12 ವರ್ಷಗಳ ನಂತರ ಸಂಕಷ್ಟ: ರಜನಿಕಾಂತ್ ‘Kochadian’ ನಿರ್ಮಾಪಕರಿಗೆ ಕಾನೂನು ಬಿಸಿ.

12 ವರ್ಷಗಳ ನಂತರ ಸಂಕಷ್ಟ: ರಜನಿಕಾಂತ್ ‘Kochadian’ ನಿರ್ಮಾಪಕರಿಗೆ ಕಾನೂನು ಬಿಸಿ.

ಬಾಕ್ಸ್ ಆಫೀಸ್ ಫ್ಲಾಪ್ ಆದ ಸಿನಿಮಾ ಈಗ ನಿರ್ಮಾಪಕರಿಗೆ ದೊಡ್ಡ ತಲೆನೋವಾಯಿತು.

ರಜನೀಕಾಂತ್  ವೃತ್ತಿ ಜೀವನದಲ್ಲಿ ಬಹಳ ಕಡಿಮೆ ಸಿನಿಮಾಗಳು ಫ್ಲಾಪ್ ಎನಿಸಿಕೊಂಡಿವೆ. ರಜನೀಕಾಂತ್ ಅವರ ಸಿನಿಮಾ ಫ್ಲಾಪ್ ಆದರೂ ಹಾಕಿರುವ ಬಂಡವಾಳಕ್ಕಿಂತಲೂ ತುಸು ಹೆಚ್ಚೇ ವಾಪಸ್ ಬಂದಿರುತ್ತದೆ. ಆದರೆ ರಜನೀಕಾಂತ್ ಅವರ ಕೆಲ ಸಿನಿಮಾಗಳಿವೆ, ಅವು ಇನ್ನಿಲ್ಲದಂತೆ ಬಾಕ್ಸ್ ಆಫೀಸ್​​ನಲ್ಲಿ ಸೋತಿವೆ. ಅವುಗಳಲ್ಲಿ ‘ಕೊಚಡಿಯನ್’ ಸಹ ಒಂದು. ರಜನೀಕಾಂತ್ ಅವರ ಪುತ್ರಿ ಸೌಂದರ್ಯ ರಜನೀಕಾಂತ್ ನಿರ್ದೇಶನ ಮಾಡಿದ್ದ ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಹೀನಾಯ ಸೋಲು ಕಂಡಿತ್ತು. ಸಿನಿಮಾ ಬಿಡುಗಡೆ ಆಗಿ 12 ವರ್ಷಗಳ ಬಳಿಕ ಇದೀಗ ಈ ಸಿನಿಮಾದ ನಿರ್ಮಾಪಕರಿಗೆ ದೊಡ್ಡ ಸಂಕಷ್ಟವೊಂದು ಎದುರಾಗಿದೆ.

‘ಕೊಚಡಿಯನ್’ ಸಿನಿಮಾನಲ್ಲಿ ರಜನೀಕಾಂತ್ ನಾಯಕರಾದರೂ ಇದು ಕಾರ್ಟೂನ್ ಮಾದರಿಯ ಸಿನಿಮಾ. ಹಾಲಿವುಡ್​​ನಲ್ಲಿ ಆಗಷ್ಟೆ ಬಳಕೆಗೆ ಬಂದಿದ್ದ ಲೈವ್ ಆಕ್ಷನ್ ಅಥವಾ ಫರ್ಪಾಮೆನ್ಸ್ ಕ್ಯಾಪ್ಚರ್ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದ್ದ ಅನಿಮೇಷನ್ ಸಿನಿಮಾ ಇದಾಗಿತ್ತು. ಸಿನಿಮಾನಲ್ಲಿ ರಜನೀಕಾಂತ್ ನಾಯಕ, ದೀಪಿಕಾ ಪಡುಕೋಣೆ ನಾಯಕಿ. ‘ಅವತಾರ್’, ‘ಅಡ್ವೇಂಚರ್ ಆಫ್ ಟಿನ್​​ಟಿನ್’ ಅಂಥಹಾ ಕೆಲವು ಸಿನಿಮಾಗಳು ಅದಾಗಲೇ ಈ ತಂತ್ರಜ್ಞಾನ ಬಳಸಿದ್ದವು. ‘ಕೊಚಡಿಯನ್’ ಸಿನಿಮಾನಲ್ಲಿ ಇದೇ ತಂತ್ರಜ್ಞಾನ ಬಳಸಲಾಗಿತ್ತಾದರೂ ಸಿನಿಮಾದ ಗುಣಮಟ್ಟ ಬಹಳ ಕಳಪೆಯಾಗಿತ್ತು. ಹಾಗಾಗಿ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಫ್ಲಾಪ್ ಆಯ್ತು.

ಸಿನಿಮಾದ ನಿರ್ಮಾಪಕರಾದ ಸುನಿಲ್ ಲುಲ್ಲ, ಸುನಂದ ಮುರಳಿ ಮನೋಹರ್, ಪ್ರಶಿತಾ ಚೌಧರಿ ಅವರುಗಳು ಭಾರಿ ನಷ್ಟ ಅನುಭವಿಸಿದ್ದರು. ಹಲವು ಬಾಕಿಗಳನ್ನು ಉಳಿಸಿಕೊಂಡಿದ್ದರು. ಕೆಲವರು ನಿರ್ಮಾಪಕರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಇದೇ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಆದೇಶ ಹೊರಡಿಸಿದ್ದು, ‘ಕೊಚಡಿಯನ್’ ನಿರ್ಮಾಪಕರು ಇನ್ನು ನಾಲ್ಕು ವಾರಗಳಲ್ಲಿ 2.50 ಕೋಟಿ ರೂಪಾಯಿ ಹಣವನ್ನು ನಿಗದಿತ ಸಂಸ್ಥೆಗೆ ನೀಡಬೇಕು ಎಂದಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *