ಆನ್ಲೈನ್ ಗೇಮಿಂಗ್ ವ್ಯಸನವು 22 ವರ್ಷದ ಕೈಫ್ಗೆ ಪ್ರಾಣ ಕಿತ್ತುಕೊಂಡಿದೆ.
ಮೀರತ್: ಆನ್ಲೈನ್ ಗೇಮಿಂಗ್ ಎಂಬುದು ಒಂದು ಪಿಡುಗಾಗಿ ಪರಿಣಮಿಸಿದೆ. ಈ ವ್ಯಸನವು ಹೇಗೆ ಮಾರಕವಾಗಬಹುದು ಎಂಬುದಕ್ಕೆ ಮೀರತ್ನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಗಾಜಿಯಾಬಾದ್ನಲ್ಲಿ ಮೊಬೈಲ್ ಗೇಮಿಂಗ್ನಿಂದಾಗಿ ಮೂವರು ಸಹೋದರಿಯರ ಆತ್ಮಹತ್ಯೆ ಬಳಿಕ ಮೀರತ್ನ ಖೈರ್ನಗರ ಪ್ರದೇಶದಲ್ಲಿ ಪಬ್ಜಿ ವ್ಯಸನವು 22 ವರ್ಷದ ಯುವಕ ಮೊಹಮ್ಮದ್ ಕೈಫ್ನ ಜೀವವನ್ನೇ ಬಲಿ ಪಡೆದಿದೆ.
ತಡರಾತ್ರಿವರೆಗೆ ಈತ ಗೇಮ್ ಆಡುತ್ತಿದ್ದ, ಇದ್ದಕ್ಕಿದ್ದಂತೆ ರಕ್ತದೊತ್ತಡ ತುಂಬಾ ಹೆಚ್ಚಾಗಿ ಮೆದುಳಿನಲ್ಲಿ ರಕ್ತಸ್ರಾವವಾಗಿತ್ತು. ಮೀರತ್ನ ಖೈರ್ನಗರ ಗುಲಾರ್ ವಾಲಿ ಗಾಲಿ ನಿವಾಸಿ, ಫಾರೂಕ್ ಅವರ ಏಕೈಕ ಪುತ್ರ ಮೊಹಮ್ಮದ್ ಕೈಫ್ ಸಾವನ್ನಪ್ಪಿದ್ದಾರೆ. ರಾತ್ರಿ ತನ್ನ ಕೋಣೆಯಲ್ಲಿ ಹೆಡ್‌ಫೋನ್‌ಗಳನ್ನು ಹಾಕಿಕೊಂಡು ತನ್ನ ಮೊಬೈಲ್ ಫೋನ್‌ನಲ್ಲಿ PUBG ಆಡುತ್ತಿದ್ದ, ಕೈಫ್ ಕಳೆದ ನಾಲ್ಕು ತಿಂಗಳಿನಿಂದ ಆನ್‌ಲೈನ್ ಗೇಮಿಂಗ್‌ನ ಗೀಳನ್ನು ಬೆಳೆಸಿಕೊಂಡಿದ್ದ. ಶುಕ್ರವಾರ ರಾತ್ರಿ 3 ಗಂಟೆ ಸುಮಾರಿಗೆ, ಆಟ ಆಡುವಾಗ ಇದ್ದಕ್ಕಿದ್ದಂತೆ ಹಾಸಿಗೆಯಿಂದ ಬಿದ್ದಿದ್ದಾನೆ.
ಕುಟುಂಬ ಸದಸ್ಯರು ಕೋಣೆಗೆ ಬಂದಾಗ, ಕೈಫ್ ಸ್ಥಿತಿ ಗಂಭೀರವಾಗಿತ್ತು. ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಕೈಫ್ ರಕ್ತದೊತ್ತಡ 300 ಕ್ಕಿಂತ ಹೆಚ್ಚಿರುವುದನ್ನು ಕಂಡು ವೈದ್ಯರು ದಿಗ್ಭ್ರಮೆಗೊಂಡರು. ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಕ್ಷಣ ಅವರನ್ನು ದೆಹಲಿಗೆ ಕರೆದೊಯ್ಯಲು ಸೂಚಿಸಿದರು. ದೆಹಲಿ ಆಸ್ಪತ್ರೆಯಲ್ಲಿ ಎರಡು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ನಂತರ, ಕೈಫ್ ಭಾನುವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾನೆ.
ವೈದ್ಯರ ಪ್ರಕಾರ, ತೀವ್ರ ಒತ್ತಡ ಮತ್ತು ಉತ್ಸಾಹವು ರಕ್ತದೊತ್ತಡ ಹೆಚ್ಚಳಕ್ಕೆ ಕಾರಣವಾಯಿತು, ಇದು ಮೆದುಳಿನಲ್ಲಿ ರಕ್ತಸ್ರಾವಕ್ಕೆ (ಮೆದುಳಿನಲ್ಲಿನ ರಕ್ತನಾಳದ ಛಿದ್ರ) ಕಾರಣವಾಯಿತು ಎಂದು ಹೇಳಿದ್ದಾರೆ.
For More Updates Join our WhatsApp Group :




