ಕ್ಯಾನ್ಸರ್ ಚಿಕಿತ್ಸೆಯಲ್ಲಿ ಆಯುರ್ವೇದದ ಪಾತ್ರ? ಬಾಬಾ ರಾಮದೇವ್ ಅಭಿಪ್ರಾಯ.

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಆಯುರ್ವೇದದ ಪಾತ್ರ? ಬಾಬಾ ರಾಮದೇವ್ ಅಭಿಪ್ರಾಯ.

ಸಪೋರ್ಟಿವ್ ಡಯಟ್ ಮಹತ್ವ, ವೈದ್ಯರ ಸಲಹೆ ಅನಿವಾರ್ಯ.

ವಿಶ್ವಾದ್ಯಂತ ಕ್ಯಾನ್ಸರ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಕ್ಯಾನ್ಸರ್​ನಿಂದ ಜೀವ ಉಳಿಸುವುದು ದೊಡ್ಡ ಸವಾಲಿನ ಸಂಗತಿಯಾಗಿದೆ. ಹೆಚ್ಚಿನ ಕ್ಯಾನ್ಸರ್ ರೋಗಿಗಳು ಅಲೋಪತಿ ಚಿಕಿತ್ಸೆಯನ್ನು ಅವಲಂಬಿಸಿದ್ದಾರೆ. ಈಗೀಗ ಕೆಲವರು ಸಪೋರ್ಟಿವ್ ಟ್ರೀಟ್ಮೆಂಟ್​ಗಾಗಿ ಆಯುರ್ವೇದದತ್ತ ಮುಖ ಮಾಡುತ್ತಿದ್ದಾರೆ. ಕ್ಯಾನ್ಸರ್ ಗುಣಪಡಿಸುವ ಚಿಕಿತ್ಸೆಯಲ್ಲಿ ಆಯುರ್ವೇದ ವಿಧಾನಗಳು ಎಷ್ಟು ಉಪಯುಕ್ತ ಎಂಬುದನ್ನು ಬಾಬಾ ರಾಮದೇವ್ ತಿಳಿಸಿದ್ದಾರೆ.

ಕ್ಯಾನ್ಸರ್ ಚಿಕಿತ್ಸೆಯ ಸಮಯದಲ್ಲಿ ವೈದ್ಯಕೀಯ ಚಿಕಿತ್ಸೆ ಅತ್ಯಗತ್ಯವಾದರೂ, ರೋಗಿಗಳು ತಮ್ಮ ಆಹಾರ ಮತ್ತು ಜೀವನಶೈಲಿಯ ಬಗ್ಗೆಯೂ ಗಮನ ಹರಿಸಬೇಕು ಎಂದೆನ್ನುತ್ತಾರೆ ಬಾಬಾ ರಾಮದೇವ್. ರೋಗದಿಂದ ಗುಣಮುಖವಾಗಲು ಮತ್ತು ಅಡ್ಡಪರಿಣಾಮಗಳನ್ನು ಕಡಿಮೆ ಮಾಡಲು ಬೇಕಾದ ಚೈತನ್ಯ ಇದರಿಂದ ಸಿಗುತ್ತದೆ. ಆಯುರ್ವೇದ ಶಿಫಾರಸು ಮಾಡುವ ಕೆಲ ಆಹಾರಗಳನ್ನು ಸಪೋರ್ಟಿವ್ ನ್ಯೂಟ್ರಿಯೆಂಟ್​ಗಳಾಗಿ ನೋಡಲಾಗುತ್ತದೆ. ಇವು ಚಿಕಿತ್ಸೆಗೆ ಪರ್ಯಾಯ ಅಲ್ಲವಾದರೂ, ಟ್ರೀಟ್ಮೆಂಟ್ ಸಂದರ್ಭದಲ್ಲಿ ವೈದ್ಯರ ಸಲಹೆ ಮೇರೆಗೆ ಇವನ್ನು ತೆಗೆದುಕೊಳ್ಳುವುದು ಅನುಕೂಲವಾಗುತ್ತದೆ.

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಸಪೋರ್ಟಿವ್ ಡಯಟ್ ಯಾಕೆ ಮುಖ್ಯ?

ಕ್ಯಾನ್ಸರ್ ಚಿಕಿತ್ಸೆಯು ರೋಗಿಯ ರೋಗನಿರೋಧಕ ಶಕ್ತಿಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಹಲವಾರು ಅಡ್ಡಪರಿಣಾಮಗಳನ್ನು ಸಹ ಗಮನಿಸಬಹುದು. ಅಂತಹ ಸಂದರ್ಭಗಳಲ್ಲಿ, ಆಯುರ್ವೇದವು ಈ ಅಡ್ಡಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅನೇಕ ರೋಗಿಗಳಿಗೆ ಅಜೀರ್ಣತೆ, ಹಸಿವಿನ ಕೊರತೆ, ಸುಸ್ತು ಇತ್ಯಾದಿ ಸಮಸ್ಯೆಗಳು ಅನುಭವವಾಗುತ್ತವೆ. ಆದ್ದರಿಂದ, ಕ್ಯಾನ್ಸರ್ ಚಿಕಿತ್ಸೆಯ ಸಮಯದಲ್ಲಿ ಸೇವಿಸಿದರೆ ಪ್ರಯೋಜನಕಾರಿಯಾಗಬಹುದಾದ ಕೆಲವು ಆಯುರ್ವೇದೀಯ ಆಹಾರಗಳಿವೆ. ಇವನ್ನು ಸೇವಿಸುವುದರಿಂದ ಕ್ಯಾನ್ಸರ್ ಚಿಕಿತ್ಸೆಯಲ್ಲಿನ ಅಡ್ಡಪರಿಣಾಮಗಳು ಕಾಣಿಸುವುದಿಲ್ಲ. ಈ ಆಹಾರಗಳು ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ದೌರ್ಬಲ್ಯವನ್ನು ನಿವಾರಿಸಲು ನೆರವಾಗುತ್ತದೆ.

ಆಯುರ್ವೇದದಲ್ಲಿ ಈ ವಿಷಯಗಳು ಪ್ರಯೋಜನಕಾರಿ

ಆಯುರ್ವೇದ ಮತ್ತು ನ್ಯೂಟ್ರಿಶನ್ ಎಕ್ಸ್​ಪರ್ಟ್​ಗಳ ಪ್ರಕಾರ, ಈ ಕೆಳಕಾಣಿಸಿರುವ ಆಹಾರಗಳು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಲು ಸಹಾಯ ಮಾಡುತ್ತವೆ:

  • ಬಾರ್ಲಿ ರಸ
  • ಗಿಲೋಯ್ ರಸ
  • ಮಸೂರ ಮತ್ತು ದ್ವಿದಳ ಧಾನ್ಯಗಳು
  • ಹಸಿರು ತರಕಾರಿಗಳು
  • ವೀಟ್ ಗ್ರಾಸ್ ಪೌಡರ್
  • ಬೇವಿನ ರಸ

ವಸ್ತುಗಳನ್ನು ತಿನ್ನಬಾರದು

  • ಸಕ್ಕರೆ
  • ಹುರಿದ ಆಹಾರ
  • ಕೆಂಪು ಮಾಂಸ
  • ಅಧಿಕ ಉಪ್ಪು ಸೇವನೆ

ಮುಂಚಿತವಾಗಿ ವೈದ್ಯರನ್ನು ಸಂಪರ್ಕಿಸಿ

ಆಯುರ್ವೇದದಲ್ಲಿ ಉಲ್ಲೇಖಿಸಲಾದ ಈ ಪದಾರ್ಥಗಳು ಕ್ಯಾನ್ಸರ್ ಚಿಕಿತ್ಸೆಗೆ ಪರ್ಯಾಯವಲ್ಲ. ಅವುಗಳನ್ನು ನಿಮ್ಮ ಆಹಾರದಲ್ಲಿ ಸಪೋರ್ಟಿವ್ ಕೇರ್ ಆಗಿ ಮಾತ್ರ ಸೇರಿಸಿಕೊಳ್ಳಬಹುದು. ಆದಾಗ್ಯೂ, ಅವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *