ಪ್ರೇಮಿಗಳ ದಿನಕ್ಕೆ ಕತ್ತೆ ಮದುವೆ.

ಪ್ರೇಮಿಗಳ ದಿನಕ್ಕೆ ಕತ್ತೆ ಮದುವೆ.

ವಾಟಾಳ್ ನಾಗರಾಜ್‌ನ ವಿಭಿನ್ನ ಆಚರಣೆ.

ಬೆಂಗಳೂರು: ಇಂದು ಪ್ರೇಮಿಗಳ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಪ್ರತಿ ವರ್ಷದಂತೆ ಈ ಬಾರಿಯೂ ಕತ್ತೆಗಳಿಗೆ ಮದುವೆ ಮಾಡಿಸುವ ಮೂಲಕ ವಿಶಿಷ್ಟವಾಗಿ ಆಚರಿಸಿದ್ದಾರೆ. ನಗರದ ಸೆಂಟ್ರಲ್ ರೈಲ್ವೆ ನಿಲ್ದಾಣದ ಬಳಿ ಕತ್ತೆಗಳ ಮೆರವಣಿಗೆ ನಡೆಸಿದೆ. ಎರಡು ಕತ್ತೆಗಳಿಗೆ ಪೂಜೆ ಸಲ್ಲಿಸಿ, ಸಾಂಪ್ರದಾಯಿಕವಾಗಿ ಹೂವಿನ ಹಾರ ಹಾಕಿ ತಾಳಿ ಕಟ್ಟಿದ್ದಾರೆ. ಮದುವೆಯ ಶಾಸ್ತ್ರಗಳು ನಡೆಯುತ್ತಿದ್ದಾಗಲೇ ‘ಗಂಡು ಕತ್ತೆ’ ಹಠಾತ್ತನೆ ಅಲ್ಲಿಂದ ಓಡಿಹೋಗಿದೆ. ಇದನ್ನು ಕಂಡು ನೆರೆದಿದ್ದ ಸಾರ್ವಜನಿಕರು ನಗೆಗಡಲಲ್ಲಿ ತೇಲಿದ್ದಾರೆ. ನಂತರ ಕತ್ತೆಯನ್ನು ಹಿಡಿದು ತಂದು ಮದುವೆ ಪ್ರಕ್ರಿಯೆ ಪೂರ್ಣಗೊಳಿಸಲಾಯಿತು. “ಪ್ರೇಮ ಎನ್ನುವುದು ಕೇವಲ ಮನುಷ್ಯರಿಗಷ್ಟೇ ಸೀಮಿತವಲ್ಲ, ಅದು ಪ್ರಾಣಿ-ಪಕ್ಷಿಗಳಿಗೂ ಇದೆ. ಕತ್ತೆ ಬಹಳ ಪವಿತ್ರವಾದ ಪ್ರಾಣಿ, ಪುರಾಣಗಳಲ್ಲೂ ಕತ್ತೆಯ ಉಲ್ಲೇಖಗಳಿವೆ ಎಂದು ಹೇಳಿದ್ದಾರೆ. ಪ್ರೇಮ ವಿವಾಹವಾಗುವವರಿಗೆ ಸರ್ಕಾರ 3 ಲಕ್ಷ ರೂಪಾಯಿ ಪ್ರೋತ್ಸಾಹಧನ ನೀಡಬೇಕು ಮತ್ತು ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕು,” ಎಂದು ಒತ್ತಾಯಿಸಿದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *