ್ ಆಗಿದೆ. ಈ ಸಿನಿಮಾದಲ್ಲಿ ಅವರದ್ದು ನೆಗೆಟಿವ್ ಪಾತ್ರ ಎಂಬುದು ಸ್ಪಷ್ಟವಾಗಿದೆ. ಆದರೆ, ಪಾತ್ರ ಪ್ರಾಮುಖ್ಯತೆ ಇದೆ ಎಂಬ ಕಾರಣಕ್ಕೆ ಅವರು ಸಿನಿಮಾನ ಒಪ್ಪಿಕೊಂಡಿದ್ದಾರೆ.
For More Updates Join our WhatsApp Group :




