ಹಳೆಯ ವಿದ್ಯಾರ್ಥಿಗಳ ಗುರುವಂದನ ಕಾರ್ಯಕ್ರಮದಲ್ಲಿ ಪ್ರಾರ್ಥನೆ
ಮಧುಗಿರಿ : ಶಿಕ್ಷಕರನ್ನು ಗೌರವಿಸಿದರೆ ನಿಮ್ಮ ಜೀವನದಲ್ಲಿ ನಿಮ್ಮನ್ನು ನೀವು ಗೆದ್ದ ಹಾಗೆ ಎಂದು ಸುವರ್ಣಮುಖಿ ಶಾಲೆಯ ಕಾಲೇಜು ಪ್ರಾಂಶುಪಾಲ ಮಂಜುನಾಥ್ ತಿಳಿಸಿದರು.
ಪಟ್ಟಣದ ಭಗೀರಥ ಸಮುದಾಯ ಭವನದಲ್ಲಿ 2003- 2004 ನೇ ಸಾಲಿನ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಹಿಂದಿನಿಂದಲೂ ಒಬ್ಬ ವ್ಯಕ್ತಿ ಲೋಕವನ್ನು ಗೆಲ್ಲಲು, ಸಾಮ್ರಾಟನಾಗಿ ಮೆರೆಯಲು ಗುರುವಿನ ಆಶೀರ್ವಾದವೇ ಕಾರಣವಾಗಿರುತ್ತದೆ. ತಾಯಿ ಜನ್ಮ ನೀಡಿದರೆ ತಂದೆ ಧೈರ್ಯ ತುಂಬುತ್ತಾನೆ. ಗುರು ಶಿಕ್ಷಣದ ಮೂಲಕ ಬದುಕಿನ ದಾರಿ ತೋರಿದರೆ ಸಮಾಜವು ಎಲ್ಲವನ್ನು ಕೊಟ್ಟು ನಿಮ್ಮಿಂದ ಋಣವನ್ನು ನಿರೀಕ್ಷಿಸುತ್ತದೆ. ಅದನ್ನು ನೀವೆಲ್ಲರೂ ತಪ್ಪದೆ ಪಾಲಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ತಾಲೂಕಿನ ಕವಣದಾಲದಲ್ಲಿ ಹಿಂದೆ ಇದ್ದ ನಮ್ಮ ಶಾಲೆಯನ್ನು ಈಗ ಮುಚ್ಚಿದ್ದಾರೆ ನೀವು ಮತ್ತೆ ಅಲ್ಲಿ ಶಾಲೆಯನ್ನ ಆರಂಭಿಸಬೇಕು. ಆ ಭಾಗದ ಹಳ್ಳಿಗಾಡಿನ ಮಕ್ಕಳಿಗೆ ಹತ್ತಿರದಲ್ಲೇ ನಮ್ಮಂತೆ ಗುಣಮಟ್ಟದ ಶಿಕ್ಷಣ ನೀಡುವಂತೆ ವಿದ್ಯಾರ್ಥಿಗಳು ಮನವಿ ಮಾಡಿಕೊಂಡರು.
ಇದಕ್ಕೆ ಪ್ರತಿಕ್ರಿಸಿದ ಸಂಸ್ಥೆಯ ಅಧ್ಯಕ್ಷೆ ವನಜಾಕ್ಷಿ ಧ್ರುವ ಕುಮಾರ್ ನಿಮ್ಮೆಲ್ಲರ ಸಹಕಾರ ಇದ್ದರೆ ಮತ್ತೆ ಅಲ್ಲಿ ಶಾಲೆ ಆರಂಭಿಸಲು ಯೋಚಿಸುತ್ತೇನೆ. ನನಗೂ ಶಾಲೆ ನಿಂತ ಬಗ್ಗೆ ಬೇಸರವಿದ್ದು, ಮತ್ತೆ ಆರಂಭಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಇದೇ ವೇಳೆ ಭರವಸೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹಳೆಯ ವಿದ್ಯಾರ್ಥಿ ಚಂದ್ರು ಮಾತನಾಡಿ ಗುರುಗಳು ಬದುಕಿನ ಸಾಧನೆಯ ದಿಕ್ಕನ್ನು ತೋರಿಸುವ ದೇವರಂತೆ ನಮ್ಮನ್ನು ತಿದ್ದಿ ಸರಿದಾರಿಗೆ ತಂದ ಗುರುಗಳು ನಮ್ಮ ಸಾಧನೆಗೆ ಕಾರಣರಾಗಿದ್ದಾರೆ. ಈ ಗುರುವಂದನ ಕಾರ್ಯಕ್ರಮ ಒಂದು ಸಭೆಯಲ್ಲ ನಮ್ಮ ಪ್ರೀತಿ ಗೌರವವನ್ನು ತೋರಿಸುವ ಹಾಗೂ ಅಭಿವಂದಿಸುವ ಕಾರ್ಯಕ್ರಮ ಪ್ರತಿ ವಿದ್ಯಾರ್ಥಿಗೆ ಗುಣಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಬಹಳ ಮುಖ್ಯ ಅದು ಈ ಗುರುಗಳಿಂದ ನಮಗೆ ದೊರಕಿದೆ ಮೊದಲ ಗುರು ತಂದೆ ತಾಯಿ ಆದರೆ ಗುರು ಎರಡನೇ ತಂದೆ ತಾಯಿಯಂತೆ ಅಂತಹ ಎರಡನೇ ತಂದೆ ತಾಯಿಗೆ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿ ಮುಖಂಡರಾದ ಚಂದ್ರಶೇಖರ್, ಅಶ್ವಪತಿ, ಮಂಜುನಾಥ್, ರಾಜಶೇಖರ್, ಚೇತನ, ಲಕ್ಷ್ಮಣ, ರಮೇಶ್, ಗೀತಾ, ಭಾಗ್ಯ, ರಾಧಾ, ದೊಡ್ಡಮಯ್ಯ, ಸುಷ್ಮಾ, ರಂಗಮ್ಮ, ವಿನುತಾ, ರಂಗನಾಥ್, ರಘು, ಸುರೇಶ್, ಗಿರಿಜಾ, ಅನಿತಾ, ಅರವಿಂದ್ ಹಾಗೂ ನೂರಾರು ವಿದ್ಯಾರ್ಥಿಗಳು ಗುರುವಂದನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
For More Updates Join our WhatsApp Group :




