ವ್ಯಾಲೆಂಟೈನ್ ವೀಕ್‌ನಲ್ಲಿ Teddy Dayಗೆ ವಿಶೇಷ ಸ್ಥಾನ.

ವ್ಯಾಲೆಂಟೈನ್ ವೀಕ್‌ನಲ್ಲಿ Teddy Dayಗೆ ವಿಶೇಷ ಸ್ಥಾನ.

ಪ್ರೀತಿ–ವಾತ್ಸಲ್ಯದ ಮುದ್ದಾದ ಸಂಕೇತ ಫೆಬ್ರವರಿ 10.

ಪ್ರತಿ ವರ್ಷ ಫೆಬ್ರವರಿ 10 ರಂದು ಅಂದರೆ ವ್ಯಾಲೆಂಟೈನ್‌ ವೀಕ್‌ನ ನಾಲ್ಕನೇ ದಿನದಂದು ಟೆಡ್ಡಿ ಡೇ  ಆಚರಿಸಲಾಗುತ್ತದೆ. ಈ ದಿನವು ಪ್ರೀತಿ ಮತ್ತು ವಾತ್ಸಲ್ಯವನ್ನು ವ್ಯಕ್ತಪಡಿಸಲಿರುವ ಒಂದು ವಿಶೇಷ ಸಂದರ್ಭವಾಗಿದೆ, ಟೆಡ್ಡಿ ಬೇರ್‌ಗಳು ಮುದ್ದಾದ ಉಡುಗೊರೆ ಮಾತ್ರವಲ್ಲ, ಭಾವನೆಗಳು ಮತ್ತು ಭಾವನೆಗಳ ಸಂಕೇತವೂ ಆಗಿದೆ. ಹಾಗಾಗಿ ಹೆಚ್ಚಿನವರು ತಮ್ಮ ನೆಚ್ಚಿನ ವ್ಯಕ್ತಿಗೆ ಈ ದಿನದಂದು ಟೆಡ್ಡಿ ಬೇರ್ ಅನ್ನು ಉಡುಗೊರೆಯಾಗಿ ನೀಡುವ ಮೂಲಕ ತಮ್ಮ ಪ್ರೀತಿ ಮತ್ತು ವಾತ್ಸಲ್ಯವನ್ನು ವ್ಯಕ್ತಪಡಿಸುತ್ತಾರೆ. ಅಷ್ಟಕ್ಕೂ ವ್ಯಾಲೆಂಟೈನ್‌ ವೀಕ್‌ನಲ್ಲಿ ಟೆಡ್ಡಿ ಡೇ ಆಚರಿಸುವುದೇಕೆ? ಈ ವಿಶೇಷ ದಿನದ ಹಿನ್ನೆಲೆಯೇನು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.

ಟೆಡ್ಡಿ ಡೇ ಇತಿಹಾಸವೇನು?

ನವೆಂಬರ್ 14, 1902 ರಂದು, ಅಮೆರಿಕದ ಅಧ್ಯಕ್ಷರಾಗಿದ್ದ ಥಿಯೋಡರ್ ರೂಸ್ವೆಲ್ಟ್, ಮಿಸ್ಸಿಸ್ಸಿಪ್ಪಿಯ ಕಾಡಿಗೆ ಬೇಟೆಯಾಡಲು ಹೋಗಿದ್ದರು. ಅವರೊಂದಿಗೆ ಸಹಾಯಕ ಹೋಲ್ಟ್ ಕೊಲಿಯರ್ ಕೂಡಾ ಇದ್ರು. ಇಲ್ಲಿ ಕೊಲಿಯರ್ ಗಾಯಗೊಂಡ ಕರಡಿಯೊಂದನ್ನು ಹಿಡಿದು ಮರಕ್ಕೆ ಕಟ್ಟಿ, ನಂತರ ಅವರು ಕರಡಿಗೆ ಗುಂಡು ಹಾರಿಸಲು ರಾಷ್ಟ್ರಪತಿಗಳಿಂದ ಅನುಮತಿ ಕೋರಿದರು. ಆದರೆ ಗಾಯಗೊಂಡ ಕರಡಿಯನ್ನು ನೋಡಿದಾಗ ಅಧ್ಯಕ್ಷ ರೂಸ್ವೆಲ್ಟ್ ಅವರ ಹೃದಯ ಕರಗಿ, ಕರಡಿಯನ್ನು ಕೊಲ್ಲಲು ನಿರಾಕರಿಸಿದರು. ನಂತರ ನವೆಂಬರ್ 16 ರಂದು, ದಿ ವಾಷಿಂಗ್ಟನ್ ಪೋಸ್ಟ್‌ನ ವ್ಯಂಗ್ಯಚಿತ್ರಕಾರ ಕ್ಲಿಫರ್ಡ್ ಕೆ ಬೆರ್ರಿಮನ್ ಅವರು ನಡೆದ ಈ ಘಟನೆಯನ್ನು ಆಧರಿಸಿ ವ್ಯಂಗ್ಯಚಿತ್ರವನ್ನು ರಚಿಸಿದರು.

ಆಟಿಕೆ ತಯಾರಿಕಾ ಉದ್ಯಮಿ ಮಾರಿಸ್ ಮಿಚ್ಟಮ್ ಪತ್ರಿಕೆಯಲ್ಲಿ ಈ ವ್ಯಂಗ್ಯ ಚಿತ್ರವನ್ನು ನೋಡಿ ಕರಡಿ ಮರಿಯ ಆಕಾರದ ಆಟಿಕೆ ಮಾಡುವ ಬಗ್ಗೆ ಯೋಚಿಸಿದರು. ಅವರು ಅದನ್ನು ತಮ್ಮ ಪತ್ನಿ ರೋಸ್ ಅವರೊಂದಿಗೆ ವಿನ್ಯಾಸಗೊಳಿಸಿದರು ಮತ್ತು ಆ ಆಟಿಕೆಗೆ ‘ಟೆಡ್ಡಿ ಬೇರ್‌ʼ ಎಂದು ಹೆಸರಿಟ್ಟರು. ಟೆಡ್ಡಿ ಎಂಬ ಹೆಸರು ಇಡಲು ಕಾರಣವೆಂದರೆ ಅಧ್ಯಕ್ಷ ರೂಸ್ವೆಲ್ಟ್ ಅವರ ಅಡ್ಡ ಹೆಸರು ಟೆಡ್ಡಿ, ಆ ಆಟಿಕೆಗೆ ಟೆಡ್ಡಿ ಎಂಬ ಹೆಸರಿಡುವ ಮೂಲಕ ಆಟಿಕೆಯನ್ನು ಅಧ್ಯಕ್ಷ ರೂಸ್ವೆಲ್ಟ್ ಅವರಿಗೆ ಸಮರ್ಪಿಸಿದರು. ನಂತರ ಅದು ಬಹಳ ಜನಪ್ರಿಯವಾಯಿತು. ಅದಲ್ಲದೆ ಟೆಡ್ಡಿ ಬೇರ್ ಪ್ರೀತಿಯ ಸಂಕೇತವಾಯಿತು ಮತ್ತು ವ್ಯಾಲೆಂಟೈನ್‌ ವೀಕ್‌ನ ನಾಲ್ಕನೇ ದಿನನವಾದ ಫೆಬ್ರವರಿ 10 ರಂದು ಟೆಡ್ಡಿ ಡೇ ಆಚರಿಸಲು ಪ್ರಾರಂಭಿಸಲಾಯಿತು

Leave a Reply

Your email address will not be published. Required fields are marked *