ಜೈಲಿಗೆ ಹೋದ ಹಾಸ್ಯ ನಟ ರಾಜ್ಪಾಲ್ ಯಾದವ್‌ಗೆ ನೆರವಾಗಲು ಸೋನು ಸೂದ್.

ಜೈಲಿಗೆ ಹೋದ ಹಾಸ್ಯ ನಟ ರಾಜ್ಪಾಲ್ ಯಾದವ್‌ಗೆ ನೆರವಾಗಲು ಸೋನು ಸೂದ್.

ಕೊವಿಡ್ ಕಾಲದ ಸಮಾಜ ಸೇವೆ ಮೂಲಕ ‘ಮಸೀಹ’ ಖ್ಯಾತಿ ಪಡೆದ ಸೋನು ಸೂದ್

ಸೋನು ಸೂದ್ ಕೋವಿಡ್ ಸಮಯದಲ್ಲಿ ಮಾಡಿದ ಅಭೂತಪೂರ್ವ ಸಮಾಜ ಸೇವೆ ಅವರಿಗೆ ‘ಮಸೀಹ’ (ದೇವರ ಅವತಾರ) ಎಂಬ ಹೆಸರು ತಂದುಕೊಟ್ಟಿದೆ. ಕೋವಿಡ್ ಬಳಿಕವೂ ಸಹ ಸೋನು ಸೂದ್ ಅವರು ತಮ್ಮ ಸಾಮಾಜಿಕ ಕಾರ್ಯವನ್ನು ಮುಂದುವರೆಸಿದ್ದಾರೆ. ಹಲವಾರು ಮಕ್ಕಳ ಶಿಕ್ಷಣ, ಆರೋಗ್ಯ ಚಿಕಿತ್ಸೆಗಳಿಗೆ ನೆರವಾಗುತ್ತಲೇ ಇದ್ದಾರೆ. ಇದೀಗ ಸೋನು ಸೂದ್, ತಮ್ಮದೇ ಚಿತ್ರರಂಗದ ಸಹನಟನಿಗೆ ಸಹಾಯ ಘೋಷಿಸಿದ್ದಾರೆ. ಇತ್ತೀಚೆಗಷ್ಟೆ ಜೈಲುಪಾಲಾದ ಖ್ಯಾತ ಹಾಸ್ಯ ನಟ ರಾಜ್​​ಪಾಲ್ ಯಾದವ್​​ ಅವರಿಗೆ ತಾವು ಸಹಾಯ ಮಾಡುವುದಾಗಿ ಸೋನು ಸೂದ್ ಹೇಳಿದ್ದಾರೆ.

9 ಕೋಟಿ ರೂಪಾಯಿ ಚೆಕ್ ಬೌನ್ಸ್ ಪ್ರಕರಣದಲ್ಲಿ ನ್ಯಾಯಾಲಯವು ರಾಜ್​​ಪಾಲ್ ಯಾದವ್ ಅವರು ಅಪರಾಧಿ ಎಂದು ತೀರ್ಪು ನೀಡಿದ್ದು, ರಾಜ್​ಪಾಲ್ ಅವರಿಗೆ ಶಿಕ್ಷೆ ವಿಧಿಸಿದೆ. ಜೈಲಿಗೆ ಹೋಗುವ ಮುಂಚೆ ಹೇಳಿಕೆ ನೀಡಿದ್ದ ರಾಜ್​ಪಾಲ್ ಯಾದವ್, ತಮ್ಮ ಬಳಿ ಹಣವೂ ಇಲ್ಲ, ಯಾರೂ ಸ್ನೇಹಿತರೂ ಇಲ್ಲ’ ಎಂದಿದ್ದರು. ಇದೀಗ ಸೋನು ಸೂದ್, ರಾಜ್​ಪಾಲ್ ಯಾದವ್ ಅವರಿಗೆ ನೆರವಾಗಲು ಮುಂದೆ ಬಂದಿದ್ದಾರೆ.

ರಾಜ್​ಪಾಲ್ ಯಾದವ್​​ಗೆ ಸಹಾಯ ಮಾಡಲು ಮುಂದೆ ಬಂದಿರುವ ಸೋನು ಸೂದ್, ರಾಜ್​ಪಾಲ್ ಅವರಿಗೆ ತಮ್ಮ ಸಿನಿಮಾನಲ್ಲಿ ಪಾತ್ರ ನೀಡುವ ಜೊತೆಗೆ ಅವರಿಗೆ ಒಳ್ಳೆಯ ಮೊತ್ತವನ್ನು ಮುಂಗಡವಾಗಿ ನೀಡುವುದಾಗಿಯೂ ಸಹ ಹೇಳಿದ್ದಾರೆ. ಅಲ್ಲದೆ, ಇದು ನಾನು ಅವರಿಗೆ ಮಾಡುತ್ತಿರುವ ಸಹಾಯ ಏನಲ್ಲ ಬದಲಿಗೆ ಒಬ್ಬ ಕಲಾವಿದನಿಗೆ ನೀಡುತ್ತಿರುವ ಬೆಂಬಲ ಅಷ್ಟೆ ಎಂದಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *