ಬೆಂಗಳೂರಿನ 10 ಕೆರೆಗಳಲ್ಲಿ ಬೋಟಿಂಗ್ ಪ್ರಾರಂಭ: GBA ಹೊಸ ಯೋಜನೆ.

ಬೆಂಗಳೂರಿನ 10 ಕೆರೆಗಳಲ್ಲಿ ಬೋಟಿಂಗ್ ಪ್ರಾರಂಭ: GBA ಹೊಸ ಯೋಜನೆ.

ಪರಿಸರ ಸ್ನೇಹಿ ಬೋಟಿಂಗ್ ಗುರಿ.

ಬೆಂಗಳೂರು: ಬೆಂಗಳೂರು ಒಂದು ಕಾಲದಲ್ಲಿ ಕೆರೆಗಳಿಂದಲೇ ಹೆಸರುವಾಸಿಯಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಕೆರೆಗಳು ನಿರ್ವಹಣೆಯ ಕೊರತೆಯಿಂದ ಕಲುಷಿತಗೊಂಡು, ಡ್ರೈನೇಜ್ ನೀರು ಸೇರಿ ಅವನತಿಯ ಹಾದಿ ಹಿಡಿದಿವೆ. ಈ ಹಿನ್ನೆಲೆಯಲ್ಲಿ, ಜಿಬಿಎ ಬೆಂಗಳೂರಿನ ಕೆರೆಗಳ ನಿರ್ವಹಣೆಗೆ ಹೊಸ ಯೋಜನೆಯನ್ನು ಪ್ರಸ್ತಾಪಿಸಿದೆ. ಈ ಯೋಜನೆಯು ನಗರದ ಪ್ರಮುಖ 10 ಕೆರೆಗಳಲ್ಲಿ ಬೋಟಿಂಗ್ ವ್ಯವಸ್ಥೆಯನ್ನು ಜಾರಿಗೆ ತರುವ ಗುರಿ ಹೊಂದಿದೆ.

ಬೆಂಗಳೂರು ನಗರದಲ್ಲಿ ಒಟ್ಟು 183 ಕೆರೆಗಳಿದ್ದು, ಜಿಬಿಎ ಆರಂಭಿಕ ಹಂತದಲ್ಲಿ ಹಲಸೂರು ಲೇಕ್, ಕಗ್ಗದಾಸಪುರ ಕೆರೆ, ನಾಯಂಡಹಳ್ಳಿ, ಸ್ಯಾಂಕಿ, ಯಲಹಂಕ, ರಾಚೇನಹಳ್ಳಿ, ವೆಂಗಯ್ಯನಕೆರೆ, ಬೇಗೂರು, ರಾಮಪುರ ಮತ್ತು ಮಡಿವಾಳ ಕೆರೆಗಳನ್ನು ಬೋಟಿಂಗ್ ಯೋಜನೆಗೆ ಆಯ್ಕೆ ಮಾಡಿದೆ. ಈ ಯೋಜನೆಯ ಅನುಷ್ಠಾನಕ್ಕಾಗಿ ಜಿಬಿಎ, ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದೊಂದಿಗೆ ಸಹಭಾಗಿತ್ವ ಮಾಡಿಕೊಂಡಿದೆ.

ಪರಿಸರಸ್ನೇಹಿ ಬೋಟಿಂಗ್​ಗೆ ಆದ್ಯತೆ

ಈ ಬೋಟಿಂಗ್ ವ್ಯವಸ್ಥೆಯನ್ನು ಪರಿಸರ ಸ್ನೇಹಿ ರೀತಿಯಲ್ಲಿ, ಅಂದರೆ ಇಂಧನ ರಹಿತ ಮತ್ತು ಮಾಲಿನ್ಯ ರಹಿತವಾಗಿ ನಡೆಸಲು ಉದ್ದೇಶಿಸಲಾಗಿದೆ. ಇದರಿಂದ ಕೆರೆಗಳಲ್ಲಿರುವ ಜಲಚರಗಳಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಜಿಬಿಎ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ಕೆರೆಗಳಿಗೆ ಹೆಚ್ಚಿನ ಜನರು ಭೇಟಿ ನೀಡುವಂತೆ ಮಾಡಿ ಅವುಗಳ ನಿರ್ವಹಣೆಗೆ ಉತ್ತೇಜನ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಮಲ್ಲೇಶ್ವರಂನ ಐತಿಹಾಸಿಕ ಸ್ಯಾಂಕಿ ಕೆರೆಯಲ್ಲೂ ಬೋಟಿಂಗ್ ವ್ಯವಸ್ಥೆಗೆ ಜಿಬಿಎ ಸಿದ್ಧತೆ ನಡೆಸುತ್ತಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *