ಯೋಗಿ 50ನೇ ಸಿನಿಮಾಗೆ ‘King’ ಟೈಟಲ್.

ಯೋಗಿ 50ನೇ ಸಿನಿಮಾಗೆ 'King' ಟೈಟಲ್.

ರಗಡ್ ಅವತಾರದಲ್ಲಿ ಯಶಸ್ವಿ ನಾಯಕ.

ಯೋಗಿ ಅವರ ವೃತ್ತಿ ಜೀವನ ಸಾಕಷ್ಟು ಏರಿಳಿತಗಳಿಂದ ಕೂಡಿದೆ. ಇಷ್ಟು ದಿನ ಒಂದು ಲೆಕ್ಕವಾದರೆ, ಇನ್ಮುಂದೆ ಬೇರೆಯದೇ ಲೆಕ್ಕ ಶುರು ಎಂದು ಅವರು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ. ಅವರ ಐವತ್ತನೇ ಸಿನಿಮಾ ಅನೌನ್ಸ್ ಆಗಿದೆ. ಈ ಸಿನಿಮಾಗೆ ‘ಕಿಂಗ್’ ಟೈಟಲ್ ಇಡಲಾಗಿದೆ. ಈ ಸಿನಿಮಾ ಟೈಟಲ್ ಗಮನ ಸೆಳೆಯೋ ರೀತಿಯಲ್ಲಿ ಇದೆ. ಟೀಸರ್ ಕೂಡ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಭಾರಿ ಬಜೆಟ್​​ನಲ್ಲಿ ಚಿತ್ರ ಸಿದ್ಧವಾಗುತ್ತಿದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.

ವೃತ್ತಿ ಜೀವನದಲ್ಲಿ ಯೋಗಿ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಹಲವು ರೀತಿಯ ಪಾತ್ರಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಈಗ ಅವರು ‘ಕಿಂಗ್’ ಸಿನಿಮಾದಲ್ಲಿ ಸಖತ್ ರಗಡ್ ಅವತಾರ ತಾಳಲು ರೆಡಿ ಆಗಿದ್ದಾರೆ. ಈ ಚಿತ್ರದ ಟೀಸರ್ ರಾ ಆಗಿದೆ. ಶಿವರಾಜ್​ಕುಮಾರ್ ಅವರು ಟೀಸರ್ ರಿಲೀಸ್ ಮಾಡಿ ತಂಡಕ್ಕೆ ಶುಭಕೋರಿದ್ದಾರೆ.

‘ಯೋಗಿ ನಂಗೆ ತುಂಬಾನೇ ಆಪ್ತ. ಅವರು ನನ್ನ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಪುನೀತ್ ಜೊತೆ ತುಂಬಾನೇ ಆಪ್ತವಾಗಿದ್ದರು. ಹೀಗಾಗಿ, ಯೋಗಿನ ನೋಡಿದಾಗೆಲ್ಲ ಅಪ್ಪುನ ನೆನಪಾಗುತ್ತದೆ. ಈ ಸಿನಿಮಾ ಗೆಲ್ಲಲೇಬೇಕು. ಈ ಚಿತ್ರದ ಸಕ್ಸಸ್ ಪಾರ್ಟಿಯಲ್ಲಿ ನಾನು ಭಾಗಿ ಆಗುತ್ತೇನೆ’ ಎಂದು ಅವರು ಭರವಸೆ ನೀಡಿದ್ದಾರೆ.

‘ಕಿಂಗ್’ ಚಿತ್ರದ ಬಜೆಟ್ ದೊಡ್ಡದು. ಈ ಬಗ್ಗೆ ಯೋಗಿ ಆತಂಕ ವ್ಯಕ್ತಪಡಿಸಿದರು. ಆದರೆ, ನಿರ್ಮಾಪಕರು ಧೈರ್ಯ ತುಂಬಿದರಂತೆ. ಹೀಗಾಗಿ, ಅವರು ಈ ಸಿನಿಮಾ ಮಾಡಲು ಒಪ್ಪಿಕೊಂಡರು. ಮುಂದಿನ ದಿನಗಳಲ್ಲಿ ದೊಡ್ಡ ಸಿನಿಮಾಗಳನ್ನು ಮಾಡುವ ಆಲೋಚನೆ ಅವರಿಗೆ ಇದೆ.

ಜಾಕ್ ಅವರು ‘ಕಿಂಗ್’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.ಈ ಚಿತ್ರವನ್ನು ಮಹೇಂದರ್, ಸಿದ್ದೇಶ್, ಸಂತೋಶ್ ಬಸವರಾಜ್ ಮೊದಲಾದವರು ನಿರ್ದೇಶನ ಮಾಡುತ್ತಿದ್ದಾರೆ. ಶಶಾಂಕ್ ಶೇಷಗಿರಿ ಈ ಚಿತ್ರವನ್ನು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸಾಗರ್ ಎಂಬ ಛಾಯಾಗ್ರಹಣ ಚಿತ್ರಕ್ಕಿದೆ. ಇದೇ ಟೈಟಲ್ ಅಲ್ಲಿ ಬಾಲಿವುಡ್​​ನಲ್ಲೂ ಸಿನಿಮಾ ಬರುತ್ತಿದೆ. ‘ಅದಕ್ಕೂ ಇದಕ್ಕೂ ಸಂಬಂಧ ಇಲ್ಲ. ನಾವು ಮೂರು ವರ್ಷಗಳ ಹಿಂದೆಯೇ ಚಿತ್ರಕ್ಕೆ ಟೈಟಲ್ ಇಟ್ಟಿದ್ದೇವೆ’ ಎನ್ನುತ್ತಾರೆ ನಿರ್​ದೇಶಕ ಜಾಕ್. ಈ ಚಿತ್ರ ಕನ್ನಡ, ತಮಿಳು ಹಾಗೂ ತೆಲುಗಿನಲ್ಲಿ ಬರುತ್ತಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *