ಹಂಪಿ ಉತ್ಸವ 2026ಕ್ಕೆ ಭವ್ಯ ಸಜ್ಜು.

ಹಂಪಿ ಉತ್ಸವ 2026ಕ್ಕೆ ಭವ್ಯ ಸಜ್ಜು.

50 ಸಾವಿರ ಜನರಿಗೆ ಆಸನ ವ್ಯವಸ್ಥೆಯ ಮಹಾ ವೇದಿಕೆ.

ಬಳ್ಳಾರಿವಿಜಯನಗರ ಸಾಮ್ರಾಜ್ಯದ ಭವ್ಯ ಇತಿಹಾಸವನ್ನು ಸ್ಮರಿಸುವ ಹಂಪಿ ಉತ್ಸವ 2026ಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದಿನಿಂದ ಮೂರು ದಿನಗಳ ಕಾಲ ಉತ್ಸವ ನಡೆಯಲಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯಲ್ಲಿ ಭವ್ಯ ವೇದಿಕೆ ಸಿದ್ದಗೊಂಡಿದೆ.

ಎಂ.ಪಿ. ಪ್ರಕಾಶ್ ವೇದಿಕೆಯನ್ನು ನಿರ್ಮಿಸಿದ್ದು, ಶ್ರೀಕೃಷ್ಣ ದೇವರಾಯ ಆಳ್ವಿಕೆಯ ದರ್ಬಾರ್ ಕಲಾಕೃತಿ ನಿರ್ಮಿಸಲಾಗಿದ್ದು, ಜನರ ಕಣ್ಮನ ಸೆಳೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಇಂದು ಸಂಜೆ 6 ಗಂಟೆಗೆ ಹಂಪಿ ಉತ್ಸವಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆಯಿದ್ದು, ಆಸನ ವ್ಯವಸ್ಥೆ ಮಾಡಲಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *