ಮದುವೆಯಾಗಿ ಮಕ್ಕಳಿರುವ ವಿಷಯ ಮುಚ್ಚಿಟ್ಟು ಮತ್ತೊಂದು ವಿವಾಹ.!

ಮದುವೆಯಾಗಿ ಮಕ್ಕಳಿರುವ ವಿಷಯ ಮುಚ್ಚಿಟ್ಟು ಮತ್ತೊಂದು ವಿವಾಹ.!

‘ಹಣದ ವಿಷಯ ನನಗೆ ತಿಳಿದಿಲ್ಲ’– ಆರೋಪಿತ ಮಹಿಳೆ ಸ್ಪಷ್ಟಪಡಿಸಿದ್ದಾರೆ

ಹಾವೇರಿ : ರಾಣೆಬೆನ್ನೂರಿನಲ್ಲಿ ಮದುವೆ ವಂಚನೆಯ ಪ್ರಕರಣವೊಂದು ವರದಿಯಾಗಿದೆ. ತುಮ್ಕಿನಕಟ್ಟಿ ಗ್ರಾಮದ ರವಿಚಂದ್ರ ಎಂಬುವವರಿಗೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಮೂಲದ ರೇಖಾ ಎಂಬ ಮಹಿಳೆ ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ರೇಖಾ ಅವರಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದರೂ ರವಿಚಂದ್ರ ಅವರನ್ನು ಮದುವೆಯಾಗಿ 2.5 ಲಕ್ಷ ರೂಪಾಯಿ ವಧು ದಕ್ಷಿಣೆ ಪಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮದುವೆಯಾದ ಕೆಲವೇ ದಿನಗಳಲ್ಲಿ ರೇಖಾ ಅವರ ಮಕ್ಕಳು ಕರೆ ಮಾಡಿದಾಗ ಈ ಕೃತ್ಯ ಬಯಲಾಗಿದೆ. ನ್ಯಾಯಕ್ಕಾಗಿ ರವಿಚಂದ್ರ ಅವರು ಹಲಗೇರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರೋ ರೇಖಾ, ತಮಗೆ ಹಣದ ವಿಷಯ ತಿಳಿದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 2.5 ರಿಂದ 3 ಲಕ್ಷ ರೂಪಾಯಿ ಸ್ವೀಕರಿಸಿದ್ದಾರೆ ಎಂಬ ಆರೋಪವನ್ನು ನಿರಾಕರಿಸಿರುವ ಅವರು, ಹಣವನ್ನು ಯಾರು ತೆಗೆದುಕೊಂಡಿದ್ದಾರೆ ಎಂದು ಬ್ರೋಕರ್​ಗಳನ್ನು ಕೇಳುವಂತೆ ಹೇಳಿದ್ದಾರೆ. ಅಲ್ಲದೆ ಬ್ರೋಕರ್​ಗೆ ತಾನು ಹಿಂದೆಯೇ ಮದುವೆಯಾಗಿದ್ದೇನೆ ಎಂದು ತಿಳಿಸಿದ್ದಾಗಿ ಸ್ಪಷ್ಟಪಡಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *