ರಾಜಮೌಳಿಗೆ ಇಷ್ಟವಾದ ಸಿನಿಮಾ ಯಾವುದು?

ರಾಜಮೌಳಿಗೆ ಇಷ್ಟವಾದ ಸಿನಿಮಾ ಯಾವುದು?

“ಬೆನ್ ಹರ್, ಮಾಯಾಬಜಾರ್, ಇಂಡಿಯಾನಾ ಜೋನ್ಸ್ ಮತ್ತು ವೆಬ್ ಸರಣಿಗಳು ಪ್ರೇರಣೆ”.

ಎಲ್ಲ ಸಿನಿಮಾ ಕರ್ಮಿಗಳು ಅವರಿಗೆ ಇಷ್ಟವಾದ ಸಿನಿಮಾಗಳು, ಅವರು ಸ್ಪೂರ್ತಿ ಪಡೆದ ಸಿನಿಮಾಗಳು, ಅವರು ಸಿನಿಮಾ ರಂಗಕ್ಕೆ ಕಾಲಿಡಲು ಸ್ಪೂರ್ತಿ ನೀಡಿದ ಸಿನಿಮಾಗಳು ಇದ್ದೇ ಇರುತ್ತವೆ. ರಾಜಮೌಳಿಯ ಸಿನಿಮಾಗಳನ್ನು ನೋಡಿ ಇಂದು ಹಲವಾರು ಮಂದಿ ಚಿತ್ರರಂಗಕ್ಕೆ ಬಂದಿದ್ದಾರೆ. ಆದರೆ ರಾಜಮೌಳಿಗೆ ಇಷ್ಟವಾದ ಸಿನಿಮಾಗಳು ಯಾವುವು? ಯಾವ ಸಿನಿಮಾಗಳನ್ನು ನೋಡಿ ಅವರು ಸಿನಿಮಾ ರಂಗಕ್ಕೆ ಬಂದರು? ಯಾವ ಶೋಗಳು ಅವರಿಗೆ ಬಹಳ ಇಷ್ಟ? ಮಾಹಿತಿ ಇಲ್ಲಿದೆ…

ರಾಜಮೌಳಿ ಅವರೇ ಹೇಳಿಕೊಂಡಿರುವಂತೆ ಅವರು ಬಹಳ ಸಿನಿಮಾಗಳನ್ನು ನೋಡುತ್ತಾರಂತೆ. ಒಳ್ಳೆಯ ಸಿನಿಮಾಗಳನ್ನು ಖಂಡಿತ ನೋಡುತ್ತೀನಿ ಎಂದು ಹಿಂದೆ ಅವರು ಹೇಳಿದ್ದರು. ರಾಜಮೌಳಿ ಅವರಿಗೆ ಹಲವು ಇಷ್ಟದ ಸಿನಿಮಾಗಳು ಇವೆಯಂತೆ. ಭಾರಧ್ವಜ ರಂಗನ್ ಅವರ ಸಂದರ್ಶನದಲ್ಲಿ ಅವರು ಹೇಳಿರುವಂತೆ, ‘ಬೆನ್ ಹರ್’ ಸಿನಿಮಾ ರಾಜಮೌಳಿಯ ಆಲ್​​ಟೈಮ್ ಫೆವರೇಟ್ ಸಿನಿಮಾಗಳಲ್ಲಿ ಒಂದಂತೆ.

‘ಬೆನ್ ಹರ್’ 1959 ರಲ್ಲಿ ಬಿಡುಗಡೆ ಆಗಿದ್ದ ಹಾಲಿವುಡ್ ಸಿನಿಮಾ. ಈ ಸಿನಿಮಾದ ಆಕ್ಷನ್, ಸಿನಿಮಾನಲ್ಲಿರುವ ರಾಜಕೀಯ ರಾಜಮೌಳಿಗೆ ಬಹಳ ಇಷ್ಟವಂತೆ. ಹಲವು ಬಾರಿ ಅವರು ಅವರು ‘ಬೆನ್ ಹರ್’ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಅದರ ಬಳಿಕ ತೆಲುಗಿನ ಹಳೆಯ ಸಿನಿಮಾ ‘ಮಾಯಾಬಜಾರ್’ ಸಹ ರಾಜಮೌಳಿಯ ಅಚ್ಚುಮೆಚ್ಚಿನ ಸಿನಿಮಾಗಳಲ್ಲಿ ಒಂದು. ಈ ಸಿನಿಮಾ 1957 ರಲ್ಲಿ ಬಿಡುಗಡೆ ಆಗಿದ್ದು ಕೆವಿ ರೆಡ್ಡಿ ನಿರ್ದೇಶಿಸಿರುವ ಈ ಸಿನಿಮಾ ಭಾರತೀಯ ಸಿನಿಮಾ ಇತಿಹಾಸದ ಕಲ್ಟ್ ಸಿನಿಮಾಗಳಲ್ಲಿ ಒಂದಾಗಿದೆ.

ಇವುಗಳ ಹೊರತಾಗಿ ರಾಜಮೌಳಿ ಅವರಿಗೆ ಸ್ಟಿಫನ್ ಸ್ಪೀಲ್​​ಬರ್ಗ್ ಅವರ ಇಂಡಿಯಾನಾ ಜೋನ್ಸ್ ಸರಣಿ ಇಷ್ಟವಂತೆ. ಬಹಳ ವರ್ಷಗಳ ಹಿಂದೆ ಬಂದಿದ್ದ ಸ್ಪೈಡರ್​ಮ್ಯಾನ್ ಸಿನಿಮಾ ಸಹ ಇಷ್ಟವಾಗಿತ್ತಂತೆ. ಇವೆಲ್ಲವೂ ಅವರು ಸಿನಿಮಾದ ಬಗ್ಗೆ ಕುತೂಹಲ ಮೂಡಿಸಿದ್ದವಂತೆ. ಇನ್ನು ರಾಜಮೌಳಿ ವೆಬ್ ಸರಣಿಗಳನ್ನು ಸಹ ಇಷ್ಟಪಟ್ಟು ನೋಡುತ್ತಾರಂತೆ.

ರಾಜಮೌಳಿ ಪ್ರಸ್ತುತ ‘ವಾರಣಾಸಿ’ ಸಿನಿಮಾ ನಿರ್ದೇಶಿಸುತ್ತಿದ್ದು, ಈ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡುವ ಮುಂಚೆ ನೀಡಿದ್ದ ಸಂದರ್ಶನದಲ್ಲಿ, ತಾವು ‘ಇಂಡಿಯಾನಾ ಜೋನ್ಸ್’ ಸಿನಿಮಾದಿಂದ ಪ್ರೇರಣೆಗೊಂಡು ಈ ಸಿನಿಮಾ ಮಾಡುತ್ತಿರುವುದಾಗಿ ಹೇಳಿದ್ದರು. ಆದರೆ ಕಾಲಾಂತರದಲ್ಲಿ ಸಿನಿಮಾದ ಚಿತ್ರಕತೆಯನ್ನು ಭಾರತೀಯ ಪುರಾಣಗಳಿಗೆ ಹೊಂದಿಕೆ ಆಗುವಂತೆ ಬದಲಾಯಿಸಿದಂತಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *