ತುಮಕೂರಿನಲ್ಲಿ ‘ಸಚಿ ಕಿಡ್ನಿ &ಮಲ್ಟಿ ಸ್ಪೆಷಾಲಿಟಿ’ ಆಸ್ಪತ್ರೆ ಉದ್ಘಾಟನೆ.

ತುಮಕೂರಿನಲ್ಲಿ ‘ಸಚಿ ಕಿಡ್ನಿ &ಮಲ್ಟಿ ಸ್ಪೆಷಾಲಿಟಿ’ ಆಸ್ಪತ್ರೆ ಉದ್ಘಾಟನೆ.

 ಶ್ರೀ ಸಿದ್ದಗಂಗಾ ಮಠಾಧ್ಯಕ್ಷರ ಆಶೀರ್ವಚನದೊಂದಿಗೆ ಉದ್ಘಾಟನೆ

ತುಮಕೂರು : ನಗರದ ಶಿರಾ ಗೇಟ್ ಬಳಿಯ ಎಸ್ ಮಾಲ್ ಪಕ್ಕದಲ್ಲಿ ಸಚಿ ಕಿಡ್ನಿ ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಭಾನುವಾರ ಭವ್ಯವಾಗಿ ಉದ್ಘಾಟನೆಯಾಯಿತು. ಈ ಕಾರ್ಯಕ್ರಮಕ್ಕೆ ಆಗಮಿಸಿದ ಶ್ರೀ ಸಿದ್ದಗಂಗಾ ಮಠದ ಮಠಾಧ್ಯಕ್ಷರಾದ ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ನೂತನ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಿ, ಉತ್ತಮ ಆರೈಕೆ, ಶುಶ್ರೂಷೆ ಹಾಗೂ ಸೇವೆ ಈ ಆಸ್ಪತ್ರೆಯಿಂದ ಲಭಿಸಲಿ ಎಂದು ಆಶೀರ್ವಚನ ನೀಡಿದರು.

ಶ್ರೀ ಸಿದ್ದಲಿಂಗ ಶ್ರೀಗಳು, ಸಿದ್ದಗಂಗಾ ಮಠ ಇನ್ನು ಕಿಡ್ನಿ ಸಮಸ್ಯೆ ಇರುವವರು ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋಗುವ ಅಗತ್ಯವಿಲ್ಲ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ಇಲ್ಲಿಯೇ ಶೀಘ್ರ ಗುಣಮುಖರಾಗಲು ಅವಕಾಶ ಕಲ್ಪಿಸಲಾಗಿದೆ. ಇದರ ಅವಶ್ಯಕತೆ ಇರುವ ಎಲ್ಲರೂ ಈ ಆಸ್ಪತ್ರೆಯ ಸೇವೆ ಪಡೆದುಕೊಳ್ಳಬೇಕು ಎಂದರು.

ತುಮಕೂರಿನಲ್ಲಿ ಪ್ರಸಿದ್ಧರಾಗಿರುವ ವೈದ್ಯ ದಂಪತಿ ಡಾ. ರಂಜೇಗೌಡ ಹಾಗೂ ಡಾ. ಪ್ರತಿಭಾ ಅವರು ತಮ್ಮ ತಂದೆ-ತಾಯಿಯ ಹೆಸರನ್ನು ಸ್ಮರಿಸಿ ‘ಸಚಿ’ ಎಂಬ ಹೆಸರಿನಲ್ಲಿ ಈ ಆಸ್ಪತ್ರೆಯನ್ನು ಸ್ಥಾಪಿಸಿರುವುದು ವಿಶೇಷವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸದರು.

ತುಮಕೂರು ಹಾಗೂ ಸುತ್ತಮುತ್ತಲಿನ ಜನರಷ್ಟೇ ಅಲ್ಲ, ಬೆಂಗಳೂರಿನ ಜನರೂ ಇಲ್ಲಿ ಬಂದು ಚಿಕಿತ್ಸೆ ಪಡೆಯಬಹುದು. ಬೆಂಗಳೂರಿಗಿಂತ ಉತ್ತಮವಾದ ಸೌಲಭ್ಯಗಳನ್ನು ಶೇಕಡಾ 30ರಷ್ಟು ಕಡಿಮೆ ದರದಲ್ಲಿ ಒದಗಿಸಲಾಗುತ್ತಿದೆ ಎಂದು ಡಾ. ರಂಗೇಗೌಡ ತಿಳಿಸಿದರು.

ತುಮಕೂರಿನಲ್ಲಿ ಅತ್ಯುತ್ತಮ ಓಟಿ ಸೇವೆ, ಐಸಿಯು ಸೌಲಭ್ಯಗಳು ಹಾಗೂ ಎಲ್ಲಾ ವರ್ಗದ ಸೌಂದರ್ಯ ವರ್ಧಕ ಚಿಕಿತ್ಸೆಗಳು ಇಲ್ಲಿ ಲಭ್ಯ. ಬೆಂಗಳೂರಿಗಿಂತ ಕಡಿಮೆ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಡಾ. ಪ್ರತಿಭಾ ತಿಳಿಸಿದ್ದಾರೆ.

ಒಟ್ಟಿನಲ್ಲಿ, ಸಚಿ ಕಿಡ್ನಿ ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತುಮಕೂರಿನ ಜನತೆಗೆ ಆರೋಗ್ಯ ಸೇವೆಯ ಹೊಸ ಭರವಸೆಯಾಗಿ ಮೂಡಿಬಂದಿದೆ

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

.

Leave a Reply

Your email address will not be published. Required fields are marked *