Dr.B.R ಅಂಬೇಡ್ಕರ್ ವಸತಿ ಶಾಲೆಯ ವಾರ್ಷಿಕೋತ್ಸವ.

Dr.B.R ಅಂಬೇಡ್ಕರ್ ವಸತಿ ಶಾಲೆಯ ವಾರ್ಷಿಕೋತ್ಸವ.

ವಿದ್ಯಾರ್ಥಿಗಳ ಸಾಧನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರಶಂಸೆ.

ಮಧುಗಿರಿ:   ಘನ ಸರ್ಕಾರ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ  ಅನೇಕ ರೀತಿಯ ಸೌಲಭ್ಯಗಳನ್ನು ಒದಗಿಸುತ್ತದೆ   ಅದನ್ನು ಬಳಕೆಯನ್ನು ಮಾಡಿಕೊಂಡು   ನಮ್ಮ ವಸತಿ ಶಾಲೆ ಯ ವಿದ್ಯಾರ್ಥಿ ಗಳು  ಶೈಕ್ಷಣಿಕ ವಾಗಿ  ಕ್ರೀಡೆ ಯಲ್ಲಿ  ಬಾಗವಹಿಸಿ ರಾಜ್ಯ ಮತ್ತು ತಾಲೂಕಿಗೆ ಅಪಾರವಾದ ಗೌರವ ತಂದಿದ್ದಾರೆ ಎಂದು  ಸೋದೇನಹಳ್ಳಿ ಯ ಹೊರವಲಯದಲ್ಲಿರು  ಡಾಕ್ಟರ್  ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ ಯ ಪ್ರಾಂಶುಪಾಲ ಲಕ್ಷ್ಮಣ ಎಸ್ ಗೌಳನ್ನವರ ತಿಳಿಸಿದರು.

ಮಧುಗಿರಿ ತಾಲೂಕಿನ ‌ದೊಡ್ಡೇರಿ ಹೋಬಳಿ ಸೋದೇನಹಳ್ಳಿ ಯ ಲ್ಲಿ ರುವ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ದ ಸಮಾರಂಭದಲ್ಲಿ ಬಾಗವಹಿಸಿ ಮಾತನಾಡಿದ ಅವರು   ವಿದ್ಯಾರ್ಥಿ ಗಳು ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ ಗುಣಮಟ್ಟದ ಶಿಕ್ಷಣ ಕಲಿತು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬೇಕು   ನಮ್ಮ ಶಾಲೆಯಲ್ಲಿ ಪ್ರತಿ ವರ್ಷವೂ ಶೈಕ್ಷಣಿಕ ವಾಗಿ ಕ್ರೀಡೆಯಲ್ಲಿ ಮತ್ತು ವಿವಿಧ ವಿಭಾಗಗಳಲ್ಲಿ ಬಾಗವಹಿಸಿ  ಜಿಲ್ಲೆಗೆ ತಾಲ್ಲೂಕು ಗೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಇದಕ್ಕೆ ಮೂಲ ಕಾರಣ ಮದುಗಿರಿ ಕ್ಷೇತ್ರದ ಜನಪ್ರಿಯ ಶಾಸಕರಾದ .ಕೆ.ಎನ್.ರಾಜಣ್ಣ ನವರ ಮಾರ್ಗದರ್ಶನ ಮತ್ತು ಅವರು ವಿದ್ಯಾರ್ಥಿ ಗಳಿಗೆ ಬೇಕಾಗುವ ಎಲ್ಲಾ ವಸತಿ ಸೌಕರ್ಯ ಒದಗಿಸಿ ಶಿಕ್ಷಣ ಕ್ಕೆ ಹೆಚ್ಚಿನ ಮಹತ್ವ ಕೊಡುತ್ತಿದ್ದಾರೆ, ಅವರ ಅಬಿಲಾಷೆಯಂತೆ  ಹಾಗು ಸರ್ಕಾರದ ಒತ್ತಾಸೆಯಂತೆ   ಇಲ್ಲಿನ ಶಿಕ್ಷಕರು ಸಹ ಉತ್ತಮ ಗುಣಮಟ್ಟದ ಶಿಕ್ಷಣ ವನ್ನು ವಿದ್ಯಾರ್ಥಿ ಗಳಿಗೆ ನೀಡುತ್ತಾ ಬಂದಿದ್ದಾರೆ. ವಿದ್ಯಾರ್ಥಿಗಳು ಈ ಶಾಲೆಗೆ ಬರುವಾಗ ಬರಿ ಕೈಯಲ್ಲಿ ಬರುತ್ತಾರೆ ಹೋಗುವಾಗ   ವಿದ್ಯಾರ್ಥಿ ಗಳ ವಿದ್ಯಾಭ್ಯಾಸ ದ   ಪ್ರಥಮ ಘಟ್ಟವಾದ ಹತ್ತನೇ ತರಗತಿಯ ಅಂಕ ಪಟ್ಟಿ ಯನ್ನು ಪಡೆದು ಹೋಗುತ್ತಾರೆ. ‌ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಕನಸನ್ನು ಕಟ್ಟಿಕೊಂಡಿದೆ, ಆ ಕನಸನ್ನು ನನಸು ಮಾಡುವುದು ವಿದ್ಯಾರ್ಥಿಗಳ ಮತ್ತು ಶಿಕ್ಷಕ ರ ಜವಾಬ್ದಾರಿ ಇರುತ್ತದೆ. ಅದರಂತೆ ನಮ್ಮ ಶಾಲೆಯ  ಎಲ್ಲಾ ಶಿಕ್ಷಕರು ಸಹ ಪ್ರಾಮಾಣಿಕವಾಗಿ  ವಿದ್ಯಾರ್ಥಿ ಗಳಿಗೆ  ಪಾಠವನ್ನು ಮಾಡುತ್ತಾರೆ,   ಪ್ರತಿ ವರ್ಷವೂ ಕೂಡ ನಮ್ಮ ಶಾಲೆಯು ನೂರಕ್ಕೆ ನೂರು ಫಲಿತಾಂಶ ತಂದು ಶಾಲೆಗೆ ಮತ್ತು ತಾಲೂಕಿಗೆ ಗೌರವ ತರುತ್ತದೆ ಎಂದು  ತಿಳಿಸಿದರು.

ಬಡವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಯ ಪ್ರಾಂಶುಪಾಲ .ಡಿ.ಆರ್ ರಮೇಶ್ ಮಾತನಾಡಿ   ನೀವುಗಳು ವಿದ್ಯಾಭ್ಯಾಸ ಮಾಡುತ್ತಿರುವ    ಶಾಲೆಯು ವಿಶ್ವಮಾನವತವಾದಿ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ಉತ್ತಮ ವಿದ್ಯಾಭ್ಯಾಸ ಮಾಡಿ ಅವರ ಹೆಸರಿಗೆ  ಗೌರವವನ್ನು ತರಬೇಕು  ಈಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ  ಈಶಾಲೆಯು ಉತ್ತಮ ಫಲಿತಾಂಶ ತರುವಲ್ಲಿ ಯಶಸ್ವಿಯಾಗಿದೆ ಇದಕ್ಕೆ ಕಾರಣ ಇಲ್ಲಿನ ಪ್ರಾಂಶುಪಾಲರು ಮತ್ತು ಶಿಕ್ಷಕರ  ಬೋಧನೆ ಅದಕ್ಕೆ ತಕ್ಕಂತೆ ನೀವುಸಹ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿ  ಈಶಾಲೆಗೆ ಮತ್ತು ತಂದೆ ತಾಯಿ ಗಳಿಗೆ ಅಪಾರವಾದ ಕೊಡುಗೆಯನ್ನು ತರುವಲ್ಲಿ ಯಶಸ್ವಿಯಾಗಬೇಕು ಎಂದು ತಿಳಿಸಿದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *